ಮೈಸೂರಿನ ಸ್ಪರ್ಧಿ ಪ್ರತಾಪ್ ಸಿಂಹ ವ್ಯಕ್ತಿ ಪರಿಚಯ
ಮೈಸೂರು, ಮಾ.19 : ಪತ್ರಿಕೋದ್ಯಮದಿಂದ ಗಳಿಸಿರುವ ಜನಪ್ರಿಯತೆಯನ್ನು ಬೆನ್ನ ಹಿಂದೆ ಇಟ್ಟುಕೊಂಡು 'ಅಬ್ ಕಿ ಬಾರ್ ಮೋದಿ ಸರ್ಕಾರ್' ಎಂಬ ಮಂತ್ರದೊಡನೆ ಜನಪ್ರಿಯ ಅಂಕಣಕಾರ ಪ್ರತಾಪ್ ಸಿಂಹ ಅವರು ಬಿಜೆಪಿ ಅಭ್ಯರ್ಥಿಯಾಗಿ ಮೈಸೂರು-ಕೊಡಗು ಕ್ಷೇತ್ರದಿಂದ ಲೋಕಸಭೆ ಚುನಾವಣೆ 2014ರಲ್ಲಿ ಸ್ಪರ್ಧೆಗಿಳಿದಿದ್ದಾರೆ.
ಪ್ರಥಮ ಬಾರಿಗೆ ಚುನಾವಣೆ ಕಣಕ್ಕಿಳಿದಿರುವ ಪ್ರತಾಪ್ ಸಿಂಹ ಅವರ ಎದುರಾಳಿಯಾಗಿ ಕಾಂಗ್ರೆಸ್ ನಿಂದ ಅನುಭವಿ ಎಚ್ ವಿಶ್ವನಾಥ್, ಜೆಡಿಎಸ್ ಅಭ್ಯರ್ಥಿ ಘೋಷಿಸಿಲ್ಲವಾದರೂ ಕಾಂಗ್ರೆಸ್ ನಾಯಕ ಸಿ.ಕೆ ಜಾಫರ್ ಷರೀಫ್ ಹೆಸರು ಕೇಳಿ ಬಂದಿದೆ. [ಗ್ಯಾಲರಿ: ಪ್ರಚಾರ ನಿರತ ಪ್ರತಾಪ್]
ಪ್ರತಾಪ್ ಸಿಂಹ ಅವರ ಹೆಸರು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲೂ ಕೇಳಿ ಬಂದಿದ್ದು ಆದರೆ ಕೊನೆ ಗಳಿಗೆಯಲ್ಲಿ ಸ್ಥಳೀಯ ಕಾರ್ಯಕರ್ತರ ವಿರೋಧದ ನಡುವೆಯೂ ಮೈಸೂರಿನ ಅಭ್ಯರ್ಥಿಯಾಗಿ ಬಿಸುರಿನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರತಾಪ್ ಸಿಂಹ ಅವರ ವೃತ್ತಿ ಬದುಕಿನ ಪ್ರಮುಖಾಂಶ ಇಲ್ಲಿದೆ:

ಪ್ರತಾಪ್ ಸಿಂಹ ಅವರ ಬದುಕಿನ ಮುಖ್ಯಾಂಶ
* ಹೆಸರು : ಪ್ರತಾಪ್ ಸಿಂಹ
* ವಯಸ್ಸು: 37, (ಹುಟ್ಟಿದ ದಿನಾಂಕ 21, ಜುಲೈ, 1976)
* ಹಾಸನ ಜಿಲ್ಲೆ ಮೂಲದ ಒಕ್ಕಲಿಗ ಸಮುದಾಯಕ್ಕೆ ಸೇರಿದವರು.
* ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ.
* ವಿವಾಹಿತ, ಒಬ್ಬ ಪುತ್ರಿ

ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆ
* ಮಾ.14ರಂದು ಭಾರತೀಯ ಜನತಾ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ
* ಬಿಜೆಪಿ ಬೆಂಬಲಿತ ರಾಜ್ಯಸಭೆ ಸದಸ್ಯ ರಾಜೀವ್ ಚಂದ್ರಶೇಖರ್ ಮಾಲೀಕತ್ವದ ಕನ್ನಡಪ್ರಭ ದಿನಪತ್ರಿಕೆಯಲ್ಲಿ ಅಂಕಣಕಾರ.
* ವಿಜಯಕರ್ನಾಟಕ, ಕನ್ನಡಪ್ರಭ ಎರಡು ದಿನ ಪತ್ರಿಕೆಗಳಲ್ಲೂ ಪ್ರತಾಪ್ ಅವರ ಅಂಕಣ ('ಬೆತ್ತಲೆ ಜಗತ್ತು, ಬೆತ್ತಲೆ ಪ್ರಪಂಚ) ಜನಪ್ರಿಯತೆ ಗಳಿಸಿದೆ.
* ಬೆತ್ತಲೆ ಜಗತ್ತು ಅಂಕಣ ಯುವ ಜನತೆಯನ್ನು ಚಿಂತನೆಗೆ ಒಡ್ಡಿ, ದೇಶಭಕ್ತಿಯನ್ನು ಕೆರಳಿಸುವಲ್ಲಿ ಸಫಲವಾಗಿದೆ.

ಪ್ರತಾಪ್ ಸಿಂಹ ಕೃತಿಗಳು ಭರ್ಜರಿ ಮಾರಾಟ
* ಹಲವು ಆವೃತ್ತಿಗಳಲ್ಲಿ ಬೆತ್ತಲೆ ಜಗತ್ತು ಅಂಕಣ ಪ್ರಕಟವಾಗಿ ಭರ್ಜರಿ ಮಾರಾಟ ಕಂಡಿದೆ.
* ನರೇಂದ್ರ ಮೋದಿ-ಯಾರೂ ತುಳಿಯದ ಹಾದಿ ಎಂಬ ಕೃತಿಯನ್ನು ರಚಿಸಿ ಸ್ವತಃ ನರೇಂದ್ರ ಮೋದಿ ಅವರಿಂದ ಮೆಚ್ಚುಗೆ ಗಳಿಸಿದ್ದಾರೆ.
* ಒಟ್ಟಾರೆ 22 ಪುಸ್ತಕಗಳನ್ನು ಹೊರ ತಂದಿರುವ ಪ್ರತಾಪ್ ಸಿಂಹ ಅವರು ಯುವ ಜನತೆಯ ಮೆಚ್ಚುಗೆಯ ಲೇಖಕರಾಗಿದ್ದಾರೆ.

ಮೋದಿ ಪ್ರಧಾನಿ ಮಾಡುವುದು ನನ್ನ ಗುರಿ
* ಸುಮಾರು 14 ವರ್ಷಗಳ ಕಾಲ ಅಂಕಣಕಾರನಾದ ಮೇಲೆ ಈಗ ಹೊಸ ಕ್ಷೇತ್ರಕ್ಕೆ ಕಾಲಿರಿಸುತ್ತಿದ್ದೇನೆ ಎಂದು ರಾಜಕೀಯಕ್ಕೆ ಪ್ರವೇಶಿಸುತ್ತಿದ್ದಂತೆ ಫೇಸ್ ಬುಕ್ ನಲ್ಲಿ ಘೋಷಿಸಿದ್ದರು.
* ಭಾರತದ ಪ್ರಧಾನಿಯನ್ನಾಗಿ ಮೋದಿಯವರನ್ನು ಬೆಂಬಲಿಸೋಣ, ದೇಶ ಮೊದಲು ವ್ಯಕ್ತಿ ನಂತರ ಚಿಂತನೆಯೊಂದಿಗೆ ಪ್ರತಾಪ್ ಕಣಕ್ಕಿಳಿಯುತ್ತಿದ್ದಾರೆ.

Pratap Simha For MP
* ಫೇಸ್ ಬುಕ್ ಮೂಲಕ ಸಂಪರ್ಕಿಸಿ : Pratap Simha For MP
* ಟ್ವಿಟ್ಟರ್ ನಲ್ಲಿ ಹಿಂಬಾಲಿಸಿ: @mepratap












Click it and Unblock the Notifications