ಲೋಕಸಮರ:ಕೊಳ್ಳೇಗಾಲದ ಆ ಜ್ಯೋತಿಷಿ ಪ್ರಕಾರ ಗೆಲ್ಲುವವರು ಯಾರು?

Recommended Video

      Lok Sabha Elections 2019 : 3 ಕುತೂಹಲಕಾರಿ ಕ್ಷೇತ್ರಗಳ ಬಗ್ಗೆ ಕೊಳ್ಳೇಗಾಲ ಜ್ಯೋತಿಷಿ ನುಡಿದ ಭವಿಷ್ಯ

      ಮೈಸೂರು, ಏಪ್ರಿಲ್ 08:ಈ ಬಾರಿಯ ಚುನಾವಣೆ ಭಾರೀ ಕುತೂಹಲ ಕೆರಳಿಸಿರುವ ಕಾರಣದಿಂದಾಗಿ ಗೆಲುವು ಯಾರಿಗೆ ಎಂಬ ಲೆಕ್ಕಾಚಾರವೂ ನಡೆಯುತ್ತಿದೆ. ಮಾಧ್ಯಮಗಳು ಒಂದು ಕಡೆ ಸಮೀಕ್ಷೆ ನಡೆಸುತ್ತಿದ್ದರೆ, ಮತ್ತೊಂದು ಕಡೆ ರಾಜಕೀಯ ನಾಯಕರು ದೇವರ ಮೊರೆ ಹೋಗುತ್ತಿದ್ದಾರೆ.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      ಯಜ್ಞ, ಪೂಜೆ ಹವನ ಹೀಗೆ ಹರಕೆ ಕಟ್ಟಿಕೊಂಡು ದೇವಾಲಯಗಳಿಗೆ ಸುತ್ತಾಡುತ್ತಿದ್ದಾರೆ. ಮತದಾರರೇ ಅಭ್ಯರ್ಥಿಯ ಗೆಲುವನ್ನು ನಿರ್ಧರಿಸುವವರು. ಆದರೂ ಕೆಲವು ಅಭ್ಯರ್ಥಿಗಳು ಮತದಾರರ ಮನೆ ಬಾಗಿಲು ತಟ್ಟುವುದರೊಂದಿಗೆ ದೇವರ ಮೊರೆ ಹೋಗಿದ್ದಾರೆ.

      ಇದೆಲ್ಲದರ ನಡುವೆ ನಮ್ಮ ರಾಜಕೀಯ ನಾಯಕರ ಭವಿಷ್ಯವನ್ನು ಜ್ಯೋತಿಷ್ಯರು ಕೂಡ ತಮ್ಮದೇ ಆದ ದೃಷ್ಠಿಕೋನ ಮತ್ತು ಪಂಚಾಂಗಗಳ ಮೂಲಕ ಹೊರ ಹಾಕುತ್ತಿದ್ದಾರೆ. ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಿದ್ದರೂ ಕೂಡ ಕೆಲವೇ ಕೆಲವು ಕ್ಷೇತ್ರಗಳು ಎಲ್ಲರ ಕುತೂಹಲ ಕೆರಳಿಸುತ್ತಿದ್ದು, ಇಲ್ಲಿ ಯಾರು ಗೆಲ್ಲುತ್ತಾರೆ ಎಂಬುದರ ಬಗ್ಗೆ ಚರ್ಚೆಗಳು ಆರಂಭವಾಗಿರುವುದರಿಂದಾಗಿ ಕೆಲವು ಜ್ಯೋತಿಷ್ಯರು ತಮ್ಮದೇ ಆದ ದಾಳವನ್ನು ಉರುಳಿ ಬಿಡುತ್ತಿದ್ದು, ಯಾರು ಗೆಲ್ಲುತ್ತಾರೆ ಎಂಬುದರ ಬಗ್ಗೆಯೂ ಹೇಳತೊಡಗಿದ್ದಾರೆ.

      2014 ಲೋಕಸಭೆ ಚುನಾವಣೆ : ಒಂದು ವಿಶ್ಲೇಷಣೆ

      ಇದೀಗ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ನಾರಾಯಣ ಸ್ವಾಮಿ ದೇವಾಲಯ ಬೀದಿಯಲ್ಲಿರುವ ಶ್ರೀ ಆಂಜನೇಯ ದೇವಾಲಯದ ಪ್ರಧಾನ ಅರ್ಚಕರಾದ ರಾಘವನ್‌ರವರು ರಾಜಕೀಯ ನಾಯಕರ ವರ್ಷದ ಭವಿಷ್ಯದ ಹೇಳಿದ್ದಾರೆ.

      ಇವರೆಲ್ಲಾ ಗೆಲ್ಲುತ್ತಾರಂತೆ!

      ಇವರೆಲ್ಲಾ ಗೆಲ್ಲುತ್ತಾರಂತೆ!

      ಜ್ಯೋತಿಷಿ ರಾಘವನ್‌ ಅವರ ಪ್ರಕಾರ ತುಮಕೂರಿನಲ್ಲಿ ಎಚ್.ಡಿ. ದೇವೇಗೌಡರು, ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ತಿ ಸುಮಲತಾ ಅಂಬರೀಷ್, ಹಾಸನದಲ್ಲಿ ಪ್ರಜ್ವಲ್ ರೇವಣ್ಣ, ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ್ ಗೆಲುವು ಸಾಧಿಸುವುದಾಗಿ ಹೇಳಿದ್ದಾರೆ.

      2019ರ ಪಂಚಾಂಗದ ಪ್ರಕಾರ

      2019ರ ಪಂಚಾಂಗದ ಪ್ರಕಾರ

      ಯುಗಾದಿ ಹಬ್ಬದಂದು ಹೊಸ ಸಂವತ್ಸರ ದಿನವಾಗಿದ್ದು, ಅಂದು ದೇವರ ಮುಂದೆ ನೂತನ ಪಂಚಾಂಗ ಇಟ್ಟು ಪೂಜೆ ಮಾಡಿ, ವರ್ಷದ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವುದು ಸಹಜವಾಗಿದೆ. ಅದೇ ರೀತಿಯಾಗಿ ಜ್ಯೋತಿಷಿಗಳಾದ ರಾಘವನ್‌ರವರು ಆಂಜನೇಯ ದೇವಾಲಯದಲ್ಲಿ ಪಂಚಾಂಗ ಇಟ್ಟು ಪೂಜೆ ಮಾಡಿ 2019 ರ ಪಂಚಾಂಗವನ್ನು ನೋಡಿ ಭವಿಷ್ಯ ಹೇಳಿದ್ದಾರೆ.

      ಗ್ರಹಗತಿಗಳು ಚೆನ್ನಾಗಿದೆಯಂತೆ

      ಗ್ರಹಗತಿಗಳು ಚೆನ್ನಾಗಿದೆಯಂತೆ

      ಇಷ್ಟಕ್ಕೂ ಇವರು ಹೇಳಿದ ಅಭ್ಯರ್ಥಿಗಳು ಗೆಲ್ಲಲು ಕಾರಣ ಏನು ಎಂಬುದರ ಬಗ್ಗೆಯೂ ತಿಳಿಸಿರುವ ಜ್ಯೋತಿಷಿಗಳು, ಆ ಅಭ್ಯರ್ಥಿಗಳ ಗ್ರಹಗತಿಗಳು ಚೆನ್ನಾಗಿದ್ದು ಗೆಲ್ಲುವ ಅವಕಾಶವಿದೆ ಎಂದು ತಿಳಿಸಿದ್ದಾರೆ. ಆದರೆ ಇದೆಷ್ಟು ನಿಜವಾಗುತ್ತೆ ಎಂಬುದು ಮಾತ್ರ ಚುನಾವಣೆ ಕಳೆದು ಫಲಿತಾಂಶ ಬಂದಾಗ ಮಾತ್ರ ಗೊತ್ತಾಗಲಿದೆ.

      ಎಲ್ಲರಲ್ಲೂ ಕುತೂಹಲ

      ಎಲ್ಲರಲ್ಲೂ ಕುತೂಹಲ

      ಲೋಕಸಭಾ ಚುನಾವಣೆ ಚಟುವಟಿಕೆಗಳು ಕಾವೇರಿದ್ದು, ಏಪ್ರಿಲ್ 11ರಿಂದ ಆರಂಭವಾಗುವ ಮೊದಲ ಹಂತದ ಮತದಾನ ಪ್ರಕ್ರಿಯೆ ಏಳು ಹಂತಗಳಲ್ಲಿ ನಡೆದು, ಮೇ 19 ರಂದು ಕೊನೆ ಯಾಗುತ್ತದೆ. ಮೇ 23ರಂದು ಫಲಿತಾಂಶ ಬರುತ್ತದೆ.ಇಡೀ ದೇಶದಲ್ಲೇ ಯಾವ ಪಕ್ಷ ಅಧಿಕಾರ ಹಿಡಿಯಬಹುದು? ಯಾರಿಗೆ ಮುಂದಿನ ಚುಕ್ಕಾಣಿ ಎಂಬ ಪ್ರಶ್ನೆಗಳ ನಡುವೆ ಖ್ಯಾತ ಜ್ಯೋತಿಷಿಗಳ ಈ ಭವಿಷ್ಯ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+