ಎತ್ತಿನಗಾಡಿ ಓಟ ಗ್ರಾಮೀಣ ಜನರ ಕ್ರೇಜ್ ಆಗಿದ್ದೇಗೆ?
ಮೈಸೂರು, ಜನವರಿ 14: ಗ್ರಾಮೀಣ ಪ್ರದೇಶದ ರೋಮಾಂಚನಕಾರಿ ಕ್ರೀಡೆಯಲ್ಲಿ ಎತ್ತಿನಗಾಡಿ ಓಟವೂ ಒಂದಾಗಿದೆ. ಹಿಂದಿನ ಕಾಲದಲ್ಲಿ ಸದಾ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ ರೈತರು ಮನರಂಜನೆ ಮತ್ತು ಸಾಹಸ ಪ್ರದರ್ಶನಕ್ಕಾಗಿ ಹುಟ್ಟುಹಾಕಿದ ಎತ್ತಿನಗಾಡಿ ಓಟ ಇವತ್ತಿಗೂ ಗ್ರಾಮೀಣ ಭಾಗದ ಪ್ರಮುಖ ಕ್ರೀಡೆಯಾಗಿ ಗಮನಸೆಳೆಯುತ್ತಿದೆ. ಈಗ ಮೊದಲಿಗೆ ಹೋಲಿಸಿದರೆ ಒಂದಷ್ಟು ಬದಲಾವಣೆಗಳೊಂದಿಗೆ ಇನ್ನಷ್ಟು ವೈಭವತೆ ಪಡೆದುಕೊಂಡಿರುವುದು ನಿಜಕ್ಕೂ ಖುಷಿಪಡುವ ಸಂಗತಿಯಾಗಿದೆ.
ಜಾತ್ರೆಯ ಸಮಯದಲ್ಲಿ ಎತ್ತಿನಗಾಡಿ ಓಟ ಅರ್ಥಾತ್ ಬಂಡಿ ಉತ್ಸವವನ್ನು ನಡೆಸುವ ಮೂಲಕ ಎತ್ತಿನಗಾಡಿ ಓಟವನ್ನು ಕೆಲವು ಜಾತ್ರೆಯಲ್ಲಿ ನಡೆಯಲೇ ಬೇಕೆಂಬ ಸಂಪ್ರದಾಯವನ್ನು ಮಾಡಿರುವುದು ಅವು ಉಳಿದು ಬೆಳೆಯಲಿ ಎಂಬ ಉದ್ದೇಶದಿಂದ ಎಂಬುದನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ. ತಮ್ಮೊಂದಿಗೆ ಕೃಷಿ ಚಟುವಟಿಕೆಯಲ್ಲಿ ಹೆಗಲಿಗೆ ಹೆಗಲುಕೊಟ್ಟು ದುಡಿದ ಎತ್ತುಗಳು ಶಕ್ತಿ ಸಾಮರ್ಥ್ಯದಲ್ಲಿ ಕಡಿಮೆಯಿಲ್ಲ ಎಂಬುದನ್ನು ತೋರಿಸುವ ಸಲುವಾಗಿ ಎತ್ತಿನಗಾಡಿ ಓಟವನ್ನು ಹಿಂದಿನ ಕಾಲದವರು ನಡೆಸುತ್ತಿದ್ದರು. ಆ ಮೂಲಕ ಮನರಂಜನೆ ಪಡೆಯುತ್ತಿದ್ದರು.

ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲುವು ಪಡೆಯುವುದು ಸುಲಭವಲ್ಲ. ಎತ್ತಿನಗಾಡಿಯನ್ನು ಓಡಿಸುವುದು ಒಂದು ರೀತಿಯ ಸಾಹಸವೇ. ಇದಕ್ಕೆ ಪರಿಣತಿ ಬೇಕಾಗುತ್ತದೆ. ತಮ್ಮದೇ ಎತ್ತುಗಳ ಬಂಡಿಯ ಮೂಲಕ ಸ್ಪರ್ಧಾ ಸ್ಥಳಕ್ಕೆ ತೆರಳಿ ಅಲ್ಲಿ ಓಡಿ ಗೆಲುವು ಪಡೆಯುವ ಮೂಲಕ ಹತ್ತೂರುಗಳಲ್ಲಿ ಹೆಸರು ಪಡೆಯುತ್ತಿದ್ದ ಕಾಲವಿತ್ತು. ಇವತ್ತಿಗೂ ಬಹಳಷ್ಟು ರೈತರು ಬರೀ ಕೃಷಿ ಚಟುವಟಿಕೆ ಮಾತ್ರವಲ್ಲದೆ, ಎತ್ತಿನಗಾಡಿ ಓಡಿಸಿ ಗೆಲುವು ಸಾಧಿಸುವ ಮೂಲಕ ಸಾಧನೆ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ.
ಎತ್ತಿನಗಾಡಿ ಓಟಕ್ಕೆ ರಾಸುಗಳ ತಯಾರು ಸುಲಭವಲ್ಲ
ಹಾಗೆನೋಡಿದರೆ ಎತ್ತುಗಳನ್ನು ಗಾಡಿ ಸಹಿತ ಓಡಿಸುವುದು ಒಂದು ರೀತಿಯ ಸಾಹಸ ಮತ್ತು ರೋಮಾಂಚನಕಾರಿ. ಇದರಲ್ಲಿ ಪರಿಣತಿ ಬೇಕಾಗುತ್ತದೆ. ಜತೆಗೆ ಎತ್ತುಗಳು ಕೂಡ ದಷ್ಠಪುಷ್ಠವಾಗಿ ಆರೋಗ್ಯವಾಗಿರುವಂತೆ ನೋಡಿಕೊಳ್ಳಬೇಕಾಗುತ್ತದೆ. ಎತ್ತುಗಳು ವೇಗವಾಗಿ ಓಡುವಂತೆ ಮಾಡುವುದು ಗಾಡಿ ಓಡಿಸುವವರ ಕ್ಷಮತೆಯಾಗಿರುತ್ತದೆ. ಎತ್ತಿನ ಬಂಡಿಯನ್ನು ಓಡಿಸುವ ಜಾಕಿಗಳು ಕೂಡ ಪರಿಣತಿ ಹೊಂದಿರಬೇಕಾಗುತ್ತದೆ. ಎತ್ತುಗಳನ್ನು ವೇಗವಾಗಿ ಓಡುವಂತೆ ಪ್ರೇರೇಪಿಸುತ್ತಾ ನಿರ್ಧಿಷ್ಟ ಗುರಿಯನ್ನು ಅತಿ ಕಡಿಮೆ ಸಮಯದಲ್ಲಿ ತಲುಪಬೇಕಾಗುತ್ತದೆ. ಹೀಗೆ ತಲುಪಿದ ಎತ್ತಿನಗಾಡಿ ಮತ್ತು ಅದನ್ನು ಓಡಿಸಿದವರು ಚಾಂಪಿಯನ್ ಆಗುತ್ತಾರೆ.
ಎತ್ತಿನಗಾಡಿ ಓಟಕ್ಕೆ ರಾಸುಗಳನ್ನು ತಯಾರು ಮಾಡುವುದು ಕಷ್ಟದ ಕೆಲಸವೇ.. ಅವುಗಳಿಗೆ ತರಬೇತಿ ನೀಡಬೇಕಾಗುತ್ತದೆ. ಜತೆಗೆ ಅವುಗಳನ್ನು ಜತನದಿಂದ ನೋಡಿಕೊಳ್ಳಬೇಕಾಗುತ್ತದೆ. ಇಷ್ಟೆಲ್ಲ ಮಾಡಿದ ಮೇಲೆ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದರೆ ಅವು ಪ್ರಶಂಸೆಗೆ ಪಾತ್ರವಾಗುತ್ತವೆ. ಮುಂದೆ ಎತ್ತಿನಗಾಡಿ ಸ್ಪರ್ಧೆ ಎಲ್ಲೆಲ್ಲಿ ನಡೆಯುತ್ತವೆಯೋ ಅಲ್ಲಿಗೆ ತೆರಳಲು ಆಹ್ವಾನಗಳು ಬರುತ್ತವೆ. ಇಂತಹ ಎತ್ತುಗಳ ಪೈಕಿ ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಹಳಿಯೂರು ಗ್ರಾಮದ ಎತ್ತುಗಳು ಇದೀಗ ಗಮನಸೆಳೆಯುತ್ತಿವೆ. ಕಳೆದೊಂದು ವರ್ಷದ ಅವಧಿಯಲ್ಲಿ ಈ ಎತ್ತುಗಳು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಎಂಟು ಪ್ರಶಸ್ತಿಗಳನ್ನು ಮಡಿಲಿಗೆ ಹಾಕಿಕೊಳ್ಳುವ ಮೂಲಕ ಹುಬ್ಬೇರಿಸುವಂತೆ ಮಾಡಿವೆ.

ಮಿಂಚಿನ ವೇಗದ ಜೀವ ಎತ್ತುಗಳು
ಹಳಿಯೂರು ಗ್ರಾಮದ ನಿವಾಸಿ ಎಚ್.ಎನ್.ಹರೀಶ್ ಮತ್ತು ನಿವೃತ್ತ ಪಿಡಿಓ ನಾಗೇಗೌಡ ಅವರಿಗೆ ಸೇರಿದ ಜೀವಾ ಹೆಸರಿನ ಎತ್ತುಗಳು ಮಿಂಚಿನ ವೇಗದಲ್ಲಿ ಓಡುವ ಮೂಲಕ ಇತರೆ ಎತ್ತುಗಳನ್ನು ಸೋಲಿಸಿ ಗೆಲುವಿನ ಪತಾಕೆಯನ್ನು ಹಾರಿಸುವ ಮೂಲಕ ತಮ್ಮನ್ನು ಸಾಕಿ ಸಲಹುತ್ತಿರುವ ಮಾಲೀಕರ ಕೀರ್ತಿಯನ್ನು ಹೆಚ್ಚುವಂತೆ ಮಾಡಿವೆ. ಇದೀಗ ಈ ಎತ್ತುಗಳು ಸ್ಪರ್ಧೆಗೆ ಬರುತ್ತಿವೆ ಎಂದರೆ ಇತರೆ ಎತ್ತುಗಳ ಮಾಲೀಕರು ಹಿಂದೆ ಮುಂದೆ ಯೋಚಿಸುವಂತಾಗಿದೆ. ಅಷ್ಟರ ಮಟ್ಟಿಗೆ ಗೆಲುವಿನ ನಾಗಾಲೋಟವನ್ನು ಮುಂದುವರೆಸುತ್ತಾ ಬರುತ್ತಿವೆ.
ಇಲ್ಲಿವರೆಗೆ ನಡೆದ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಈ ಎತ್ತುಗಳು ಗೆಲುವು ಸಾಧಿಸುವ ಮೂಲಕ ಗಮನಸೆಳೆದಿದ್ದು, ಇತ್ತೀಚೆಗೆ ಹಾಸನ ಜಿಲ್ಲೆಯ ರುದ್ರಪಟ್ಟಣದಲ್ಲಿ ನಡೆದ ಎತ್ತಿನ ಗಾಡಿ ಓಟದ ಸ್ಪರ್ದೆಯಲ್ಲಿ 7.52 ಸೆಕೆಂಡ್ ನಲ್ಲಿ ಗುರಿ ತಲುಪಿ ಪ್ರಥಮ ಸ್ಥಾನವನ್ನು ಪಡೆದು ಕೊಂಡರೆ, ಹುಣಸೂರಿನ ಕಿರಜಾಜಿಯಲ್ಲಿ ನಡೆದ 65 ಜೊತೆ ರಾಸುಗಳ ಸ್ಪರ್ಧೆಯಲ್ಲಿ ಭಾಗ ವಹಿಸಿ ಎರಡನೇ ಸ್ಥಾನ ಪಡೆದುಕೊಂಡಿವೆ. ಚಿಕ್ಕಮಗಳೂರುನಲ್ಲಿ 48 ಜೋಡಿಗಳು ಭಾಗವಹಿಸಿದ್ದ ಎತ್ತಿನ ಗಾಡಿ ಓಟದ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದಿವೆ.
ರಾಸುಗಳನ್ನು ಓಡಿಸುವುದರಲ್ಲಿ ಎತ್ತಿದ ಕೈ
ಹಾಸನದ ಬೇಲೂರಿನ ಡನಾಯಕನಹಳ್ಳಿ ಗ್ರಾಮದಲ್ಲಿ ನಡೆದ ಎತ್ತಿನಗಾಡಿ ಓಟದ ಸ್ಪರ್ದೆಯಲ್ಲಿ 47 ರಾಸು ಜೋಡಿಯನ್ನು ಓಟದಲ್ಲಿ ಹಿಂದಿಕ್ಕಿ ಪ್ರಥಮ ಸ್ಥಾನವನ್ನು ಪಡೆದು ಕೊಂಡಿದ್ದು ವಿಶೇಷ. ಎತ್ತಿನ ಗಾಡಿ ಓಟದ ಸ್ಪರ್ಧೆಯಲ್ಲಿ ಗೆಲುವು ಪಡೆಯಲು ರಾಸುಗಳನ್ನು ಓಡಿಸುವ ಜಾಕಿ ಕೆಲಸವನ್ನು ರುದ್ರಪಟ್ಟಣದ ದರ್ಶನ್ ಮತ್ತು ಧನು ಮಾಡುತ್ತಿದ್ದು ಅವರು ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕಳೆದ ಹದಿಮೂರು ತಿಂಗಳ ಅವಧಿಯಲ್ಲಿ ನಡೆದ ಹಲವು ಎತ್ತಿನಗಾಡಿ ಸ್ಪರ್ಧೆಯಲ್ಲಿ ಭಾಗವಹಿಸಿರುವ ಜೀವಾ ಎತ್ತುಗಳು ಸುಮಾರು ಎಂಟು ಪ್ರಶಸ್ತಿಗಳನ್ನು ಪಡೆದುಕೊಂಡಿರುವುದು ಇವುಗಳ ಶಕ್ತಿ ಸಾಮರ್ಥ್ಯಕ್ಕೆ ಹಿಡಿದ ಕೈಕನ್ನಡಿಯಾಗಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications