Get Updates
Get notified of breaking news, exclusive insights, and must-see stories!

ಮೈಸೂರು: ಎಸ್ ಪಿಐ ಸಂಸ್ಥೆ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ

ಮೈಸೂರು, ಜ.8: ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿರುವ ಎಸ್ ಪಿಐ ಸಾಫ್ಟ್ ವೇರ್ ಸಂಸ್ಥೆಯ ಎಸ್ ಪಿಐ ಫೌಂಡೇಷನ್ ಹಲವು ಪ್ರಶಸ್ತಿಗಳಿಗೆ ಭಾಜನವಾಗಿದೆ. ಜೊತೆಗೆ ಸಾಮಾಜಿಕ ಕಳಕಳಿ ತೋರುವ ಸಂಸ್ಥೆಗಳನ್ನು ಸನ್ಮಾನಿಸುತ್ತಾ ಬಂದಿದೆ.

ಇತ್ತೀಚೆಗೆ ಲಿಟ್ಲ್ ಸಿಸ್ಟರ್ಸ್ ಆಫ್ ಪೂರ್ ಎನ್ ಜಿಒ ಸಲ್ಲಿಸಿರುವ ಸೇವೆ ಪರಿಗಣಿಸಿ ಕೆಕೆ ಮುಖರ್ಜಿ ಸಿಎಸ್ಆರ್ ಪ್ರಶಸ್ತಿಯನ್ನು ಎಸ್ ಪಿಐ ಸಂಸ್ಥೆ ನೀಡಿದೆ. ಎಸ್ ಪಿಐ ಸಂಸ್ಥೆಯ 20ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಎಸ್ ಪಿಐ ಸ್ಥಾಪಕ ವ್ಯವಸ್ಥಾಪಕ ನಿರ್ದೇಶಕರ ನೆನಪಿನಲ್ಲಿ ಪ್ರತಿ ವರ್ಷ ಕೆಕೆ ಮುಖರ್ಜಿ ಸಿಎಸ್ ಆರ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕಳೆದ ವರ್ಷದಿಂದ ಆರಂಭವಾದ ಈ ಪ್ರಶಸ್ತಿ 1 ಲಕ್ಷ ರು ಮೊತ್ತ, ಸ್ಮರಣಿಕೆಯನ್ನು ಹೊಂದಿದೆ.

SPI confers CSR award on 'Little Sisters of the Poor' in Mysuru

ಈ ಸಾಲಿನ ಪ್ರಶಸ್ತಿಯನ್ನು ಲಿಟ್ಲ್ ಸಿಸ್ಟರ್ಸ್ ಆಫ್ ಪೂರ್ ಸಂಸ್ಥೆಗೆ ನೀಡಲಾಗಿದ್ದು, ಮದರ್ ಜೆಮ್ಮೆ ಅವರು ಸಿದ್ ಮುಖರ್ಜಿ, ಸಿಇಒ ಹಾಗೂ ಎಸ್ ಪಿಐ ಚೇರ್ಮನ್ ಸೋಫಿ ಮುಖರ್ಜಿ ಅವರಿಂದ ಮೈಸೂರಿನ ಹೆಬ್ಬಾಳದಲ್ಲಿ ನಡೆದ ಸಮಾರಂಭದಲ್ಲಿ ಸ್ವೀಕರಿಸಿದರು.

ಎಸ್ ಪಿಐ ಫೌಂಡೇಷನ್ ದತ್ತು ಪಡೆದಿರುವ ಶಾಲೆಯ ವಿಕಲಚೇತನ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ಜಿಲ್ಲಾಧಿಕಾರಿ ಸಿ. ಶಿಖಾ ಅವರು ಉಪಸ್ಥಿತರಿದ್ದರು. ಬೆನ್ನಿ ದಯಾಳ್ ಹಾಗೂ ಶಕ್ತಿಶ್ರೀ ಗೋಪಾಲನ್ ಹಾಡುಗಾರಿಕೆ ಮೂಲಕ ಎಸ್ ಪಿಐ ಸಂಸ್ಥೆಯ 20ನೇ ವಾರ್ಷಿಕೋತ್ಸವ ಆಚರಿಸಲಾಯಿತು.

ಲಿಟ್ಲ್ ಸಿಸ್ಟರ್ಸ್ ಅಫ್ ದಿ ಪ್ಯೂರ್: ಸರ್ಕಾರೇತರ ಸಂಸ್ಥೆಯಾಗಿರುವ ಲಿಟ್ಲ್ ಸಿಸ್ಟರ್ಸ್ ಅಫ್ ದಿ ಪ್ಯೂರ್, ವಯೋವೃದ್ಧರ ಅರೈಕೆ ಮಾಡುತ್ತಿದೆ. ಯಾವುದೇ ಜಾತಿ, ಧರ್ಮ, ಮತ ಪಂಥಗಳನ್ನು ನೋಡದೆ ಎಲ್ಲರಿಗೂ ಒಂದೇ ಸೂರಿನಡಿಯಲ್ಲಿ ಆಶ್ರಯ, ಆರೈಕೆ, ಅಕ್ಕರೆಯ ನೆಲೆ ಸಿಗಲಿದೆ. ಯಾವುದೇ ಆರ್ಥಿಕ ನೆರವು ಬಯಸದ ಈ ಸಂಸ್ಥೆ ದಾನಿಗಳು ನೀಡುವ ಮೊತ್ತದಿಂದಲೇ ಕಾರ್ಯನಿರ್ವಹಿಸುತ್ತ ಬಂದಿದೆ.

ಎಸ್ ಪಿಐ ಫೌಂಡೇಶನ್: ಎಸ್ ಪಿಐ ಸಾಫ್ಟ್ ವೇರ್ ಕಂಪನಿಯ ದಾನ ದತ್ತಿ ಸಂಸ್ಥೆಯಾಗಿದ್ದು, 2007ರಿಂದ ಕಾರ್ಯ ನಿರ್ವಹಿಸುತ್ತಿದೆ. ಶಿಕ್ಷಣ, ಆರೋಗ್ಯ, ಪರಿಸರ ಹಾಗೂ ವೃದ್ಧರ ಆರೈಕೆಗಾಗಿ ಶ್ರಮಿಸುತ್ತಿದೆ. ಕಳೆದ ದಸರಾ ಜಂಬೂಸವಾರಿ ಉದ್ದಕ್ಕೂ ಎಸ್ ಪಿಐ ಸಂಸ್ಥೆಯ ಉದ್ಯೋಗಿಗಳು ನಿರಂತರವಾಗಿ ಪೊಲೀಸರು ಮತ್ತು ಕಲಾವಿದರಿಗೆ ಕುಡಿಯುವ ನೀರು ಒದಗಿಸಿ ಎಸ್ಪಿಐ ಸಂಸ್ಥೆ ಗಮನ ಸೆಳೆದಿತ್ತು.

ಒನ್ ಇಂಡಿಯಾ ಸುದ್ದಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+