ಕರ್ನಾಟಕದಲ್ಲಿ ಹಿಂದೂಗಳು ಸುರಕ್ಷಿತವಾಗಿಲ್ಲ: ಪ್ರತಾಪ್ ಸಿಂಹ

By: ವಿಕಾಸ್ ನಂಜಪ್ಪ
Subscribe to Oneindia Kannada

ಮೈಸೂರು, ಮಾರ್ಚ್ 15: ವಿಶ್ವ ಹಿಂದೂ ಪರಿಷತ್ (ವಿಎಚ್ ಪಿ) ಹಾಗೂ ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾರ್ಯಕರ್ತ ರಾಜು ಹತ್ಯೆ, ಮಂಡಿ ಮೊಹಲ್ಲಾ ಸೇರಿದಂತೆ ಮೈಸೂರಿನ ಅನೇಕ ಭಾಗಗಳಲ್ಲಿ ಗಲಭೆ, ಕೋಮು ಸೌಹಾರ್ದತೆಗೆ ಧಕ್ಕೆ ಬರುವ ಘಟನೆಗಳ ಬಗ್ಗೆ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಒನ್ ಇಂಡಿಯಾ ಪ್ರತಿನಿಧಿ ಜೊತೆ ಮಾತನಾಡಿದ್ದಾರೆ.

ರಾಜು ಹತ್ಯೆ ರಾಜಕೀಯ ಪಕ್ಷಗಳ ನಡುವಿನ ಆರೋಪ ಪ್ರತ್ಯಾರೋಪಗಳಿಗೆ ವೇದಿಕೆಯಾಗಿದೆ. ಬಿಜೆಪಿ ಈ ಪ್ರಕರಣದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆರೋಪಿಗಳನ್ನು ಬಂಧಿಸಿ ಎಂದರೆ ನಮ್ಮನ್ನು ದೂರುತ್ತಾರೆ ಎಂದು ಬಿಜೆಪಿ ತಿರುಗೇಟು ನೀಡಿದೆ.[ಮೈಸೂರಲ್ಲಿ ರಾಜು ಹತ್ಯೆ : ಯಾರು, ಏನು ಹೇಳಿದರು?]

ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ: ಕರ್ನಾಟಕದಲ್ಲಿ ಹಿಂದೂಗಳಿಗೆ ಸರಿಯಾದ ಸುರಕ್ಷತೆ ಇಲ್ಲ. ಹಿಂದೂ ಸಂಘಟನೆಗಳ ಕಾರ್ಯಕರ್ತರಾದ ಪ್ರಶಾಂತ್ ಪೂಜಾರಿ, ಕುಟ್ಟಪ್ಪ ಹಾಗೂ ರಾಜು ಕೊಲೆ ಇದಕ್ಕೆ ನಿದರ್ಶನ. ಸಿದ್ದರಾಮಯ್ಯ ಅವರ ಸರ್ಕಾರ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ. ಹಿಂದೂಗಳು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.[ಮೈಸೂರು ಬಂದ್: ಭದ್ರತೆಯಲ್ಲಿ ರಾಜು ಅಂತ್ಯಸಂಸ್ಕಾರ]

ದುಷ್ಕರ್ಮಿಗಳು ಯಾರೇ ಇರಲಿ ಅವರನ್ನು ಕೂಡಲೇ ಬಂಧಿಸಿ, ಶಿಕ್ಷೆ ವಿಧಿಸಬೇಕು. ನಾವು 25ಲಕ್ಷ ರು ಪರಿಹಾರ ಧನ ಬೇಡಿಕೆ ಇರಿಸಿದ್ದೇವೆ. ಆದರೆ, 5 ಲಕ್ಷ ರು ಮಾತ್ರ ಸಿಗುವ ಭರವಸೆ ಸಿಕ್ಕಿದೆ. ಪಕ್ಷದ ನೆರವಿನಿಂದ ನಾವೇ 10 ಲಕ್ಷ ರು ಸಂಗ್ರಹಿಸಿದ್ದೇವೆ. ಸಾರ್ವಜನಿಕರು ಕೂಡಾ ದೇಣಿಗೆ ನೀಡುತ್ತಿದ್ದಾರೆ ಎಂದರು. [ವಿಡಿಯೋ: ರಾಜು ಹತ್ಯೆ ಬಗ್ಗೆ ಸಂಸದ ಪ್ರತಾಪ್ ಸಿಂಹ ಅವರ ಪ್ರತಿಕ್ರಿಯೆ]

ಹಿಂದೂ ಕಾರ್ಯಕರ್ತರು ಭಯದಿಂದ ಬದುಕುತ್ತಿದ್ದಾರೆ

ಹಿಂದೂ ಕಾರ್ಯಕರ್ತರು ಭಯದಿಂದ ಬದುಕುತ್ತಿದ್ದಾರೆ

ನನಗನಿಸುವ ಮಟ್ಟಿಗೆ ಕರ್ನಾಟಕದಲ್ಲಿ ಹಿಂದೂ ಕಾರ್ಯಕರ್ತರು ಭಯದಿಂದ ಬದುಕುತ್ತಿದ್ದಾರೆ.. ಇಲ್ಲದ ಕೇಸುಗಳನ್ನು ಜಡಿದು ಸುಖಾಸುಮ್ಮನೆ ಹಿಂದೂ ಕಾರ್ಯಕರ್ತರನ್ನು ಆರೋಪಿಗಳನ್ನಾಗಿಸಲು ಸೂಚನೆ ಸಿಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳೆ ದುಃಖದಿಂದ ಹೇಳೀಕೊಂಡಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಕಾಲೋನಿಯಿಂದ ಜಲ ಹಾಗೂ ವಿದ್ಯುತ್ ಬಿಲ್ ಸಂಗ್ರಹಿಸಲು ಕೂಡಾ ಕೆಲ ಅಧಿಕಾರಿಗಳು ಹೆದರುತ್ತಿದ್ದಾರೆ.[ವರ್ಷದ ಹಿನ್ನೋಟ : ಹಿಂದೂ ಕಾರ್ಯಕರ್ತರ ಸಾವಿನ ಸರಣಿ]

ಯಾವುದೇ ಪ್ರತಿಭಟನೆಗೂ ಬಗ್ಗದ ಸರ್ಕಾರ

ಯಾವುದೇ ಪ್ರತಿಭಟನೆಗೂ ಬಗ್ಗದ ಸರ್ಕಾರ

ರಾಜು ಅವರ ಅಂತಿಮ ಸಂಸ್ಕಾರ ನಡೆಯುವ ನಾವೆಲ್ಲರೂ ಪಾಲ್ಗೊಂಡಿದ್ದೆವು. ಆಕ್ರೋಶ ಭರಿತರಾಗಿ ಕೆಲವು ಕಲ್ಲುತೂರಾಟ ನಡೆಸಿದರು.ಯಾವುದೇ ಪ್ರತಿಭಟನೆಗೂ ಬಗ್ಗದ ಸರ್ಕಾರ ಸುಮ್ಮನಾಗಿದೆ.

ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ಮೇಲೆ ಎಸ್ ಡಿ ಪಿಐ ಹಾಗೂ ಪಿಎಫ್ ಐ ವಿರುದ್ಧದ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿದೆ. ಹೀಗಾಗಿ ಸಮಾಜದ ಆರೋಗ್ಯ ಕದಡಲು, ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಲು ಸುಲಭವಾಗಿದೆ.[ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಬಿಜೆಪಿ ಮುಖಂಡನ ಹತ್ಯೆ]

ತನಿಖೆಯಲ್ಲಿ ಮೂಗು ತೂರಿಸುವ ಸರ್ಕಾರ

ತನಿಖೆಯಲ್ಲಿ ಮೂಗು ತೂರಿಸುವ ಸರ್ಕಾರ

ಸಿದ್ದರಾಮಯ್ಯ ಅವರು ಎಲ್ಲಾ ಪ್ರಕರಣಗಳ ಬಗ್ಗೆ ಆತುರದ ಹೇಳಿಕೆ ನೀಡುತ್ತಿದ್ದಾರೆ. ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆ ವೇಳೆ ಕುಟ್ಟಪ್ಪ ಅವರ ಹತ್ಯೆ ಯಾಗಿದ್ದರ ಬಗ್ಗೆ ಮುಖ್ಯಮಂತ್ರಿಗಳು ಹೇಳಿದ್ದನ್ನೇ ಅವರ ಕ್ಯಾಬಿನೇಟ್ ಸಚಿವರು ಹೇಳುತ್ತಾರೆ. ಈ ಬಗ್ಗೆ ತನಿಖೆಯ ಮಾತೇ ಆಡಲ್ಲ.

ರೈತರ ಸಾವಿನ ಬಗ್ಗೆ ಒಬ್ಬ ಸಚಿವರು ಮಾತನಾಡುತ್ತಾ, ರೈತರು ಸೋಮಾರಿಗಳು ಎಂದು ಹೇಳುತ್ತಾರೆ. ಡಿಕೆ ರವಿ ಕೇಸಿನಲ್ಲಿ ಅಂದಿನ ಗೃಹ ಸಚಿವ ಜಾರ್ಜ್ ಅವರು ನೀಡಿದ ಅಸಂಬದ್ಧ ಹೇಳಿಕೆ ಬಗ್ಗೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಯಿತು.

ಪೊಲೀಸ್ ಇಲಾಖೆ ಕೈಕಟ್ಟಿ ಹಾಕುವ ತಂತ್ರ

ಪೊಲೀಸ್ ಇಲಾಖೆ ಕೈಕಟ್ಟಿ ಹಾಕುವ ತಂತ್ರ

ತನಿಖೆಗೂ ಮುನ್ನ ಘಟನೆ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡಿ ತನಿಖೆಯನ್ನು ಬೇರೆ ಮಾರ್ಗಕ್ಕೆ ಎಳೆಯುವುದು. ತನಿಖಾಧಿಕಾರಿಗಳ ಮೇಲೆ ಒತ್ತಡ ಹಾಕುವುದು, ಪೊಲೀಸ್ ಇಲಾಖೆ ಕೈಕಟ್ಟಿ ಹಾಕುವ ತಂತ್ರದಿಂದ ಸತ್ಯ ಮುಚ್ಚಿಡಲಾಗುತ್ತಿದೆ. ನಿಷ್ಪಕ್ಷಪಾತ ತನಿಖೆ ನಡೆಸಲು ಸಾಧ್ಯವಾಗದ ಪರಿಸ್ಥಿತಿಯನ್ನು ನಿರ್ಮಾಣ ಮಾಡುವಲ್ಲಿ ಸರ್ಕಾರ ಯಶಸ್ವಿಯಾಗುತ್ತಾ ಬಂದಿದೆ. ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣ ಇರಬಹುದು, ಡಿಕೆ ರವಿ ಹತ್ಯೆ ಪ್ರಕರಣ ಇರಬಹುದು, ತನಿಖಾಧಿಕಾರಿಗಳ ಮೇಲೆ ಸರ್ಕಾರ ಒತ್ತಡ ಹೇರಿದ್ದಲ್ಲದೆ, ತನಿಖೆ ದಿಕ್ಕು ತಪ್ಪಿಸಿದೆ.

ರಾಜು ಹತ್ಯೆಯಾಗಿದ್ದು ಏಕೆ?

ರಾಜು ಹತ್ಯೆಯಾಗಿದ್ದು ಏಕೆ?

ಸುಮಾರು 21ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ದೇಗುಲವನ್ನು ಪುನರ್ ಪ್ರತಿಷ್ಠಾಪನೆ ಹಾಗೂ ಆರಂಭಕ್ಕೆ ರಾಜು ಮುಂದಾಗಿದ್ದರು. ಈ ಬಗ್ಗೆ ಸ್ಥಳೀಯರಿಂದ ಆಕ್ಷೇಪ ವ್ಯಕ್ತವಾಗಿತ್ತು. ಆದರೆ, ಹಠ ಬಿಡದ ರಾಜು ಅವರು ದೇಗುಲದ ಆವರಣದಲ್ಲಿ ಹಿಂದೂಗಳನ್ನು ಸೇರಿಸಿ ದೇವರ ಭಜನೆ ಆರಂಭಿಸಿದ್ದರು. ಇದು ಕೆಲವರ ಕೆಂಗಣ್ಣಿಗೆ ಗುರಿಯಾಯಿತು.

ಮಸೀದಿ ನಿರ್ಮಾಣ ಕೂಡಾ ಸಮಸ್ಯೆಯಾಗಿತ್ತು

ಮಸೀದಿ ನಿರ್ಮಾಣ ಕೂಡಾ ಸಮಸ್ಯೆಯಾಗಿತ್ತು

ಇನ್ನೊಂದೆಡೆ ಮೈಸೂರಿನ ಕ್ಯಾತಮಾರನಹಳ್ಳಿಯಲ್ಲಿ ಮಸೀದಿ ನಿರ್ಮಾಣ ಕೂಡಾ ಸಮಸ್ಯೆಯಾಗಿತ್ತು. ವಸತಿ ನಿವೇಶನದಲ್ಲಿ ಮಸೀದಿ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಈ ಬಗ್ಗೆ ನಗರ ಪಾಲಿಕೆಗೆ ರಾಜು ದೂರು ನೀಡಿದ್ದರು. ಈ ಎಲ್ಲಾ ಕಾರಣದಿಂದ ವ್ಯವಸ್ಥಿತವಾಗಿ ಸಂಚು ರೂಪಿಸಿ ರಾಜು ಅವರನ್ನು ಹತ್ಯೆಗೈಯಲಾಗಿದೆ ಎಂದು ಪ್ರತಾಪ್ ಸಿಂಹ ವಿವರಿಸಿದರು.

ರಾಜು ಹತ್ಯೆ ಬಗ್ಗೆ ಸಂಸದ ಪ್ರತಾಪ್ ಸಿಂಹ ಅವರ ಪ್ರತಿಕ್ರಿಯೆ

ರಾಜು ಹತ್ಯೆ ಬಗ್ಗೆ ಒನ್ ಇಂಡಿಯಾ ಪ್ರತಿನಿಧಿಗೆ ಸಂಸದ ಪ್ರತಾಪ್ ಸಿಂಹ ಅವರು ನೀಡಿದ ಪ್ರತಿಕ್ರಿಯೆಯನ್ನು ಕೇಳಿಸಿಕೊಳ್ಳಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The incident in Mysore where a VHP activist was killed led to widespread protests. Mysore continues to remain tense and the police are contemplating extending prohibitory orders in the wake of an intelligence report suggesting that there could be communal clashes.
Please Wait while comments are loading...