ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಲೋ ಸ್ವಲ್ಪ ಇತ್ತ ಕೇಳಿ, ಡ್ರೋನ್ ಕ್ಯಾಮೆರಾ ಬಳಸಿದರೆ ಜೋಕೆ!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮೇ 11 : ಮದುವೆ, ಮುಂಜಿ ಹೀಗೆ ಮುಂತಾದ ಖಾಸಗಿ ಕಾರ್ಯಕ್ರಮಗಳಲ್ಲಿ ಸುಂದರ ಛಾಯಾಚಿತ್ರಗಳನ್ನು ಸೆರೆಹಿಡಿಯಬೇಕೆನ್ನುವ ಮಹದಾಸೆಯಿಂದ ಡ್ರೋನ್ ಕ್ಯಾಮೆರಾ ಬಳಸಲು ನೀವೇನಾದರೂ ನಿರ್ಧರಿಸಿದಲ್ಲಿ ನೀವು ತೊಂದರೆಯಲ್ಲಿ ಸಿಲುಕುವುದಂತೂ ಗ್ಯಾರಂಟಿ.

ಹೌದು, ಭದ್ರತಾ ಕಾರ್ಯಗಳಿಗೆ ಹೊರತಾಗಿ ಬೇರೆ ಯಾವುದೇ ಖಾಸಗಿ ಮತ್ತು ಸರಕಾರಿ ಕಾರ್ಯಕ್ರಮಗಳಲ್ಲಿ ಡ್ರೋನ್ ಬಳಸುವವರ ಮೇಲೆ ನಿಗಾ ಇಡಲು ಹಾಗೂ ಕ್ರಮ ಕೈಗೊಳ್ಳಲು ಪೊಲೀಸರಿಗೆ ಅಧಿಕಾರವಿದೆ.

Be Alert ! using Drone Cameras for private use will put you in trouble

ಅಕ್ಟೋಬರ್ 2014ರಲ್ಲಿ ನಾಗರಿಕ ವಿಮಾನಯಾನ ನಿರ್ದೇಶನಾಲಯ ಹೊರಡಿಸಿರುವ ಸುತ್ತೋಲೆಯೊಂದನ್ನು ಗುಪ್ತಚರ ಇಲಾಖೆ ಉಲ್ಲೇಖಿಸಿದೆ. ಏಪ್ರಿಲ್ 2016ರಲ್ಲಿ ಡಿಜಿಸಿಎ ಡ್ರೋನ್ ಬಳಕೆ ಕುರಿತಾದ ಮಾರ್ಗಸೂಚಿಗಳನ್ನು ಪ್ರಸ್ತಾಪಿಸಿದ್ದು, ಇದರನ್ವಯ ಡ್ರೋನ್ ಬಳಕೆದಾರರು ಅನುಮತಿ ಪಡೆದು ಒಂದು ವಿಶಿಷ್ಟ ಗುರುತಿನ ಸಂಖ್ಯೆ ಪಡೆಯಬೇಕಾಗಿದೆ.

ವಾಯು ಕ್ಷೇತ್ರದ ಭದ್ರತೆಯ ದೃಷ್ಠಿಯಿಂದ ಇಂತಹ ಡ್ರೋನ್ ಬಳಕೆಯನ್ನು ನಿಯಂತ್ರಿಸುವ ಉದ್ದೇಶವನ್ನು ಈ ಸುತ್ತೋಲೆ ಹೊಂದಿದೆ. ಈ ಡಿಜಿಸಿಎ ಸುತ್ತೋಲೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ ರಾವ್ ಬೊರಸೆ ತಿಳಿಸಿದ್ದಾರೆ.

ಸರಕಾರಿ ಸಮಾರಂಭಗಳ ಸಂದರ್ಭ ಕೂಡ ಡ್ರೋನ್ ಬಳಕೆಯನ್ನು ನಿಷೇಧಿಸಲಾಗಿದೆ. ಒಂದು ವೇಳೆ ಸಭೆ ಸಮಾರಮಭಗಳಲ್ಲಿ ಡ್ರೋನ್ ಕ್ಯಾಮೆರಾ ಬಳಸುತ್ತಿರುವುದು ಕಂಡುಬಂದಲ್ಲಿ ಅವುಗಳನ್ನು ವಶಪಡಿಸಿಕೊಳ್ಳುವಂತೆ ಮತ್ತು ನಾಶಗೊಳಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ ಎಂದು ಎಸ್ಪಿ ಹೇಳಿದ್ದಾರೆ.

ಡ್ರೋನ್ ಮಾಲಕರು ಹಾಗೂ ಅದರ ನಿರ್ವಾಹಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿರುವ ಎಸ್ಪಿ ಹವ್ಯಾಸಿಗಳು ಕೂಡ ಡ್ರೋನ್ ಬಳಸುವುದು ನಿಷೇಧಿಸಲಾಗಿದೆ ಎಂದಿದ್ದಾರೆ.

English summary
Use of Drone cameras during private functions or for any other purpose will put in in trouble. Criminal case will be charged on the owner and users of drone cameras if seen by the cops.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X