ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ವಿವಿ ಕುಲಸಚಿವೆಯಾಗಿ ಭಾರತಿ ನೇಮಿಸಿ ಸರಕಾರದ ಆದೇಶ

By Yashaswini
|
Google Oneindia Kannada News

ಅಂತೂ ಇಂತೂ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಕುಲಸಚಿವರ ನೇಮಕವಾಗಿದೆ. ವಿವಿ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರನ್ನು ಕುಲಸಚಿವರನ್ನಾಗಿ ನೇಮಿಸಿ ರಾಜ್ಯ ಸರಕಾರ ಅದೇಶ ಹೊರಡಿಸಿದೆ. ಹಿರಿಯ ಕೆಎಎಸ್ ಅಧಿಕಾರಿ ಬಿ.ಭಾರತಿ ಅವರನ್ನು ಮೈಸೂರು ವಿವಿ ಆಡಳಿತ ವಿಭಾಗದ ರಿಜಿಸ್ಟ್ರಾರ್ ಆಗಿ ನೇಮಕ ಮಾಡಲಾಗಿದೆ.

ಈ ಸಂಬಂಧ ಆದೇಶಕ್ಕೆ ರಾಜ್ಯ ಸರಕಾರದ ಅಧೀನ ಕಾರ್ಯದರ್ಶಿ ಆರ್.ನಾಗರಾಜ್ ಅವರು ಜೂನ್ 5 ರಂದು ಸಹಿ ಮಾಡಿದ್ದು, ಈ ಪ್ರತಿ ಒನ್ ಇಂಡಿಯಾಗೆ ಲಭಿಸಿದೆ. ಸದ್ಯ ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.[ಮೈಸೂರು ವಿವಿ ಉಪಕುಲಸಚಿವರ ಕಚೇರಿಗೆ ಬೀಗ!]

Bharati appointed as Mysuru university registrar by government

ಕೆಎಎಸ್ ಅಧಿಕಾರಿ ಬಿ.ಭಾರತಿ ಅವರನ್ನು ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತ ದೃಷ್ಠಿಯಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಮೈಸೂರು ವಿವಿ ಕುಲಸಚಿವರು (ಆಡಳಿತ) ಹುದ್ದೆಗೆ ನೇಮಿಸಲಾಗಿದೆ. ಪ್ರೊ.ಆರ್.ರಾಜಣ್ಣ ಅವರನ್ನು ಮಾತೃ ಇಲಾಖೆಗೆ ವರ್ಗಾಯಿಸಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಪ ವಿಭಾಗಾಧಿಕಾರಿಯಾಗಿ ಬಳಿಕ ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಭಾರತಿ ಕರ್ತವ್ಯ ನಿರ್ವಹಿಸಿದ್ದರು. ಪ್ರಸ್ತುತ ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾಗಿ (ಭೂ ನಿರ್ವಹಣೆ ವಿಭಾಗ) ಕಾರ್ಯ ನಿರ್ವಹಿಸುತ್ತಿದ್ದಾರೆ.[ಮೈಸೂರು ವಿವಿಗೆ ಕರ್ನಾಟಕದ ನಂ.1 ಯೂನಿವರ್ಸಿಟಿ ಪಟ್ಟ]

Bharati appointed as Mysuru university registrar by government

ಇದೀಗ ಭಾರತಿ ಅವರನ್ನು ಮೈಸೂರು ವಿವಿ ಕುಲಸಚಿವರನ್ನಾಗಿ ನೇಮಕ ಮಾಡುವ 100 ವರ್ಷಗಳ ಇತಿಹಾಸವಿರುವ ವಿಶ್ವವಿದ್ಯಾನಿಲಯಕ್ಕೆ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

English summary
Bharati, appointed as registrar (administration) of Mysuru university by Karnataka government. She is the first woman registrar of Mysuru university.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X