ಚಾಮುಂಡಿಬೆಟ್ಟದಲ್ಲಿ ಶುಕ್ರವಾರ ದೇವಿಗೆ ವಿಶೇಷ ವರ್ಧಂತಿ ಉತ್ಸವ
ಮೈಸೂರು, ಆಗಸ್ಟ್ 02 : ಮೂರನೇ ಆಷಾಢವಾದ ನಾಳೆ ಚಾಮುಂಡಿಬೆಟ್ಟದಲ್ಲಿ ದೇವಿಗೆ ವಿಶೇಷ ವರ್ಧಂತಿ ಉತ್ಸವ ನಡೆಯಲಿದೆ. ಶಾಲಿವಾಹನ ಶಕ 1940ನೇ ಶ್ರೀ ವಿಳಂಬಿನಾಮ ಸಂವತ್ಸರದ ದಕ್ಷಿಣಾಯನೆ ಆಷಾಢ ಕೃಷ್ಣ ಪಕ್ಷದ ಷಷ್ಠಿ ಉಪರಿ ಸಪ್ತಮಿ, ರೇವತಿ ನಕ್ಷತ್ರದಲ್ಲಿ ಆಗಸ್ಟ್ 8 ರಂದು ಶ್ರೀ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವ ಪ್ರಯುಕ್ತ ಅಂದು ಪ್ರಾತಃಕಾಲ 5.30ಕ್ಕೆ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಸಹಸ್ರನಾಮಾರ್ಚನೆ, ಬೆಳಿಗ್ಗೆ 9.30 ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ನಾಳೆ ಬೆಳಿಗ್ಗೆ 10.25 ಗಂಟೆಗೆ ಅಮ್ಮನವರಿಗೆ ಚಿನ್ನದ ಪಲ್ಲಕ್ಕಿ ಉತ್ಸವ ಮಂಟಪೋತ್ಸವ, ಪ್ರಸಾದ ವಿನಿಯೋಗವಿದೆ. ರಾತ್ರಿ 8.30ಕ್ಕೆ ಚಾಮುಂಡೇಶ್ವರಿಗೆ ಉತ್ಸವ ಫಲಪೂಜೆ, ದರ್ಬಾರ್ ಉತ್ಸವ, ಮಂಟಪೋತ್ಸವ ಹಾಗೂ ರಾಷ್ಟ್ರಾಶೀರ್ವಾದ ಜರುಗಲಿದೆ.

ನಾಳೆ ನಡೆಯುವ ವರ್ಧಂತಿ ಉತ್ಸವಕ್ಕೆ ರಾಜ್ಯ ಹಾಗೂ ಅಂತರಾಜ್ಯದಿಂದಲೂ ಪ್ರವಾಸಿಗರು ತಂಡೋಪತಂಡವಾಗಿ ಹರಿದು ಬರುವ ಕಾರಣ ಬೆಟ್ಟದಲ್ಲಿ ವಿಶೇಷ ಜಾಗೃತೆ ಹಾಗೂ ಭದ್ರತೆ ವಹಿಸಲಾಗಿದೆ.












Click it and Unblock the Notifications