ಉದಯಗಿರಿಯಲ್ಲಿ ಯುವಕನ ಬರ್ಬರ ಕೊಲೆ
ಮಾತ್ರೆ ತರಲೆಂದು ರಾತ್ರಿ ಔಷಧಿ ಅಂಗಡಿಗೆ ತೆರಳಿದ್ದ ರಾಘವೇಂದ್ರ ಎಂಬ ಮೈಸೂರಿನ ಯುವಕ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದಾನೆ.
ಮೈಸೂರು ಮಾರ್ಚ್ 20: ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವಕನನ್ನು ಕೆಲ ದುಷ್ಕರ್ಮಿಗಳು ಬರ್ಬರವಾಗಿ ಕೊಲೆಗೈದಿದ್ದಾರೆ.
ಕೊಲೆಯಾದಾತನನ್ನು ರಾಘವೇಂದ್ರ ನಗರದ ನಿವಾಸಿ ಪೇಂಟರ್ ವೃತ್ತಿ ಮಾಡಿಕೊಂಡಿದ್ದ ಸುರೇಶ್(30) ಎಂದು ಗುರುತಿಸಲಾಗಿದೆ. ಈತ ಮಾರ್ಚ್ 19 ರಂದು ರಾತ್ರಿ 10 ಗಂಟೆಯ ಸುಮಾರಿಗೆ ಮೆಡಿಕಲ್ ಶಾಪ್ ಗೆ ಮಾತ್ರೆ ತರಲೆಂದು ಬಂದಿದ್ದು, ರಾತ್ರಿ 12ಗಂಟೆ ಆದರೂ ಮನೆಗೆ ವಾಪಸ್ ಆಗಿರಲಿಲ್ಲ. ಗಾಬರಿಯಾದ ಮನೆಯವರು ಆತನನ್ನು ಹುಡುಕಿಕೊಂಡು ಬಂದರೆ, ಆತ ಎಲ್ಲಿಯೂ ಕಾಣಿಸಿಲ್ಲ. ಲೀಡ್ಸ್ ಜ್ಯೋತಿ ಪಬ್ಲಿಕ್ ಶಾಲೆಯ ಬಳಿ ನಾಯಿಗಳ ಬೊಗಳುವಿಕೆ ಕೇಳಿ ಸಂಶಯ ಬಂದು ನೋಡಿದರೆ ಸುರೇಶ್ ಅಲ್ಲಿ ಹೆಣವಾಗಿ ಬಿದ್ದಿದ್ದ. ಈ ಕುರಿತು ಮಾಹಿತಿ ಪಡೆದ ಉದಯಗಿರಿಠಾಣೆಯ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.[ಮೈಸೂರಿನಲ್ಲಿ ಹೆತ್ತ ಕೂಸಿನ ಕತ್ತು ಹಿಸುಕಿದಳು ನಿರ್ದಯಿ ತಾಯಿ!]

ಕತ್ತಿಗೆ ಗಾಜಿನ ತುಂಡಿನಿಂದ ಬಲವಾಗಿ ಹಲ್ಲೆ ಮಾಡಲಾಗಿದ್ದು, ಕೊಲೆಗೆ ಕಾರಣ ತಿಳಿದುಬಂದಿಲ್ಲ. ಮೃತ ಶರೀರವನ್ನು ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ












Click it and Unblock the Notifications