ಮೈಸೂರಿನಲ್ಲಿ ಚಿತ್ರೀಕರಣಕ್ಕಾಗಿ ನಿಷೇಧಿತ ಡ್ರೋನ್ ಕ್ಯಾಮೆರಾ ಬಳಕೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಮೇ 16 : ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ಚಲನಚಿತ್ರ ಚಿತ್ರೀಕರಣದ ವೇಳೆ, ಚಿತ್ರತಂಡವೊಂದು ನಿಷೇಧಿತ ಡ್ರೋನ್ ಕ್ಯಾಮೆರಾ ಬಳಸುತ್ತಿದ್ದುದು ಗಮನಕ್ಕೆ ಬಂದಿದೆ. ಸಾರ್ವಜನಿಕರ ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕಾಗಮಿಸುವಷ್ಟರಲ್ಲಿ ಚಿತ್ರ ತಂಡದ ಕೆಲ ಸದಸ್ಯರು ಕ್ಯಾಮೆರಾ ಜೊತೆ ಪರಾರಿಯಾಗಿದ್ದಾರೆ!

ನಿನ್ನೆ ಸಂಜೆ ಅರಮನೆ ಮುಂಭಾಗ ವಿರುವ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ 'ರಾಜಂಗೂ ರಾಣಿಗೂ' ಎಂಬ ಚಲನಚಿತ್ರ ಚಿತೀಕರಣ ನಡೆಸಲಾಗುತ್ತಿತ್ತು. ಈ ವೇಳೆ ಚಿತ್ರ ತಂಡದವರು ಶೂಟಿಂಗ್ ಗಾಗಿ ಡ್ರೋನ್ ಕ್ಯಾಮೆರಾ ಬಳಸುತ್ತಿದ್ದರು. ಆದರೆ, ಡ್ರೋಣ್ ಕ್ಯಾಮೆರಾ ನಿಷೇಧಿಸಿರುವ ವಿಚಾರ ತಿಳಿದಿದ್ದ ಸಾರ್ವಜನಿಕರೊಬ್ಬರು ದೇವರಾಜ ಪೊಲೀಸ್ ಠಾಣೆಗೆ ಈ ಕುರಿತು ಮಾಹಿತಿ ನೀಡಿದ್ದರು.[ಹಲೋ ಸ್ವಲ್ಪ ಇತ್ತ ಕೇಳಿ, ಡ್ರೋನ್ ಕ್ಯಾಮೆರಾ ಬಳಸಿದರೆ ಜೋಕೆ!]

Banned drone camera finds in Mysuru!

ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆಯೇ ಕಕ್ಕಾಬಿಕ್ಕಿಯಾದ ಚಿತ್ರ ತಂಡದ ಸದಸ್ಯರು ಕೂಡಲೇ ಡ್ರೋನ್ ಕ್ಯಾಮೆರಾವನ್ನು ಇಳಿಸಿ, ಅದರೊಡನೆ ಸ್ಥಳದಿಂದ ಪರಾರಿಯಾಗಿದ್ದಾರೆ. ಹೀಗಾಗಿ ಪೊಲೀಸರು ಸ್ಥಳದಲ್ಲಿದ್ದ ವಾಹನವನ್ನೇ ತೆಗೆದುಕೊಂಡು ಹೋಗಿ ದೇವರಾಜ ಪೊಲೀಸ್ ಠಾಣೆಯಲ್ಲಿ ಇರಿಸಿದ್ದಾರೆ.

ಈ ಕುರಿತು ಮಾತನಾಡಿದ ದೇವರಾಜ ಠಾಣೆಯ ಇನ್ಸ್ ಪೆಕ್ಟರ್ ನಾಗೇಶ್, ಡ್ರೋನ್ ಕ್ಯಾಮೆರಾ ನಿಷೇಧಿಸಲಾಗಿದೆ. ಹೀಗಾಗಿ ಕ್ಯಾಮೆರಾ ತೆಗೆದುಕೊಂಡು ಹೋಗಿರುವವರು ಅದನ್ನು ತಂದಲ್ಲಿ ಪರಿಶೀಲನೆ ನಡೆಸಲಾಗುವುದು. ಒಂದು ವೇಳೆ ಅದರ ಮೂಲಕ ಚಿತ್ರೀಕರಣ ನಡೆಸಿರುವುದು ಸಾಬೀತಾದಲ್ಲಿ ಕಾನೂನಿನಂತೆ ಕ್ರಮ ತೆಗೆದುಕೊಳ್ಳಲಾಗು ಎಂದು ಹೇಳಿದರು.

Banned drone camera finds in Mysuru!

ನಿಷೇದ ಯಾಕೆ?
ತೀರಾ ಮೇಲಕ್ಕೆ ಹಾರುವ ಡ್ರೋನ್ ಕ್ಯಾಮೆರಾಗಳು ಏರ್ ಕ್ರಾಫ್ಟ್ ಗಳಿಗೆ ತೊಂದರೆಯನ್ನುಂಟು ಮಾಡಬಹುದು ಮತ್ತು ಕೆಳಕ್ಕೆ ಹಾರುವ ಡ್ರೋನ್ ಕ್ಯಾಮೆರಾದಿಂದ ಜನರಿಗೂ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಸೂಕ್ತ ಕಾರಣವಿಲ್ಲದೆ, ಅನುಮತಿಯಿಲ್ಲದೆ ಡ್ರೊನ್ ಕ್ಯಾಮೆರಾಗಳನ್ನು ಬಳಸುವಂತಿಲ್ಲ ಎಂಬ ನಿಯಮವಿತ್ತು. ಅದನ್ನು ಯಾರೂ ಪಾಲಿಸದ ನಿಟ್ಟಿನಲ್ಲಿ ಇದೀಗ ಖಾಸಗಿ ಸಭೆ- ಸಮಾರಂಭಗಳಲ್ಲಿ ಡ್ರೀನ್ ಕ್ಯಾಮೆರಾ ಬಳಸುವಂತಿಲ್ಲ ಎಂಬ ನಿಯಮವನ್ನೇ ಜಾರಿಗೆ ತಂದಿದೆ ಸರ್ಕಾರ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Some people are shooting a Kannada movie, 'Rajangu Ranigu' in a temple near Mysuru palace with banned Drone camera. They have escaped when police came.
Please Wait while comments are loading...