ಮೈಸೂರಿನ ಅಭ್ಯರ್ಥಿಗಳ ಮೇಲೂ ಬೆಟ್ಟಿಂಗ್:ಏನೆಲ್ಲಾ ಅಡವಿಟ್ಟಿದ್ದಾರೆ ಗೊತ್ತಾ?
Recommended Video
ಮೈಸೂರು, ಏಪ್ರಿಲ್ 22:ಮೈಸೂರಿನಲ್ಲಿ ರಾಜ್ಯದ ಮೊದಲನೆ ಹಂತದ ಲೋಕಸಭಾ ಚುನಾವಣೆ ನಡೆದು 4 ದಿನ ಕಳೆದಿದೆ. ಇದರೊಟ್ಟಿಗೆ ಎಲ್ಲೆಡೆ ಸೋಲು ಗೆಲುವಿನ ಲೆಕ್ಕಾಚಾರ ಭರದಿಂದ ಸಾಗುತ್ತಿದೆ. ಈ ನಡುವೆ ನಮ್ಮ ಅಭ್ಯರ್ಥಿಗಳು ಗೆಲ್ಲಲ್ಲಿದ್ದಾರೆ ಎಂದು ಕೆಲವರು ಬೆಟ್ಟಿಂಗ್ ಗೆ ಇಳಿದಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮೈಸೂರಿನ ಉದಯಗಿರಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭಿಮಾನಿಗಳ ನಡುವೆ ಬೆಟ್ಟಿಂಗ್ ಭರಾಟೆ ಜೋರಾಗಿಯೇ ನಡೆದಿದೆ. ಕಾಂಗ್ರೆಸ್ ಅಭ್ಯರ್ಥಿ ಸಿ.ಹೆಚ್ ವಿಜಯಶಂಕರ್ ಪರವಾಗಿ ಅಫ್ಸರ್ ಎಂಬುವವರು, ಬಿಜೆಪಿಯ ಪ್ರತಾಪ್ ಸಿಂಹ ಪರ ರಾಜು ಬೆಟ್ಟಿಂಗ್ ಕಟ್ಟಿದ್ದಾರೆ.
ಅಫ್ಸರ್ ಎರಡು ಆಟೋಗಳನ್ನು ಬೆಟ್ಟಿಂಗ್ ಗೆ ಅಡ ಇಟ್ಟರೆ ರಾಜು ತಮ್ಮ ಎರಡು ಸ್ಕೂಟರ್ ಗಳನ್ನು ಬೆಟ್ಟಿಂಗ್ ಕಟ್ಟಿದ್ದಾರೆ. ಅಫ್ಸರ್ ಗೆ ವಿಜಯಶಂಕರ್ ಮೇಲೆ ಎಷ್ಟು ವಿಶ್ವಾಸ ಇದೆ ಅಂದರೆ ಎರಡು ಆಟೋ ಜೊತೆಗೆ ತಮ್ಮ ಪ್ರೀತಿ ಪಾತ್ರವಾದ ಹೈಬ್ರೀಡ್ ಆಡಿನ ಮರಿಯನ್ನೂ ಕೊಡಲು ತಯಾರಾಗಿದ್ದಾರೆ.

ಅಫ್ಸರ್ ಹಾಗೂ ರಾಜು ಇಬ್ಬರು ತಮ್ಮ ವಾಹನಗಳ ಕೀಲಿಗಳನ್ನು ಸ್ಥಳೀಯರಾದ ಫೈರೋಜ್ ಎಂಬುವವರ ಕೈಗೆ ಕೊಟ್ಟಿದ್ದಾರೆ. ಗೆಲುವು - ಸೋಲು ಯಾರದ್ದೇ ಇರಲಿ ರಾಜಕಾರಣಿಗಳ ಹೆಸರಿನಲ್ಲಿ ಇವರಿಬ್ಬರ ಆಸ್ತಿಯಂತೂ ಯಾರದ್ದೋ ಪಾಲಾಗುವುದು ಮಾತ್ರ ಬೇಸರದ ಸಂಗತಿ.












Click it and Unblock the Notifications