ಮೈಸೂರಿನಲ್ಲಿ 25 ವರ್ಷದ ಬ್ಯೂಟಿಷಿಯನ್ ಅನುಮಾನಾಸ್ಪದ ಸಾವು
ಮೈಸೂರು, ಜೂನ್ 26 : ಸೌಂದರ್ಯ ತಜ್ಞೆಯೊಬ್ಬರು (ಬ್ಯೂಟಿಷಿಯನ್) ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಮೈಸೂರಿನ ದಾಮೋದರ ಬಡಾವಣೆಯಲ್ಲಿ ನಡೆದಿದೆ. ರಮ್ಯಾ (25) ಮೃತ ದುರ್ದೈವಿ. ಮೈಸೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ರಮ್ಯಾ ಅವರು ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು.
6 ವರ್ಷಗಳ ಹಿಂದೆ ಮೈಸೂರಿನ ಆನಂದ್ ಎಂಬುವವರ ಜೊತೆ ರಮ್ಯಾ ವಿವಾಹವಾಗಿತ್ತು. ಎರಡು ವರ್ಷಗಳಿಂದ ಪತಿಯಿಂದ ಬೇರೆಯಾಗಿದ್ದ ರಮ್ಯಾ, ಸುನೀಲ್ ಎಂಬಾತನ ಜೊತೆ ವಾಸವಾಗಿದ್ದರು. ಸೋಮವಾರ ರಾತ್ರಿ ನೇಣು ಬಿಗಿದ ಸ್ಥಿತಿಯಲ್ಲಿ ರಮ್ಯಾ ಶವ ಪತ್ತೆಯಾಗಿದ್ದು, ಸುನೀಲ್ ಕೊಲೆ ಮಾಡಿದ್ದಾನೆ ಎಂದು ಮೃತಳ ಪೋಷಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ರಮ್ಯಾ ಸಾವು ಆತ್ಮಹತ್ಯೆಯೋ ಕೊಲೆಯೋ ಎಂಬ ಬಗ್ಗೆ ಅನುಮಾನಗಳು ಇದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿಕೊಳ್ಳಲಾಗಿದೆ. ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನಾ ಆಯಾಮಗಳಲ್ಲಿ ತನಿಖೆ ಕೂಡ ನಡೆಯುತ್ತಿದೆ. ಶೀಘ್ರದಲ್ಲೇ ಸಾವಿನ ಕಾರಣವನ್ನು ಬಯಲು ಮಾಡುವುದಾಗಿ ಪೊಲೀಸರು ತಿಳಿಸಿದ್ದಾರೆ.












Click it and Unblock the Notifications