ಅಪಘಾತಕ್ಕೊಳಗಾದ ನಟ ದರ್ಶನ್ ಕಾರು ಬೆಂಗಳೂರಿಗೆ ಶಿಫ್ಟ್
ಮೈಸೂರು, ಸೆಪ್ಟೆಂಬರ್.24: ನಟ ದರ್ಶನ್ ಕಾರು ತಡರಾತ್ರಿ ಅಪಘಾತಕ್ಕೀಡಾಗಿದ್ದು, ದರ್ಶನ್ ಇದೀಗ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸದ್ಯ ಅಪಘಾತಕ್ಕೊಳಗಾದ ದರ್ಶನ್ ಅವರ ಆಡಿ ಕ್ಯೂ7 ಕಾರು ನಾಪತ್ತೆಯಾಗಿದ್ದು ಅಚ್ಚರಿ ಮೂಡಿಸಿತ್ತು. ಕಾರು ಎಲ್ಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಿರಲಿಲ್ಲ. ಆದರೆ ಈಗ ಅಪಘಾತಕ್ಕೊಳಗಾದ ಕಾರು ಬೆಂಗಳೂರಿಗೆ ಶಿಫ್ಟ್ ಆಗಿದೆ ಎಂಬ ಮಾಹಿತಿ ಲಭಿಸಿದೆ.
ಹಾಗೆಯೇ ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಭಾರೀ ಅನಾಹುತ ತಪ್ಪಿದೆ ಎಂಬ ಮಾಹಿತಿಯೂ ಸಿಕ್ಕಿದೆ! ದರ್ಶನ್ ಬಲಗೈನ 2 ಮೂಳೆ ಮುರಿತಗೊಂಡಿದ್ದು, ಶಸ್ತ್ರಚಿಕಿತ್ಸೆ ಬಳಿಕ ದರ್ಶನ್ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ.

ದರ್ಶನ್ ಪುತ್ರ ವಿನೀಶ್ ಅಪ್ಪನ ಸ್ಥಿತಿ ಕಂಡು ರೋಧಿಸುತ್ತಿದ್ದಾನೆ. ಕಾರು ಅಪಘಾತವಾದಾಗ ದರ್ಶನ್ ಜೊತೆಗಿದ್ದ ನಟ ದೇವರಾಜ್ ಅವರ ಕೈ ಬೆರಳಿಗೂ ಗಾಯವಾಗಿದ್ದರಿಂದ ಬ್ಯಾಂಡೇಜ್ ಹಾಕಲಾಗಿದೆ.
ಡಾ. ಅಜಯ್ ಹೆಗ್ಡೆ, ಡಾ. ಶೆಣೈ ಚಾಲೆಂಜಿಂಗ್ ಸ್ಟಾರ್ ಗೆ ಚಿಕಿತ್ಸೆ ನೀಡುತ್ತಿದ್ದು, ಇಂದು ಕೂಡ ಆಸ್ಪತ್ರೆಯಲ್ಲಿ ದರ್ಶನ್ ಗೆ ಚಿಕಿತ್ಸೆ ಮುಂದುವರೆಯುವ ಸಾಧ್ಯತೆಯಿದೆ. 2 ವಾರಗಳ ಕಾಲ ಮನೆಯಲ್ಲಿ ರೆಸ್ಟ್ ತೆಗೆದುಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಮಧ್ಯಾಹ್ನದೊಳಗೆ ಆಸ್ಪತ್ರೆ ಮೂಲದಿಂದ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಲಿದೆ.
ದರ್ಶನ್ ಕಾರು ಜೆ.ಎಸ್.ಎಸ್. ಹರ್ಬನ್ ಹಾಥ್ ಬಳಿ ತಡರಾತ್ರಿ 2:55ಕ್ಕೆ ಅಪಘಾತಕ್ಕೀಡಾಗಿತ್ತು. ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡಿದ್ದರಿಂದ ಅಪಘಾತ ಸಂಭವಿಸಿತ್ತು.
ಡಿವೈಡರ್ ಗೆ ಡಿಕ್ಕಿಯಾಗಿ ಕಾರು ಪಲ್ಟಿಯಾಗುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಕಾರನ್ನು ಮೇಲಕ್ಕೆತ್ತಿದ್ದಾರೆ.












Click it and Unblock the Notifications