ಪತ್ನಿ, ಮಗಳ ಹತ್ಯೆಗೈದು ಶವದ ಜೊತೆ ಎರಡು ರಾತ್ರಿ ಕಳೆದ ಉದ್ಯಮಿ

ಮೈಸೂರು, ಮೇ 25 : ವ್ಯಕ್ತಿಯೊಬ್ಬ ಕೌಟುಂಬಿಕ ಕಲಹ ಹಿನ್ನಲೆ ತನ್ನ ಪತ್ನಿ ಹಾಗೂ ಮಗಳನ್ನು ಭೀಕರ ಹತ್ಯೆಗೈದು, ಎರಡು ದಿನ ಶವದೊಂದಿಗೆ ಇದ್ದು, ತಾನು ಆತ್ಮಹತ್ಯೆಗೆ ಯತ್ನಿಸಿರುವ ಹೃದಯವಿದ್ರಾವಕ ಘಟನೆ ಮೈಸೂರಿನಲ್ಲಿ ನಡೆದಿದೆ.

ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಪ್ರಜ್ವಲ್ (45) ನೀಚ ಕೃತ್ಯವೆಸಗಿದ ಪಾಪಿ ಪತಿ. ಪತ್ನಿ ಸವಿತ(39) ಹಾಗೂ ಮಗಳು ಸಿಂಚನ (11) ಮೃತಪಟ್ಟವರು. ಮೂಲತಃ ನಂಜನಗೂಡಿನ ನಿವಾಸಿಯಾಗಿದ್ದ ಪ್ರಜ್ವಲ್ ಡಿಸೈನ್ ಇಂಜಿನಿಯರ್ ಆಗಿದ್ದರು.

ಮೃತ ಸವಿತಾ ಮೂಲತಃ ಕೆ ಆರ್ ಪೇಟೆ ನಿವಾಸಿಯಾಗಿದ್ದು, ಮೈಸೂರಿನಲ್ಲಿ ವಿಜಯನಗರದ ನಾಲ್ಕನೇ ಹಂತದಲ್ಲಿ ವಾಸವಿದ್ದರು. ಕಳೆದೊಂದು ವರ್ಷದ ಹಿಂದೆ ಕೆಲಸಕ್ಕೆ ರಾಜೀನಾಮೆ ನೀಡಿದ್ದ ಪ್ರಜ್ವಲ್ ಸ್ವಂತ ವ್ಯವಹಾರ ಮಾಡಲು ಮುಂದಾಗಿದ್ದರು.

Business man killed his daughter and wife and tried to commit suicide.

ಇದರಿಂದ ಇಬ್ಬರ ನಡುವೆ ಕೌಟುಂಬಿಕ ಕಲಹ ಉಂಟಾದ ಹಿನ್ನೆಲೆ ಪತಿ ಪ್ರಜ್ವಲ್ ಎರಡು ದಿನದ ಹಿಂದೆ ರಾತ್ರಿ ಪತ್ನಿ ಹಾಗೂ ಮಗಳ ಕತ್ತು ಕೊಯ್ದು ಕೊಂದಿದ್ದಾನೆ. ಬಳಿಕ ನಿನ್ನೆ ರಾತ್ರಿ ಮನೆಗೆ ಕರೆ ಮಾಡಿ ತಾನು ಮಾಡಿದ ನೀಚಕೃತ್ಯ ತಿಳಿಸಿ, ನಂತರ ತಾನೂ ಸಹ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಕೂಡಲೇ ಈತನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+