ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಾಯಿಯ ಸಾವಿನಿಂದ ನೊಂದ ಮಗ ಸೆಲ್ಫಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆ

By ಯಶಸ್ವಿನಿ ಎಂ.ಕೆ
|
Google Oneindia Kannada News

Recommended Video

ತಾಯಿಯ ಸಾವಿನಿಂದ ನೊಂದ ಮಗ ಸೆಲ್ಫಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆ | Oneindia Kannada

ಮೈಸೂರು, ಜನವರಿ 16 : ತಾಯಿಯ ಸಾವಿನಿಂದ ನೊಂದ ಮಗ ಸೆಲ್ಫಿ ವಿಡಿಯೋ ಮಾಡಿಟ್ಟು, ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ವಾಜಮಂಗಲದಲ್ಲಿ ನಡೆದಿದೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ವಾಜಮಂಗಲದ ರತ್ನಮ್ಮ (45) ನಿಧನರಾಗಿದ್ದರು. ತಾಯಿ ಅಗಲಿಕೆ ನೋವಿನಿಂದ ಮಗ ಸತೀಶ್ (29) ಕೂಡ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕಾನ್ ಸ್ಟೇಬಲ್ ಕಿರುಕುಳಕ್ಕೆ ಬೇಸತ್ತು ಇಪ್ಪತ್ನಾಲ್ಕರ ಯುವಕ ಆತ್ಮಹತ್ಯೆಕಾನ್ ಸ್ಟೇಬಲ್ ಕಿರುಕುಳಕ್ಕೆ ಬೇಸತ್ತು ಇಪ್ಪತ್ನಾಲ್ಕರ ಯುವಕ ಆತ್ಮಹತ್ಯೆ

ಸಾವಿಗೂ ಮುನ್ನ ಸತೀಶ್ ಎರಡೂವರೆ ಗಂಟೆಯ ವಿಡಿಯೋ ರೆಕಾರ್ಡ್‌ ಮಾಡಿಟಿದ್ದಾರೆ. 'ನನ್ನ ಎಲ್ಲ ಸ್ನೇಹಿತರಿಗೆ ಕಡೆಯ ನಮಸ್ಕಾರಗಳು. ನನ್ನ ತಾಯಿ ತೀರಿಕೊಂಡ ಕಾರಣ ನಾನು ಕೂಡ ಅವರ ಜೊತೆ ಹೋಗಬೇಕೆಂದು ನಿರ್ಧರಿಸಿದ್ದೇನೆ. ಈ ವಿಡಿಯೋ ಮಾಡಲು ಸ್ನೇಹಿತರು ನನ್ನ ಮೇಲೆ ಇಟ್ಟಿರೋ ಪ್ರೀತಿ, ವಿಶ್ವಾಸವೇ ಕಾರಣ. ನಿಮ್ಮಲ್ಲರಿಗೂ ಮೋಸ ಮಾಡಿ ಹೋಗುತ್ತಿದ್ದೇನೆ. ನನ್ನ ತಾಯಿಯನ್ನು ಬಿಟ್ಟಿರಲು ಸಾಧ್ಯವಾಗುತ್ತಿಲ್ಲ".

29 year old youth commits suicide after mother death

"ಪ್ರೀತಿಯ ಕುಮಾರಣ್ಣ, ಮಿನು, ಜೀತು, ಗಿರೀಶ್, ವಿನೋದ್ ಹಾಗೂ ಆಲನಹಳ್ಳಿ ಯೋಗೇಶ್ ಸೇರಿದಂತೆ ವಾಜಮಂಗಲದ ಜನತೆಗೆ ಕಡೆಯ ನಮಸ್ಕಾರಗಳು. ನನ್ನ ತಾಯಿ ಚೆನ್ನಾಗಿದ್ದರೆ ನಾನು ಕೂಡ ಚೆನ್ನಾಗಿರುತ್ತಿದ್ದೆ" ಎಂದು ಸತೀಶ್ ವಿಡಿಯೋದಲ್ಲಿ ಅಳಲು ಮಾತನಾಡಿದ್ದಾರೆ.

29 year old youth commits suicide after mother death

ಸತೀಶ್ ತನ್ನ ತಾಯಿಯನ್ನು ಅತಿಯಾಗಿ ಹಚ್ಚಿಕೊಂಡಿದ್ದ. ಹೀಗಾಗಿ ತಾಯಿಯ ಸಾವಿನ ಬೆನ್ನಲ್ಲೇ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಲ ವರ್ಷಗಳ ಹಿಂದಷ್ಟೇ ಸತೀಶ್ ತಂದೆಯೂ ತೀರಿಕೊಂಡಿದ್ದರು. ನಾಲ್ಕು ಜನರ ಕುಟುಂಬದಲ್ಲಿ ಈಗ ಒಬ್ಬ ಮಗಳಷ್ಟೇ ಬದುಕುಳಿದಿದ್ದಾಳೆ. ಕುಟುಂಬದ ಮೂವರನ್ನು ಕಳೆದುಕೊಂಡ ಮನೆ ಮಗಳ ಗೋಳು ಮುಗಿಲು ಮುಟ್ಟಿದೆ. ಈ ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.

English summary
Satish- 29 year old from Vajamangala, Mysuru commits suicide after his mother death. He captured selfie video before suicide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X