ಮೈಸೂರು ವಿಜ್ಞಾನ ಹಬ್ಬಕ್ಕೆ 10,000 ಮಂದಿ ಬರುವ ನಿರೀಕ್ಷೆ

By: ಡಾ. ಅನಂತ ಕೃಷ್ಣನ್. ಎಂ
Subscribe to Oneindia Kannada

ಮೈಸೂರು, ಡಿಸೆಂಬರ್,26: ಸಾಂಸ್ಕೃತಿಕ ನಗರಿ ಮೈಸೂರು ಜನವರಿ 3 ರಿಂದ 7ರವರೆಗೆ ನಡೆಯುವ 103ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಅಧಿವೇಶನಕ್ಕೆ ಭರದಿಂದಲೇ ಸಜ್ಜುಗೊಳ್ಳುತ್ತಿದೆ. ಈಗಾಗಲೇ ಎಲ್ಲೆಡೆ ಬಿಗಿ ಬಂದೋಬಸ್ತ್ ಏರ್ಪಡಿಲಾಗಿದ್ದು, ವಿಶ್ವಮಟ್ಟದ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ.

ಮೈಸೂರು ವಿಶ್ವವಿದ್ಯಾಲಯ 100 ವರ್ಷ ಪೂರೈಸಿದ ಸಂಭ್ರಮದ ಹಿನ್ನೆಲೆಯಲ್ಲೇ ಮೈಸೂರಿನ ಮಾನಸ ಗಂಗೋತ್ರಿ ಆವರಣದಲ್ಲಿ 103ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಅಧಿವೇಶನ ಉದ್ಘಾಟನೆ ಹಮ್ಮಿಕೊಂಡಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ವಿಭಿನ್ನ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಲಿದ್ದಾರೆ ಎಂದು ಮೈಸೂರು ವಿವಿ ಕುಲಪತಿ ರಂಗಪ್ಪ ತಿಳಿಸಿದರು.[ದೇಶದ ಅತಿದೊಡ್ಡ ವಿಜ್ಞಾನ ಹಬ್ಬಕ್ಕೆ ಮೈಸೂರು ಸಿದ್ಧತೆ]

Mysuru

103ನೇ ಮೈಸೂರು ವಿಜ್ಞಾನ ಹಬ್ಬ ಕಾರ್ಯಕ್ರಮದಲ್ಲಿ 'ಭಾರತದ ಬೆಳವಣಿಗೆಗೆ ವಿಜ್ಞಾನ ತಂತ್ರಜ್ಞಾನ ಹೇಗೆ ಪೂರಕವಾಗಲಿದೆ' ಎಂಬ ವಿಷಯ ಮೇಲೆ ವಿಚಾರಗೋಷ್ಠಿ ನಡೆಯಲಿದೆ. ಈ ವಿಶ್ವಮಟ್ಟದ ಅಧಿವೇಶನಕ್ಕೆ ಬರುವ ಪ್ರತಿಯೊಬ್ಬರಿಗೂ ಊಟ, ವಸತಿ ಸೌಲಭ್ಯ, ಸಮಾವೇಶಕ್ಕೆ ಸಂಬಂಧಿಸಿದ ಮಾಹಿತಿ ಕಿಟ್ ಸೇರಿದಂತೆ 1,800 ವೆಚ್ಚವನ್ನು ಮಾತ್ರ ತೆಗೆದುಕೊಳ್ಳುತ್ತಿದ್ದೇವೆ. ಚೀನಾದ ಮಂದಿಯೇ ಹೆಚ್ಚು ಆಗಮಿಸುವ ಸಾಧ್ಯತೆ ಇದೆ ಎಂದು ಡಾ. ರಾಜ ರಾಮಣ್ಣ ಹೇಳಿದರು.

ಈ ಕಾರ್ಯಕ್ರಮಕ್ಕೆ ಆಗಮಿಸಲು ಸುಮಾರು 8000 ಕ್ಕೂ ಹೆಚ್ಚು ಮಂದಿ ನೋಂದವಣೆ ಮಾಡಿಕೊಂಡಿದ್ದು, ಹಿರಿಯರು, ಕಿರಿಯರು ಸೇರಿದಂತೆ ಸುಮಾರು 10,000ಕ್ಕೂ ಹೆಚ್ಚು ಮಂದಿ ಈ ಸಮಾವೇಶದಲ್ಲಿ ಪಾಲ್ಗೊಳ್ಳುವ ಸಾದ್ಯತೆ ಇದೆ. ಈಗಾಗಲೇ ಮದುವೆ ಮಂಟಪ ಸೇರಿದಂತೆ ಹಲವಾರು ಕಡೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. 8,500 ಹೋಟೆಲ್ ಕೋಣೆ, ಸುತ್ತೂರು ಮಠದಲ್ಲಿ 800ಕೋಣೆಗಳನ್ನು ಆಗಮಿಸುವ ಗಣ್ಯರಿಗಾಗಿ ಕಾಯ್ದಿರಿಸಲಾಗಿದೆ.[ದಲೈಲಾಮರ ರಕ್ಷಣಾ ಸಿಬ್ಬಂದಿಗೆ ನಾಯಿ ಕಚ್ಚಿದರೂ ರಜೆ ಇಲ್ಲ!]

Mysuru

ಮಹಿಳಾ ವಿಜ್ಞಾನ ಕಾಂಗ್ರೆಸ್ ಮತ್ತು ಮಕ್ಕಳ ವಿಜ್ಞಾನ ಕಾಂಗ್ರೆಸ್ ಎಂಬ ಎರಡು ವಿಭಾಗದಲ್ಲಿ ನಡೆಯುವ ಈ ಕಾರ್ಯಕ್ರಮವು ಜನವರಿ 7ರಂದು ಮುಕ್ತಾಯವಾಗಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ವಿದ್ಯಾರ್ಥಿಗಳು ಸೇರಿದಂತೆ ಸಾಮಾನ್ಯವಾರ್ಗದವರಿಗೂ ತಲುಪಲಿ ಎಂಬ ಉದ್ದೇಶದಿಂದ ನೋಂದಾವಣಿಗೆ ಕಡಿಮೆ ಹಣ ನಿಗದಿಪಡಿಸಲಾಗಿದೆ ಎಂದು 103ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ನ ಕಾರ್ಯದರ್ಶಿ ಡಾ.ಎನ್ ಬಿ ರಾಮಚಂದ್ರ ತಿಳಿಸಿದರು.

ವಿಜ್ಞಾನವು ಸಾಮಾನ್ಯ ಜನರ ಸಮಸ್ಯೆಯನ್ನು ಬಗೆಹರಿಸುವಲ್ಲಿ ಮೈಲಿಗಲ್ಲಾಗಲಿದೆ. ಇದರಿಂದ ಆರ್ಥಿಕ ಬೆಳವಣಿಗೆ ಮತ್ತು ಜನರ ಜೀವನ ಮಟ್ಟ ಸುಧಾರಣೆಯಾಗಲಿದೆ. ಆದರೆ ಇದು ನಮ್ಮ ಆಲೋಚನ ಮಟ್ಟವನ್ನು ಮತ್ತಷ್ಟು ಸುಧಾರಿಸಿಕೊಳ್ಳುವಲ್ಲಿ ಇದು ಒಳ್ಳೆಯ ಸಮಯ ಎಂದು ತಳಿಶಾಸ್ತ್ರ ಪ್ರಾಧ್ಯಾಪಕರಾದ ಡಾ. ರಾಮಚಂದ್ರ ಕಾರ್ಯಕ್ರಮದ ಉಪಯೋಗದ ಬಗ್ಗೆ ಮಾಹಿತಿ ಒದಗಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mysuru races ahead to host 103rd Indian Science Congress. This programme starts on January 3rd to 07th.Prime Minister Narendra Modi will inaugurate the 103ISC on January 3 at the amphitheatre situated inside the Manasagangotri campus. Around 10,000 people have already registered for the event from across the globe.
Please Wait while comments are loading...