ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೈಲುಕುಪ್ಪೆಯ ಶುಂಠಿಗದ್ದೆಯಲ್ಲಿದ್ದ 16 ಜೀತದಾಳುಗಳು ಬಂಧಮುಕ್ತ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 14: ಶುಂಠಿಗದ್ದೆಯಲ್ಲಿ ವೇತನಕೊಡದೆ ಅಕ್ರಮವಾಗಿ ದುಡಿಸಿಕೊಳ್ಳುತ್ತಿದ್ದ 14 ಮಂದಿ ಕಾರ್ಮಿಕರನ್ನು ಮೈಸೂರು ಜಿಲ್ಲಾಡಳಿತ ರಕ್ಷಿಸಿದೆ.

ಉತ್ತರ ಕರ್ನಾಟಕದ ಹಲವೆಡೆಯಿಂದ ಉತ್ತಮ ಸಂಬಳ, ವಸತಿ, ಊಟ ಕೊಡುವುದಾಗಿ ನಂಬಿಸಿ ಕರೆತಂದು ಕಳೆದ ಹಲವು ತಿಂಗಳಿನಿಂದ ಮೈಸೂರು ಬಯಲುಕುಪ್ಪೆ ಬಳಿ ದುಡಿಸಿಕೊಳ್ಳುತ್ತಿದ್ದ ಕಾರ್ಮಿಕರನ್ನು ಇಂಟರ್ ನ್ಯಾನಷಲ್ ಜಸ್ಟೀಸ್ ಮಿಷನ್ ಸ್ವಯಂಸೇವಾ ಸಂಸ್ಥೆ ನೇತೃತ್ವದಲ್ಲಿ ದಾಳಿ ನಡೆಸಿ ರಕ್ಷಿಸಲಾಗಿದೆ.

ಕರಾವಳಿಯ ಸಾವಿರಾರು ಕಾರ್ಮಿಕರು ಮತ್ತೆ ಸೌದಿಕರಣದ ಭೀತಿಯಲ್ಲಿ ಕರಾವಳಿಯ ಸಾವಿರಾರು ಕಾರ್ಮಿಕರು ಮತ್ತೆ ಸೌದಿಕರಣದ ಭೀತಿಯಲ್ಲಿ

ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಉದ್ಯೋಗ ಅರಸಿ ಬರುವ ಕಾರ್ಮಿಕರನ್ನು ನಿರಂಜನ್ ಎನ್ನುವ ವ್ಯಕ್ತಿ ಉತ್ತಮ ವಸತಿ ಮತ್ತು ಊಟ, ವೇತನ ನೀಡುವುದಾಗಿ ನಂಬಿಸಿ ಕರೆತಂದಿದ್ದ, ಆ ಪೈಕಿ ಗದಗ ಮೂಲದ ಪದವೀಧದರನೊಬ್ಬ ಸೇರಿದ್ದು, ರಾಜ್ಯದ ವಿವಿಧೆಡೆಯಿಂದ ಬಂದ ಬಡ ಯುವಕರನ್ನು ವೇತನವಿಲ್ಲದೆ ದುಡಿಸಿಕೊಳ್ಳಲಾಗುತ್ತಿತ್ತು.

14 bonded labour rescued from ginger farm in Bylukuppe

ಮಾಹಿತಿ ನೀಡಿರುವ ಇಂಟರ್ ನ್ಯಾಷನಲ್ ಜಸ್ಟೀಸ್ ಮಿಷನ್ ನಿರ್ದೇಶಕ ಇಂದ್ರಜೀತ್ ಪವಾರ್ ಜೀತದಾಳುಗಳನ್ನ ಮುಕ್ತಿಗೊಳಿಸಲು ನಮ್ಮ ಸಂಸ್ಥೆ ಕೆಲಸ ಮಾಡುತ್ತಿದೆ.

ಇಷ್ಟು ವರ್ಷಗಳಲ್ಲಿ ಅನಕ್ಷರಸ್ಥ ಹಾಗೂ ಬಡ ಕಾರ್ಮಿಕರು ಜೀತದಾಳುಗಳು ಇರುವುದು ಪತ್ತೆಯಗುತ್ತಿತ್ತು ಆದರೆ ಇದೇ ಮೊದಲ ಬಾರಿಗೆ ಪದವೀಧರನೊಬ್ಬ ಜೀತದಾಳುವಾಗಿ ಕೆಲಸ ಮಾಡುತ್ತಿದ್ದ ಘಟನೆ ಬೈಲುಕುಪ್ಪೆಯಲ್ಲಿ ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.

ಕನ್ನಡಿಗರಿಗೆ ಉರುಳಾಗುತ್ತಿದೆ ಸೌದಿ ಯುವರಾಜನ ಸುಧಾರಣಾ ಕ್ರಮ! ಕನ್ನಡಿಗರಿಗೆ ಉರುಳಾಗುತ್ತಿದೆ ಸೌದಿ ಯುವರಾಜನ ಸುಧಾರಣಾ ಕ್ರಮ!

38 ವರ್ಷ ಯುವಕ ರಾಘು ಮಲ್ಲೇಶಪ್ಪ ಬಳ್ಳಾರಿ ಎಂಬಾತ ತನ್ನ ನೋವನ್ನು ಉಪವಿಭಾಗಾಧಿಕಾರಿಗಳ ಎದುರು ಹೇಳಿಕೊಂಡಿದ್ದು ದಿನನಿತ್ಯ ಬೆಳಗ್ಗೆ 6ಗಂಟೆಯಿಂದ ರಾತ್ರಿ 7ಗಂಟೆವರೆಗೆ ಸುಮಾರು 13ತಾಸುಗಳ ಕಾಲ ಕೆಲಸ ಮಾಡಿಸಿಕೊಳ್ಳುತ್ತಿದ್ದರು, ಕಳಪೆ ಆಹಾರವನ್ನು ಕೊಡಲಾಗುತ್ತಿತ್ತು ಆದರೆ ಇದುವರೆಗೂ ಒಂದೇ ಒಂದು ದಿನದ ವೇತನವನ್ನು ಮಾಲಿಕರು ನೀಡಿಲ್ಲ ಎಂದು ದೂರಿದ್ದಾರೆ.

ಬೈಲುಕುಪ್ಪೆ ಬಳಿ ಇರುವ ಶುಂಠಿ ಗದ್ದೆಯ ಮಾಲೀಕ ಉಮೇಶ್ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆತನ ಸಹೋದರ ನಿರಂಜನ್ ಉತ್ತರ ಕರ್ನಾಟಕದ ಹಳ್ಳಿಗಳಿಂದ ಜನರನ್ನು ಕರೆತಂದು ವೇತನ ಕೊಡದೆ ಜೀತದಾಳುಗಳಾಗಿ ದುಡಿಸಿಕೊಳ್ಳುತ್ತಿದ್ದ ಎಂದು ಉಪ ವಿಭಾಗಾಧಿಕಾರಿ ತಿಳಿಸಿದ್ದಾರೆ.

English summary
An NGO, The International Justice Mission led team has rescued 14 bonded labour from ginger farm in Bylukuppe of Mysuru district
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X