ಮೈಸೂರು: ಆಂಬ್ಯುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

ಮೈಸೂರು, ಡಿಸೆಂಬರ್, 24: ಗರ್ಭಿಣಿಯೊಬ್ಬರು ಆಸ್ಪತ್ರೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮಾರ್ಗ ಮಧ್ಯೆ ಆಂಬ್ಯುಲೆನ್ಸ್ ನಲ್ಲೇ ಹೆರಿಗೆಯಾಗಿದೆ. ತಾಯಿ, ಮಗು ಸುರಕ್ಷಿತವಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆಯ ಹೊನ್ನಮ್ಮನಕಟ್ಟೆ ಗ್ರಾಮದ ನಿವಾಸಿ ಸೌಮ್ಯ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ. ಈಕೆ ಗೋವಿಂದನಾಯಕ ಎಂಬುವವರನ್ನು ವಿವಾಹವಾಗಿದ್ದರು. [ಮೈಸೂರು ಚೆಲುವಾಂಬ ಆಸ್ಪತ್ರೆಯಲಿಲ್ಲ ಬಾಣಂತಿಯರಿಗೆ ಸುರಕ್ಷೆ!]

Mysuru

ಗರ್ಭಿಣಿಯಾಗಿದ್ದ ಸೌಮ್ಯಗೆ ಗುರುವಾರ ಬೆಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ 108 ಆಂಬ್ಯುಲೆನ್ಸ್ ಗೆ ಕರೆ ಮಾಡಿದ್ದಾರೆ. ಆ ನಂತರ ಬಂದ ಆಂಬ್ಯುಲೆನ್ಸ್ (ಕೆಎ429146)ನಲ್ಲಿ ಹೆರಿಗೆ ನೋವು ಅನುಭವಿಸುತ್ತಿದ್ದ ಸೌಮ್ಯಳನ್ನು ಎಚ್ ಡಿ ಕೋಟೆ ಆಸ್ಪತ್ರೆ ಕಡೆಗೆ ಕರೆದೊಯ್ಯಲಾಗಿದೆ.[ತಾಯ್ತನದ ಅವಧಿಯಲ್ಲಿ ಆರೋಗ್ಯದ ಆರೈಕೆ ಹೀಗಿರಲಿ]

ಅದಾಗಲೇ ಭಾರೀ ಹೆರಿಗೆ ನೋವಿನಿಂದ ಬಳಲುತ್ತಿದ್ದ ಸೌಮ್ಯ ಬೆಳಿಗ್ಗೆ 9.45ರಲ್ಲಿ ಸೋಗಹಳ್ಳಿ ಗ್ರಾಮದ ಬಳಿ ಮಾರ್ಗದ ನಡುವೆಯೇ ಅಂಬ್ಯುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ. ಶುಶ್ರೂಕ ಡಿ. ಪಾರ್ಶನಾಯಕ ಅವರ ಸಹಕಾರದಿಂದ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ ಸುರಕ್ಷಿತವಾಗಿದ್ದು, ಮಗು ಆರೋಗ್ಯವಾಗಿದೆ ಎಂದು ಸೌಮ್ಯಳ ಕುಟುಂಬದವರು ತಿಳಿಸಿದ್ದಾರೆ. ಸಮಯಪ್ರಜ್ಞೆ ಮೆರೆದ ಶುಶ್ರೂಕನ ಬಗ್ಗೆ ಅಭಿಮಾನದ ಮಾತುಗಳಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+