ಮೈಸೂರು: ಕೋರ್ಟಿನ ಬಳಿ 'ಕುಕ್ಕರ್ ಬಾಂಬ್' ಇಟ್ಟವರು ಯಾರು?

By: ವಿಕಾಸ್ ನಂಜಪ್ಪ
Subscribe to Oneindia Kannada

ಮೈಸೂರು, ಆಗಸ್ಟ್ 02: ಮೈಸೂರು ಕೋರ್ಟ್ ಆವರಣದಲ್ಲಿರುವ ಸಾರ್ವಜನಿಕ ಶೌಚಾಲಯದಲ್ಲಿ ಸೋಮವಾರ ಸಂಜೆ ಸಂಭವಿಸಿದ ಬಾಂಬ್ ಸ್ಫೋಟದ ತನಿಖೆ ತೀವ್ರಗೊಂಡಿದೆ. ಫ್ರೆಶರ್ ಕುಕ್ಕರ್ ಬಾಂಬ್ ಬಳಿಸಿ ಸ್ಫೋಟ ಮಾಡಲಾಗಿದೆ ಎಂಬುದು ಈಗ ಸ್ಪಷ್ಟವಾಗಿದೆ.

ಕೋರ್ಟ್ ಆವರಣದಲ್ಲಿ 3 ಬ್ಯಾಟರಿ ಸೆಲ್ ಗಳು ಪತ್ತೆಯಾಗಿತ್ತು.ಘಟನಾ ಸ್ಥಳದಲ್ಲಿ ಒಂದು ಸಿಮ್ ಕಾರ್ಡ್ ಹಾಗೂ ಗನ್ ಪೌಡರ್ ಸಿಕ್ಕಿದೆ. ಅಮೋನಿಯಂ ನೈಟ್ರೇಟ್ ಬಳಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ವಿಧಿ ವಿಜ್ಞಾನ ತಂಡ ನೀಡುವ ಮಾಹಿತಿ ಆಧಾರದ ಮೇಲೆ ತನಿಖೆ ನಡೆಸಲಾಗುತ್ತದೆ.

ಈ ಹಿಂದೆ ಬಿಹಾರದ ಕೋರ್ಟ್ ಆವರಣದಲ್ಲಿ ಇದೇ ಮಾದರಿ ಸ್ಫೋಟಕ ಬಳಸಲಾಗಿತ್ತು. ಎಲ್ಲಾ ಬಗೆಯ ಕೋನಗಳಿಂದ ಪ್ರಕರಣವನ್ನು ನೋಡಲಾಗುತ್ತಿದೆ. ಘಟನೆಯಲ್ಲಿ ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸ್ಫೋಟದ ತೀವ್ರತೆ ಅಧಿಕವಾಗಿತ್ತು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. [ಘಟನಾ ಸ್ಥಳಕ್ಕೆ ಭೇಟಿ ನೀಡಿದ ಗೃಹಸಚಿವ ಪರಮೇಶ್ವರ]

ಸೋಮವಾರ ಸಂಜೆ 4.15ರ ಸುಮಾರಿಗೆ ನ್ಯಾಯಾಲಯದ ಹಿಂಬದಿಯಲ್ಲಿರುವ ಶೌಚಾಲಯದಲ್ಲಿ ಭಾರಿ ಶಬ್ದ ಕೇಳಿ ಬಂದಿದ್ದು, ಶೌಚಾಲಯದ ಕಿಟಕಿ, ಬಾಗಿಲುಗಳು ಧ್ವಂಸಗೊಂಡಿತ್ತು.ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಸಿಬ್ಬಂದಿ ದೌಡಾಯಿಸಿದ್ದರು. ಲಕ್ಷ್ಮಿಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮೈಸೂರು ಕೋರ್ಟ್ ಆವರಣಕ್ಕೆ ಭೇಟಿ ನೀಡಿದ ಗೃಹಸಚಿವ ಜಿ ಪರಮೇಶ್ವರ, ಮೈಸೂರು ಜಿಲ್ಲಾಧಿಕಾರಿ ಶಿಖಾ ಅವರು ಸ್ಫೋಟ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

 ಬಿಹಾರದಲ್ಲಿ ನಡೆದ ಘಟನೆಗೆ ತುಲನೆ

ಬಿಹಾರದಲ್ಲಿ ನಡೆದ ಘಟನೆಗೆ ತುಲನೆ

ಬಿಹಾರದ ಕೋರ್ಟ್ ಆವರಣದಲ್ಲಿ ಇದೇ ರೀತಿ ಈ ಹಿಂದೆ ಬಾಂಬ್ ಸ್ಫೋಟ ಸಂಭವಿಸಿತ್ತು. ಕೋರ್ಟಿನಲ್ಲಿ ವಿಚಾರಣೆ ನಡೆಯುವ ಸಂದರ್ಭದಲ್ಲಿ ಎಲ್ಲರ ಗಮನ ಬೇರೆಡೆಗೆ ಸೆಳೆದು, ಆರೋಪಿಗಳು ತಪ್ಪಿಸಿಕೊಳ್ಳಲು ಕಡಿಮೆ ತೀವ್ರತೆಯ ಸ್ಫೋಟಕಗಳನ್ನು ಬಳಸಲಾಗಿತ್ತು. ಇದೇ ರೀತಿ ಮೈಸೂರಿನಲ್ಲೂ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಉಗ್ರರ ಕೈವಾಡದ ಶಂಕೆ ಇದೆಯೆ?

ಉಗ್ರರ ಕೈವಾಡದ ಶಂಕೆ ಇದೆಯೆ?

ಸದ್ಯದ ಮಾಹಿತಿ ಪ್ರಕಾರ ಅಮೋನಿಯಂ ನೈಟ್ರೇಟ್ ಬಳಕೆ ಖಚಿತವಾಗಿಲ್ಲ. ಅಲ್ಲದೆ, ಬಾಂಬ್ ಸ್ಫೋಟದ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ಉಗ್ರರ ಕೈವಾಡದ ಬಗ್ಗೆ ಯಾವುದೇ ಮಾಹಿತಿ ಇನ್ನೂ ಸಿಕ್ಕಿಲ್ಲ.

ಆತಂಕ ಸೃಷ್ಟಿಸಿದ ಕಚ್ಚಾಬಾಂಬ್

ಆತಂಕ ಸೃಷ್ಟಿಸಿದ ಕಚ್ಚಾಬಾಂಬ್

ನ್ಯಾಯಾಲಯದ ಆವರಣದಲ್ಲಿ ಸ್ಫೋಟಗೊಂಡ ಕಚ್ಚಾಬಾಂಬ್ ಸಣ್ಣ ಪ್ರಮಾಣದ್ದಾದರೂ ಸ್ಫೋಟಕ ತೀವ್ರತೆಗೆ ಶೌಚಾಲಯದ ಕಿಟಕಿ, ಬಾಗಿಲು, ಮೇಲ್ಛಾವಣಿ ಹಾಳಾಗಿದೆ. ಕಟ್ಟಡದ ಹೊರಭಾಗದ ಗೋಡೆ ಬಿರುಕು ಬಿಟ್ಟಿದೆ. ಘಟನೆ ಬಳಿಕ ಸಮೀಪದಲ್ಲಿರುವ ಚಾಮರಾಜಪುರಂ ರೈಲು ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ವಕೀಲರಿಂದ ಪ್ರತಿಭಟನೆ

ವಕೀಲರಿಂದ ಪ್ರತಿಭಟನೆ

ಮೈಸೂರಿನ ನ್ಯಾಯಾಲಯದಲ್ಲಿ ವಕೀಲರಿಗೆ ಸೂಕ್ತ ಭದ್ರತೆ ಒದಗಿಬೇಕು ಎಂದು ಆಗ್ರಹಿಸಿ, ಜಿಲ್ಲಾ ನ್ಯಾಯಾಲಯದ ಮುಂದೆ ಮಂಗಳವಾರ ಬೆಳಗ್ಗೆ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ. ಕೋರ್ಟ್ ಕಲಾಪಗಳನ್ನು ವಕೀಲರು ಬಹಿಷ್ಕರಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Investigations being conducted into the explosion that took place outside a court in Mysuru on Monday have revealed that the bomb was planted in a pressure cooker.
Please Wait while comments are loading...