• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿಎಂ-ಜಿಟಿಡಿಗೆ ವಿಶ್ರಾಂತಿ ಕೊಡ್ತಾರಂತೆ ಬಿಜೆಪಿ ಅಭ್ಯರ್ಥಿ!

By ಬಿ.ಎಂ. ಲವಕುಮಾರ್
|

ಮೈಸೂರು, ಮೇ 1: ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಎಲ್ಲ ರಾಜ್ಯನಾಯಕರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಆರೋಪವನ್ನು ಮಾಡುತ್ತಲೇ ಇದ್ದಾರೆ. ಇದಕ್ಕೆ ಅವರು ಕೊಡುತ್ತಿರುವ ಕಾರಣ ಬಿಜೆಪಿಯಿಂದ ಕಣಕ್ಕಿಳಿಸಿರುವ ಎಸ್.ಆರ್.ಗೋಪಾಲ್‌ರಾವ್‌ ದುರ್ಬಲ ಅಭ್ಯರ್ಥಿಯಂತೆ.

ಹಾಗೆ ನೋಡಿದರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸ್ಪರ್ಧಿಸುತ್ತಿರುವ ಜಿ.ಟಿ.ದೇವೇಗೌಡರು ಹಾಲಿ ಕ್ಷೇತ್ರದ ಶಾಸಕರು. ಅಷ್ಟೇ ಅಲ್ಲ ಒಕ್ಕಲಿಗ ನಾಯಕನೂ ಹೌದು. ಈ ಕ್ಷೇತ್ರದಲ್ಲಿ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಅವರು ಒಂದಷ್ಟು ಬೆಂಬಲ ನೀಡಿದರೆ ಗೆಲ್ಲಬಹುದು ಎಂಬುದು ದಳದ ಅಭ್ಯರ್ಥಿ ಜಿ.ಟಿ.ದೇವೇಗೌಡರ ಲೆಕ್ಕಚಾರವಾಗಿದೆ.

ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಆರ್.ಗೋಪಾಲರಾವ್ ಪರಿಚಯ

ಕುರುಬರು ಮತ್ತು ಹಿಂದುಳಿದ ವರ್ಗ, ಅಲ್ಪ ಸಂಖ್ಯಾತರು ತಮ್ಮ ಕಡೆಗೆ ಒಲವು ತೋರಿದರೆ ಗೆಲುವು ನನ್ನದೇ ಎನ್ನುವುದು ಮುಖ್ಯಮಂತ್ರಿ ಸಿದ್ದರಾಮಯ್ಯರವರ ನಿರೀಕ್ಷೆಯಾಗಿದೆ. ಇವತ್ತಿಗೂ ಒಂದಷ್ಟು ದಲಿತರು, ಅಲ್ಪಸಂಖ್ಯಾತರು ಜೆಡಿಎಸ್ ಪರವಾಗಿದ್ದಾರೆ. ಇದನ್ನು ಇನ್ನಷ್ಟು ಗಟ್ಟಿಮಾಡಿಕೊಳ್ಳಲು ದೇವೇಗೌಡರು ಬಿಎಸ್‍ಪಿಯೊಂದಿಗೆ ಮೈತ್ರಿ ಮಾಡಿಕೊಂಡು ಪಕ್ಷದ ಹಿರಿಯ ಮುಖಂಡರಾದ ಮಾಯಾವತಿ ಅವರನ್ನು ಕರೆತಂದು ಸಮಾವೇಶ ಮಾಡಿಸಿದ್ದಾರೆ.

ಇದೊಂದು ರೀತಿಯಲ್ಲಿ ಕಾಂಗ್ರೆಸ್‍ ಗೆ ಹೊಡೆತ ನೀಡಿದೆ. ಒಂದಷ್ಟು ಮತಗಳು ಹಣಚಿಹೋಗುವ ಭಯವೂ ಶುರುವಾಗಿದೆ. ಹೀಗಾಗಿಯೇ ಅಲ್ಪಸಂಖ್ಯಾತರು ಮತ್ತು ದಲಿತರು ಜೆಡಿಎಸ್‍ನತ್ತ ಮುಖ ಮಾಡಬಾರದೆಂಬ ಕಾರಣಕ್ಕೆ ಜೆಡಿಎಸ್ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದೆ ಎಂಬ ವದಂತಿ ಹಬ್ಬಿಸಿ ಜೆಡಿಎಸ್‌ನತ್ತ ಮುಖ ಮಾಡದಂತೆ ಮಾಡುವ ಹುನ್ನಾರವೂ ನಡೆದಿದೆ ಎನ್ನಲಾಗುತ್ತಿದ್ದು, ಇದು ಇಲ್ಲ ಎನ್ನಲಾಗುವುದಿಲ್ಲ. ರಾಜಕೀಯದಲ್ಲಿ ತಂತ್ರ, ಪ್ರತಿತಂತ್ರ ಇದ್ದದ್ದೇ.

ಕಾಂಗ್ರೆಸ್ ನವರು ಮಾಡುವ ಆರೋಪವನ್ನು ತಳ್ಳಿ ಹಾಕುವಂತಿಲ್ಲ. ಬಿಜೆಪಿಯವರು ಮನಸ್ಸು ಮಾಡಿದ್ದರೆ ಇಲ್ಲಿ ಘಟಾನುಘಟಿ ನಾಯಕನನ್ನೇ ಕಣಕ್ಕಿಳಿಸಬಹುದಿತ್ತು. ಆಗ ತ್ರಿಕೋನ ಸ್ಪರ್ಧೆ ಏರ್ಪಡುತ್ತಿತ್ತು. ಆದರೆ ಈಗ ಕಣಕ್ಕಿಳಿಸುವ ನಾಯಕ ಎಸ್.ಆರ್.ಗೋಪಾಲ್‍ರಾವ್ ಸ್ಪರ್ಧೆ ನೀಡುವ ಯಾವ ಲಕ್ಷಣವೂ ಕಂಡು ಬರುತ್ತಿಲ್ಲ. ಏಕೆಂದರೆ ಇವರು ಜನಪ್ರಿಯ ವ್ಯಕ್ತಿಯೂ ಅಲ್ಲ. ಪ್ರಾಬಲ್ಯವೂ ಇಲ್ಲ. ಹೀಗಿರುವಾಗ ಘಟಾನುಘಟಿ ನಾಯಕರ ಮುಂದೆ ಇವರು ಸ್ಪರ್ಧೆವೊಡ್ಡುವುದು ಅಷ್ಟು ಸುಲಭವಾಗಿಲ್ಲ.

ಪಕ್ಷದಲ್ಲಿ ನಾಲ್ಕುದಶಕಗಳ ಸೇವೆಗೆ ಈ ಅವಕಾಶವನ್ನು ಪಕ್ಷ ನೀಡಿರುವುದಾಗಿ ಗೋಪಾಲರಾವ್ ಹೇಳುತ್ತಿದ್ದಾರೆ. ಆದರೆ ಅವಕಾಶನಾ ಬಲಿಪಶುನಾ ಎಂದು ಜನ ವ್ಯಂಗ್ಯವಾಡುತ್ತಿದ್ದಾರೆ. ಇನ್ನು ಇವರು ಹಿಂದೆ ನಡೆದ ಗ್ರಾಪಂ ಚುನಾವಣೆಯಲ್ಲಿ ಕೇವಲ 74 ಮತವನ್ನು ಮಾತ್ರ ಪಡೆದಿದ್ದರಂತೆ. ಇದನ್ನೇ ಮುಂದೆ ಇಟ್ಟುಕೊಂಡಿರುವ ವಿರೋಧಿಗಳು ಗ್ರಾಪಂ ಗೆಲ್ಲಲಾಗದವರು ವಿಧಾನಸಭಾ ಚುನಾವಣೆ ಗೆಲ್ಲುತ್ತಾರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಇದಕ್ಕೆ ಗೋಪಾಲ್ ರಾವ್ ಅವರು ನೀಡುವ ಸ್ಪಷ್ಟನೆ ಏನೆಂದರೆ 7 ಬಾರಿ ಟಿಕೆಟ್‍ನಿಂದ ವಂಚಿತನಾಗಿರುವ ನನಗೆ ಟಿಕೆಟ್ ಸಿಕ್ಕಿದೆ. ನಾನು ಹರಕೆಯ ಕುರಿಯೂ ಅಲ್ಲ. ದುರ್ಬಲ ಅಭ್ಯರ್ಥಿಯೂ ಅಲ್ಲ. ಗ್ರಾಪಂ ಚುನಾವಣೆಯೇ ಬೇರೆ ವಿಧಾನಸಭಾ ಚುನಾವಣೆಯೇ ಬೇರೆ. ಗ್ರಾಪಂ ಸದಸ್ಯರಾಗದ ಪ್ರತಾಪ್ ಸಿಂಹ ಅವರು ಸಂಸದರಾಗಿಲ್ಲವೆ? ಹಾಲಿ ಶಾಸಕ ಜಿ.ಟಿ.ದೇವೇಗೌಡ, ಸಿದ್ದರಾಮಯ್ಯ ಅವರಿಗೆ ವಿಶ್ರಾಂತಿ ಕೊಡಲೆಂದೇ ಸ್ಪರ್ಧಿಸಿರುವುದಾಗಿ ಹೇಳುತ್ತಿದ್ದಾರೆ.

ಅವರ ಆಶಾಭಾವನೆಗೆ ಪಕ್ಷದ ನಾಯಕರು ಹೇಗೆ ಬೆಂಬಲಕೊಡುತ್ತಾರೆ? ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾವ ರೀತಿಯಲ್ಲಿ ಪ್ರಚಾರ ಮಾಡುತ್ತಾರೆ. ಗೆಲುವಿಗೆ ಏನೆಲ್ಲ ತಂತ್ರ ಮಾಡುತ್ತಾರೆ ಎಲ್ಲವನ್ನು ಕಾದು ನೋಡಬೇಕಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BJP candidate Gopal Rao may lost gram panchayat elections, but he was confident that he nay give surprise to chief minister Siddaramaiah and JDS candidate G.T. Devegowda who are opponents in the constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more