ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರ್ ಎಸ್ ಎಸ್ ಕಾರ್ಯಕರ್ತ ದಿ.ರಾಜು ಕುಟುಂಬಕ್ಕೆ ಶಾ ಭೇಟಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 30: ಮೈಸೂರಿನ ಕ್ಯಾತಮಾರನಹಳ್ಳಿಯ ಆರ್ ಎಸ್ ಎಸ್ ಕಾರ್ಯಕರ್ತ ರಾಜು ಹತ್ಯೆ ಪ್ರಕರಣ ಸಂಬಂಧಪಟ್ಟಂತೆ ಮಾಹಿತಿ ಪಡೆದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಂದು ಅವರ ಮನೆಗೆ ಭೇಟಿಯಿತ್ತರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಇದೇ ವೇಳೆ ರಾಷ್ಟ್ರೀಯ ತನಿಖಾದಳದಿಂದ ತನಿಖೆ ನಡೆಸುವಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾರನ್ನು ರಾಜುವಿನ ತಾಯಿ ಚಂದ್ರಮ್ಮ ಒತ್ತಾಯಿಸಿದರು. ಮೈಸೂರಿನ ಉದಯಗಿರಿಯಲ್ಲಿ ಕಳೆದೆರಡು ವರ್ಷಗಳ ಹಿಂದೆ ಕೆ. ಎಫ್. ಡಿ, ಪಿ ಎಫ್ ಐ, ಎಸ್ ಡಿಪಿಐ ಬೆಂಬಲಿತ ಸಕ್ರಿಯ ಕಾರ್ಯಕರ್ತರು ನನ್ನ ಮಗನನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಇದರಲ್ಲಿ ಪ್ರಮುಖ ಆರೋಪಿಯಾದ ಅಬೀದ್ ಪಾಷಾ ಎಂಬ ವ್ಯಕ್ತಿ ಮೈಸೂರು ಸೇರಿದಂತೆ ಹುಣಸೂರು, ಮಂಗಳೂರು ರಾಜ್ಯದ ಇತರೆ ಭಾಗಗಳಲ್ಲಿ ಕೊಲೆ ಕೇಸುಗಳು ದಾಖಲಾಗಿವೆ.

ಕುತೂಹಲ ಕೆರಳಿಸಿದ ಅಮಿತ್ ಶಾ-ಮೈಸೂರು ರಾಜವಂಶಸ್ಥರ ಭೇಟಿಕುತೂಹಲ ಕೆರಳಿಸಿದ ಅಮಿತ್ ಶಾ-ಮೈಸೂರು ರಾಜವಂಶಸ್ಥರ ಭೇಟಿ

ಮೈಸೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು ಹಾಗೂ ಗಂಭೀರ ಆರೋಪಗಳಿದ್ದರೂ ಸಹ ಕಾಂಗ್ರೆಸ್ ಸರ್ಕಾರದ ವೈಫಲ್ಯದಿಂದ ಪೊಲೀಸ್ ತನಿಖೆಯಲ್ಲಿ ರಾಜಕೀಯ ಕೈವಾಡ ಇದೆ. ಇದೇ ವೇಳೇ ಆರೋಪಿಗೆ ಮತ್ತು ಎಲ್ಲಾ ಸಹಚರರಿಗೆ ಜಾಮೀನು ದೊರಕಿದೆ. ಈ ಬೆಳವಣಿಗೆಯಿಂದ ರಾಜ್ಯ ಸರ್ಕಾರ ನಡೆಸಿದ ತನಿಖೆಯಲ್ಲಿ ನಮಗೆ ವಿಶ್ವಾಸವಿಲ್ಲ. ದಯವಿಟ್ಟು ನನ್ನ ಮಗನ ಹತ್ಯೆಯ ತನಿಖೆಯನ್ನು ರಾಷ್ಟ್ರೀಯ ತನಿಖಾದಳದಿಂದ ಮಾಡಿಸಿ ಎಂದು ವಿನಂತಿಸಿದರು. ಇದೀಗ ನನ್ನ ಮನೆಯಲ್ಲಿ ದುಡಿಯುವ ಕೈ ಇಲ್ಲದಂತಾಗಿದ್ದು, ಮತ್ತೊಬ್ಬ ಮಗ ಚಂದ್ರುಗೆ ಸರ್ಕಾರಿ ನೌಕರಿ ಕೊಡಿಸಿ ಎಂದು ವಿನಂತಿಸಿಕೊಂಡರು.

BJP National president Amit Shah meets RSS worker Rajus family in Mysuru

ಇದೇ ವೇಳೆ ರಾಜು ಹತ್ಯೆಯಾದ ಘಟನೆ ಕುರಿತು ಕೇಂದ್ರ ಸಚಿವ ಅನಂತಕುಮಾರ್ ಹಾಗೂ ಪ್ರತಾಪ್ ಸಿಂಹ ಸಂಪೂರ್ಣ ವಿವರ ನೀಡಿದರು. ರಾಜು ಕುಟುಂಬ ಭೇಟಿಯಾದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅಮಿತ್ ಶಾ, ಸಿದ್ದರಾಮಯ್ಯ ಸರ್ಕಾರದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ. ರಾಜ್ಯದಲ್ಲಿ 25 ಮಂದಿ ಹಿಂದೂಗಳ ಹತ್ಯೆಯಾಗಿದೆ. ಮುಂದೆ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ ಯಡಿಯೂರಪ್ಪ ಸಿಎಂ ಆಗಲಿದ್ದಾರೆ. ಆರೋಪಿಗಳು ಪಾತಾಳದಲ್ಲಿದ್ದರೂ ಬಿಡುವುದಿಲ್ಲ. ಅವರನ್ನು ಬಂಧಿಸಿ ಜೈಲಿಗಟ್ಟುತ್ತೇವೆ ಎಂದರು.

English summary
BJP National president Amit Shah meets RSS worker Raju's family in Mysuru. Raju was murdered in Mysuru Udaygiri police station limits on March 13th, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X