ಕಾರ್ಮಿಕ ಸಂಘಟನೆಗಳ ಮುಷ್ಕರ : ಮೈಸೂರಿನಲ್ಲಿ ಬಂದ್ ಬಿಸಿ ಹೇಗಿರಲಿದೆ?
ಬೆಂಗಳೂರು, ಜನವರಿ 07 : ಕಾರ್ಮಿಕ ಸಂಘಟನೆಗಳು ಜನವರಿ 8 ಮತ್ತು 9ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಷ್ಕರ ಬಿಸಿ ಹೇಗಿರಲಿದೆ?, ಯಾವುದು ಬಂದ್?, ಯಾವುದು ತೆರೆದಿರುತ್ತದೆ?.
ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ಎರಡು ದಿನಗಳ ಬಂದ್‌ಗೆ ಕರೆ ನೀಡಿರುವ ಕಾರ್ಮಿಕ ಸಂಘಟನೆಗಳು ರಾಷ್ಟ್ರವ್ಯಾಪಿ ಮುಷ್ಕರ ಹೂಡಿವೆ. ಈ ಪರಿಣಾಮ ಸಾಂಸ್ಕೃತಿಕ ನಗರಿ ಮೈಸೂರಿಗೂ ತಟ್ಟಲಿದೆ.
ಮೈಸೂರಿನಲ್ಲಿ ಕೆಎಸ್‌ಆರ್‌ಟಿಸಿ ಗ್ರಾಮಾಂತರ, ನಗರ ವಿಭಾಗದ ಬಸ್ ಸೇವೆ ವ್ಯತ್ಯಯವಾಗುವ ಸಾಧ್ಯತೆ ಇದೆ. ಬಿಇಎಂಎಲ್ ಸೇರಿದಂತೆ ಬಹುತೇಕ ಎಲ್ಲಾ ಕಾರ್ಖಾನೆಗಳ ನೌಕರರೂ ಮುಷ್ಕರದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಆಟೋ, ಟ್ಯಾಕ್ಸಿ ಚಾಲಕರು ಬೆಂಬಲ ನೀಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಲಾರಿ ಮಾಲೀಕರ ಸಂಘ ಭಾರತ್ ಬಂದ್‌ಗೆ ನೈತಿಕ ಬೆಂಬಲ ನೀಡಿದ್ದಾರೆ. ಬಂದ್ ಹಿನ್ನಲೆ ಪರಿಸ್ಥಿತಿ ಅವಲೋಕಿಸಿ ಅಲ್ಲಿನ ಜಿಲ್ಲಾಧಿಕಾರಿಗಳು ಖಾಸಗಿ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಯಾವುದೇ ಪರೀಕ್ಷೆ ಜನವರಿ 8 ಮತ್ತು 9ರಂದು ನಡೆಯುವುದಿಲ್ಲ. ಎಂದಿನಂತೆ ವಿಶ್ವವಿದ್ಯಾನಿಲಯಗಳು ಕಾರ್ಯ ನಿರ್ವಹಿಸಲಿವೆ.
ಹಾಲು, ಪತ್ರಿಕೆ, ದಿನ ಬಳಕೆ ವಸ್ತುಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವುದಿಲ್ಲ. ಮಲ್ಟಿಫೆಕ್ಸ್, ಚಲನಚಿತ್ರ ಮಂದಿರಗಳಲ್ಲಿ ಎಂದಿನಂತೆ ಪ್ರದರ್ಶನವಿರುತ್ತದೆ.
ಮುಷ್ಕರದಿಂದಾಗಿ ಪ್ರವಾಸಿ ತಾಣವಾಗಿರುವ ಕಾರಣಕ್ಕೆ ಹೋಟೆಲ್ ಉದ್ಯಮಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎನ್ನಲಾಗುತ್ತಿದೆ.












Click it and Unblock the Notifications