ಮಂಡ್ಯ ರಮೇಶ್, ಸಾಧುಕೋಕಿಲ ಮೇಲೆ ಲೈಂಗಿಕ ಶೋಷಣೆ ಆರೋಪ!

Posted By:
Subscribe to Oneindia Kannada

ಮೈಸೂರು, ಡಿಸೆಂಬರ್ 22 : ಮಂಡ್ಯ ರಮೇಶ್, ಸಾಧು ಕೋಕಿಲ ನಮ್ಮ ಸ್ಪಾಗೆ ಬರುತ್ತಿದ್ದರು. ನನ್ನಿಂದ ಮಸಾಜ್ ಮಾಡಿಸಿಕೊಳ್ಳುತ್ತಿದ್ದರು. ನನ್ನನ್ನು ಲೈಂಗಿಕವಾಗಿ ಶೋಷಿಸುತ್ತಿದ್ದರು ಎಂದು ಯುವತಿಯೊಬ್ಬಳು ಹೇಳಿರುವುದಾಗಿ ಆರೋಪ ಕೇಳಿಬಂದಿದೆ.

ಸ್ಟೋಟಕ ಸುದ್ದಿ : ಖ್ಯಾತ ನಟರಿಬ್ಬರ ಮೇಲೆ ಲೈಂಗಿಕ ಕಿರುಕುಳ ಆರೋಪ!

ಇಲ್ಲಿನ ಸ್ಪಾನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟರಾದ ಮಂಡ್ಯ ರಮೇಶ್, ಸಾಧು ಕೋಕಿಲ ಹೆಸರು ಬಂದಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹಳ್ಳಿಯಿಂದ ಪಾರ್ಲರ್ ನಲ್ಲಿ ಕೆಲಸ ಕೊಡಿಸುವುದಾಗಿ ಮಹಿಳೆಯೊಬ್ಬಳು ನನ್ನನ್ನು ರಾಜೇಶ್ ಬಳಿ ಕಳುಹಿಸಿದರು. ಆದರೆ ರಾಜೇಶ್ ಪಾರ್ಲರ್ ನಲ್ಲಿ ಪುರಷರಿಗೆ ಬಾಡಿ ಮಸಾಜ್ ಮಾಡುವಂತೆ ಬಲವಂತ ಪಡಿಸಿದರು ಎಂದು ಆಕೆ ಆರೋಪಿಸಿದ್ದಾಳೆ.

Kannada film actors Mandya Ramesh, Sadhu Kokila name in Mysuru scandal

ರೂಮಿನಲ್ಲಿ ಕೂಡಿ ಹಾಕಿ ಸಹಕರಿಸುವಂತೆ ಬಲವಂತ ಮಾಡಿದರು. ಕನ್ನಡ ಚಿತ್ರರಂಗದ ಸಾಧು ಕೋಕಿಲ ಹಾಗೂ ಮಂಡ್ಯ ರಮೇಶ್‌ ಗೆ ಎರಡು ಬಾರಿ ನಾನು ಬಾಡಿ ಮಸಾಜ್ ಮಾಡಿದ್ದೇನೆ. ಆ ಸಂದರ್ಭದಲ್ಲಿ ಖಾಸಗಿ ಅಂಗಗಳನ್ನು ಮುಟ್ಟುವಂತೆ ಒತ್ತಾಯಿಸುತ್ತಿದ್ದರು. ಹಾಗೆ ಮಾಡಿದರೆ ಅವರು ನನ್ನ‌ ಗುಪ್ತಾಂಗ ಮುಟ್ಟುತ್ತಿದ್ದರು. ನಿರಾಕರಿಸಿದರೆ ಮಾಲೀಕನಿಗೆ ದೂರುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ಆರೋಪಿಸಿದ್ದಾಳೆ.

ಹಣದ ಆಮಿಷ ತೋರಿಸಿ, ಲೈಂಗಿಕ ಸುಖಕ್ಕೆ ಇಬ್ಬರೂ ಒತ್ತಾಯಿಸುತ್ತಿದ್ದರು ಎಂದು ಯುವತಿ ಆರೋಪಿಸಿದ್ದಾಳೆ. ಈ ಕುರಿತಾಗಿ ಮಾಹಿತಿ ನೀಡಿದ ನಟ ಮಂಡ್ಯ ರಮೇಶ್, ಯುವತಿಯ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. ನನಗೆ ಆ ಯುವತಿ ಯಾರೆಂದು ಚಾಮುಂಡೇಶ್ವರಿಯ ಮೇಲಾಣೆ ಗೊತ್ತಿಲ್ಲ. ನಾನು ಸ್ಪಾದಉದ್ಘಾಟನೆಗೆ ತೆರಳಿದ್ದಾಗ ಮಾತ್ರವೇ ಆ ಅಂಗಡಿಯನ್ನು ಗಮನಿಸಿದ್ದೆ. ಮುಂದಿನದು ನನಗೆ ಅರಿವಿಲ್ಲ ಎಂದಿದ್ದಾರೆ.

ಸ್ಪಾ ಉದ್ಘಾಟಿಸಿದ್ದು ನಾನೇ. ಆದರೆ ನನ್ನ ಉತ್ತಮ ಕಾರ್ಯಗಳಿಗೆ ಇದೊಂದು ಕಪ್ಪು ಚುಕ್ಕೆ ಇದ್ದಂತೆ ಎಂದು ಅವರು ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Allegation of sexual exploitation against Kannada film actors Mandya Ramesh and Sadhu Kokila. Girl who was working in spa at Mysuru, alleged about sexual exploitation against actors.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ