ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಲ್ಮೆಟ್ ಧರಿಸದೇ ದ್ವಿಚಕ್ರ ಚಾಲನೆ: ದಂಡದ ಜೊತೆಗೆ ಚಾಲನಾ ಪರವಾನಗಿ ರದ್ದು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಅಕ್ಟೋಬರ್ 30: ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಾಲನೆ ಮಾಡಿದ 13 ಮಂದಿಯ ವಿರುದ್ಧ ಮೈಸೂರಿನ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿದ್ದು, ಅವರುಗಳ ವಾಹನ ಚಾಲನಾ ಪರವಾನಗಿ ಮೂರು ತಿಂಗಳ ಕಾಲ ಅಮಾನತ್ತಾಗಲಿದೆ.

ಹೆಲ್ಮೆಟ್ ಇಲ್ಲದೆ ವಾಹನ ಓಡಿಸಿದರೆ ಇಷ್ಟು ದಿನ ದಂಡ ಕಟ್ಟಬೇಕಿತ್ತು. ಆದರೆ, ಸರ್ಕಾರದ ಆದೇಶದಂತೆ ಮೂರು ತಿಂಗಳ ಅವಧಿಗೆ ಸವಾರರ ಚಾಲನಾ ಪರವಾನಗಿ ಅಮಾನತ್ತಾಗಲಿದೆ. ಸದ್ಯಕ್ಕೆ ಈ ನಿಯಮ ಬೆಂಗಳೂರು, ಮೈಸೂರು ಹಾಗೂ ಪ್ರಮುಖ ನಗರಗಳಲ್ಲಿ ಜಾರಿಗೆ ಬಂದಿದೆ.

ಮಾಸ್ಕ್ ನಿಯಮ ಉಲ್ಲಂಘನೆ: ದಾವಣಗೆರೆಯಲ್ಲಿ 51.67 ಲಕ್ಷ ರೂ. ದಂಡ ಸಂಗ್ರಹ

ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಪ್ರಕಾರ ಬೈಕ್ ಓಡಿಸುವವರು, ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಆದರೆ, ಈ ನಿಯಮವನ್ನು ಜನರು ಉಲ್ಲಂಘನೆ ಮಾಡುತ್ತಿದ್ದಾರೆ. ಪೊಲೀಸರಿಗೆ ಹೆದರದವರು ಸಾಕಷ್ಟು ಮಂದಿ ಇದ್ದಾರೆ. ಇದನ್ನು ಮನಗಂಡ ಸರ್ಕಾರ ಇನ್ನು ಮುಂದೆ ಹೆಲ್ಮೆಟ್ ಧರಿಸದಿದ್ದರೆ ದಂಡ ಹಾಕುವುದು ಮಾತ್ರವಲ್ಲದೆ, ಚಾಲನಾ ಪರವಾನಗಿಯನ್ನು 3 ತಿಂಗಳ ಕಾಲ ರದ್ದುಗೊಳಿಸಿ ಎಂದು ಎಲ್ಲಾ ಆರ್‌ಟಿಓ ಕಚೇರಿಗಳಿಗೆ ಸೂಚನೆ ನೀಡಿತ್ತು.

Mysuru: Bike Ride Without A Helmet: Driving License Will Revoked

ನಿಯಮ ಜಾರಿಗೆ ಬಂದಾಗಿನಿಂದ ನಗರದಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳು ಪ್ರತೀ ದಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹೆಲ್ಮೆಟ್ ಧರಿಸುವಂತೆ ಜಾಗೃತಿ ಮೂಡಿಸುವುದರ ಜೊತೆಗೆ ಹೆಲ್ಮೆಟ್ ಧರಿಸದ ಹೆಚ್ಚು ಪ್ರಕರಣಗಳು ದಾಖಲಾಗಿರುವವರ ವಿರುದ್ಧ ಪ್ರಕರಣ ದಾಖಲಿಸುವ ಕೆಲಸದಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ.

ಇಷ್ಟು ದಿನ ಹೆಲ್ಮೆಟ್ ಧರಿಸದ ಸವಾರರ ವಿರುದ್ಧ ಪೊಲೀಸರು ಸಮರ ಸಾರುತ್ತಿದ್ದರು. ಆದರೀಗ ಸಾರಿಗೆ ಇಲಾಖೆ ಅಧಿಕಾರಿಗಳು ಕೂಡ ಪೊಲಿಸರೊಂದಿಗೆ ಕೈ ಜೋಡಿಸಿದ್ದಾರೆ. ನಿಯಮ ಜಾರಿಗೆ ಬಂದಾಗಿನಿಂದ ಇಲ್ಲಿಯವರೆಗೆ ವಾಹನ ಸವಾರರ ತಪಾಸಣೆ ನಡೆಸುತ್ತಿರುವ ಸಾರಿಗೆ ಅಧಿಕಾರಿಗಳು 13 ಸವಾರರ ವಿರುದ್ಧ ಪ್ರಕರಣ ದಾಖಲಿಸಿ ಅವರುಗಳ ಚಾಲನಾ ಪರವಾನಗಿಯನ್ನು 3 ತಿಂಗಳು ಅವಾನತ್ತುಗೊಳಿಸಲು ಕ್ರಮ ಕೈಗೊಂಡಿದ್ದಾರೆ.

Mysuru: Bike Ride Without A Helmet: Driving License Will Revoked

ಪೊಲೀಸ್ ಇಲಾಖೆ ಅಧಿಕಾರಿಗಳು ಕೂಡ ಪ್ರತಿ ದಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಗರದ ಸಂಚಾರ ಪೊಲೀಸರು ನಗರದ ಪ್ರಮುಖ ವೃತ್ತ, ಬಡಾವಣೆಗಳಲ್ಲಿ ವಾಹನ ತಪಾಸಣೆ ನಡೆಸುವ ಮೂಲಕ ಹೆಲ್ಮೆಟ್ ಧರಿಸದ ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದಸರಾ ಕಾರಣದಿಂದ ಸರ್ಕಾರದ ಆದೇಶ ಪಾಲನೆ ಸಾಧ್ಯವಾಗಿರಲಿಲ್ಲ.

ಹೆಲ್ಮೆಟ್ ರಹಿತ ವಾಹನ ಚಾಲನೆಗೆ ಚಲನಾ ಪರವಾನಗಿ ಅಮಾನತ್ತು ಮಾತ್ರ ಶಿಕ್ಷೆಯಲ್ಲ. ಜೊತೆಗೆ ಸರ್ಕಾರ ವಿಧಿಸಿರುವ ದಂಡವನ್ನು ಪಾವತಿಸಬೇಕು. ಹೀಗಾಗಿ ಸಾರಿಗೆ ಇಲಾಖೆ ವಾಹನ ಸವಾರರಿಂದ 7 ಸಾವಿರ ರೂ. ದಂಡ ವಸೂಲು ಮಾಡಿದೆ.

English summary
Mysuru's regional transport department has filed an FIR against 13 people who were driving a two-wheeler without a helmet and their driving license will be suspended for three months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X