"ಸಿದ್ದರಾಮಯ್ಯನವರೇ, ತಾಕತ್ತಿದ್ದರೆ ನಮ್ಮ ಚಾಲೆಂಜ್ ಸ್ವೀಕರಿಸಿ!"
ಮೈಸೂರು, ಡಿಸೆಂಬರ್ 12 : ಸಿಎಂ ಸಿದ್ದರಾಮಯ್ಯನವರೇ ನಿಮ್ಮ ಸವಾಲನ್ನು ಬಿಜೆಪಿ ಸ್ವೀಕರಿಸಿದೆ. ನೀವು ಚಾಮುಂಡೇಶ್ವರಿ ಕ್ಷೇತ್ರ ಬಿಟ್ಟು ವರುಣಾದಲ್ಲಿ ಸ್ಪರ್ಧಿಸಿ, ಬಿಜೆಪಿಯೂ ಇದನ್ನು ಪ್ರತಿಷ್ಠೆಯ ಕಣವಾಗಿ ಪರಿಗಣಿಸಲಿದೆ ಎಂದು ಬಿಜೆಪಿ ಕಾರ್ಯಕಾರಿಣಿ ಸದಸ್ಯ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಶಿಯೂರಪ್ಪ ಅವರ ಬಲಗೈ ಭಂಟ ಕಾಪು ಸಿದ್ದಲಿಂಗಸ್ವಾಮಿ ಮರು ಸವಾಲೆಸೆದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷ ಈ ಕ್ಷೇತ್ರದಲ್ಲಿ ಪ್ರಬಲವಾಗಿದೆ. ಹೈಕಮಾಂಡ್ ಆಜ್ಞೆಯಂತೆ ನಡೆಯಲಿದ್ದು ಅಭ್ಯರ್ಥಿಯಾಗಿ ಯಾರನ್ನು ಘೋಷಿಸಿದರೂ ಅವರ ಗೆಲುವಿಗೆ ಶ್ರಮಿಸಲಾಗುವುದು. ವರುಣಾ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಚಿನ್ಹೆಯ ಗೊಂದಲದಿಂದ ಅಭ್ಯರ್ಥಿ ಪರಾಭವ ಹೊಂದಿದ್ದರು. ಈ ಬಾರಿ ಬಿಜೆಪಿ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಚುನಾವಣೆ ಹಿನ್ನಲೆಯಲ್ಲಿ ಟೆಂಡರ್ ಕರೆಯದೆ ಕ್ಷೇತ್ರದಲ್ಲಿ ಆತುರಾತುರವಾಗಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದ್ದು. ಸಿಎಂ ಮಗ ಡಾ.ಯತೀಂದ್ರ ಅಧಿಕಾರಿಗಳೊಂದಿಗೆ ಜಿಪಿಎ ಇಲ್ಲದೇ ಗುದ್ದಲಿ ಪೂಜೆ ನಡೆಸುತ್ತಿರುವುದು ನೋಡಿದ್ರೆ ಅವರ ಸ್ವಂತ ಮನೆಯ ಕೆಲಸವೇ ಎನ್ನುವ ಅನುಮಾನ ಮೂಡುವುದು. ಅಲ್ಲದೇ ಕಳಪೆ ಕಾಮಗಾರಿ ನಡೆದರೆ ಕಪ್ಪು ಪಟ್ಟಿಗೆ ಸೇರಿಲಾಗುವುದು ಎಂದಿದ್ದ ಸಿಎಂ ಈಗ ಎಷ್ಟು ಜನರನ್ನು ಸೇರಿಸಿದ್ದಾರೆ ಎಂದು ಪ್ರಶ್ನಿಸಿದರು.
ಸಿಎಂ ಪುತ್ರನ ದರ್ಪವೇ ಹೆಚ್ಚು
ಸಿಎಂ ತವರೂ ಎನ್ನುವ ಹಣೆಪಟ್ಟಿ ಹೊರತುಪಡಿಸಿದರೇ ಕ್ಷೇತ್ರದಲ್ಲಿ ಯಾವುದೇ ಪ್ರಗತಿಯಾಗಿಲ್ಲ, ಅಲ್ಲದೇ ನಡೆದಿರುವ ಕಾಮಗಾರಿಗಳ ಕಳಪೆಯಾಗಿದೆ. ಕೆಲವೊಂದು ಕಾಮಗಾರಿಗೆ ಅವರಸರದಲ್ಲಿ ಗುದ್ದಲಿ ಪೂಜೆ ನಡೆದರೂ ಇನ್ನೂ ಕಾಮಗಾರಿಗಳು ಆರಂಭವಾಗಿಲ್ಲ. ಕ್ಷೇತ್ರದಲ್ಲಿ ಜಾತಿ, ಧರ್ಮ ಆಧಾರಿತ ಅಭಿವೃದ್ಧಿ ನಡೆಯುತ್ತಿದೆ ಇದೇ ನಿಮ್ಮ ಪ್ರಗತಿನಾ? ಸಿಎಂ ಪುತ್ರ ಎನ್ನುವ ದರ್ಪದಲ್ಲಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಅಧಿಕಾರ ಚಲಾಯಿಸುತ್ತಿದ್ದಾರೆ. ಅಲ್ಲದೇ ಕ್ಷೇತ್ರದಲ್ಲಿ ನೀಡುತಿರುವ ಸಾಲ ಕಾಂಗ್ರೆಸಿನದೋ ಅಥವಾ ಸರ್ಕಾರದೊ ಎಂದು ಅನುಮಾನ ಮೂಡುತ್ತಿದ್ದು, ವರುಣಾ ಕ್ಷೇತ್ರದಲ್ಲಿ ಜಿಪಿಎ ಕೊಟ್ಟು ಕೆಲಸ ಮಾಡಿಸಲು ಕಾಮಗಾರಿಗಳು ಇವರ ಮನೆಯ ಸ್ವಂತ ಕೆಲಸಗಳಾ ?ಎಂದು ಪ್ರಶ್ನಿಸಿದರು.
ಕಳೆದ ಚುನಾವಣೆಯಲ್ಲಿ ನನ್ನ ವಿರುದ್ಧ ಎರಡು ಬಾರಿ ಹಲ್ಲೆ ನಡೆಸಲಾಗಿತ್ತು. ನನ್ನ ವಿರುದ್ಧ ಒಂದು ಚಿಕ್ಕ ಕಪ್ಪು ಚುಕ್ಕೆ ಇದ್ದರೂ ರಾಜಕೀಯದಿಂದ ನಿವೃತ್ತಿಯಾಗುವೆ, ಅಲ್ಲದೇ ಕ್ಷೇತ್ರದಲ್ಲಿ ಪಕ್ಷದಿಂದ ಯಾವುದೇ ಕಾರ್ಯಕ್ರಮವನ್ನು ಹಮ್ಮಿಕೊಂಡಿಲ್ಲವೆಂದರು.












Click it and Unblock the Notifications