ಇದು ಬೊಂಬೆಯಲ್ಲ ರೀ! ನಾಗ್ಪುರದಲ್ಲಿ ಮತಚಲಾಯಿಸಿದ ವಿಶ್ವದ ಅತೀ ಚಿಕ್ಕ ಮಹಿಳೆ
ನಾಗ್ಪುರ, ಏಪ್ರಿಲ್ 11: ಕೆಂಪು ಬಣ್ಣದ ಫ್ರಾಕು, ಬಿಳಿ ಬಣ್ಣದ ಶೂ ತೊಟ್ಟು, ಮತಯಂತ್ರವಿರಿಸಿದ ಮೇಜಿನ ಮೇಲೇ ನಿಂತು ಮತ ಚಲಾಯಿಸುತ್ತಿದ್ದ ಆಕೆ ಬೊಂಬೇನಾ? ಅಯ್ಯೋ ಅಲ್ಲ, ಆಕೆ ಜ್ಯೋತಿ ಆಮ್ಗೆ!
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಹೌದು, ವಿಶ್ವದ ಅತೀ ಚಿಕ್ಕ ಮಹಿಳೆ ಎಂದು ದಾಖಲೆ ಬರೆದ ಜ್ಯೋತಿ ಕೇವಲ 2 ಅಡಿ ಎತ್ತರವಿದ್ದಾರೆ. 25 ವರ್ಷ ವಯಸ್ಸಿನ ಈಕೆ ಇಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ಮತಚಲಾಯಿಸಿದರು.(ಚಿತ್ರಕೃಪೆ: ಎಎನ್ ಐ)
Maharashtra: World's smallest living woman, Jyoti Amge, casts her vote at a polling station in Nagpur. #IndiaElections2019 pic.twitter.com/QsLiaHMGMx
— ANI (@ANI) April 11, 2019
ಆ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಪುಟ್ಟ ಬೊಂಬೆಯೊಂದು ಮತಗಟ್ಟೆಯ ಟೇಬಲ್ ಮೇಲೆ ನಿಂತು ತನ್ನ ಬೆರಳಿಗೆ ಶಾಹಿ ಹಾಕಿಸಿಕೊಳ್ಳುವಂತಿದೆ ಆ ಚಿತ್ರ!
ಗಿನ್ನಿಸ್ ವಿಶ್ವದಾಖಲೆಯ ಪುಟಗಳಲ್ಲಿ ಹೆಸರುಪಡೆದಿರುವ ಇವರು 'ಬಾಡಿ ಶಾಕ್',' ಅಮೆರಿಕನ್ ಹಾರರ್ ಸ್ಟೋರಿ: ಫ್ರೀಕ್ ಶೋ' ಮುಂತಾದ ಡಾಕ್ಯುಮೆಂಟರಿಗಳಲ್ಲಿ ನಟಿಸಿದ್ದಾರೆ. ಮಾತ್ರವಲ್ಲ, ಬಿಗ್ ಬಾಸ್ ರಿಯಾಲಿಟಿ ಶೋನಲ್ಲೂ ಗೌರವ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ.

ಅವರು ಇಂದು ತಮ್ಮ ಮತ ಚಲಾಯಿಸಿದ್ದಾರೆ. 17ನೇ ಲೋಕಸಭೆ ಚುನಾವಣೆ ಗುರುವಾರ(ಏ.11) ದಿಂದ ಮತದಾನ ಆರಂಭವಾಗಿದ್ದು, ಒಟ್ಟು 91 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. 20 ರಾಜ್ಯಗಳ 1279 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಬೆಳಿಗ್ಗೆ 7 ರಿಂದ ಸಂಜೆ 6 ವರೆಗೆ ಮತದಾನ ನಡೆಯಲಿದೆ. ಮೇ 23 ರಂದು ಫಲಿತಾಂಶ ಹೊರಬೀಳಲಿದ್ದು, ಏಪ್ರಿಲ್ 11 ರಿಂದ 19 ರವರೆಗೆ ಒಟ್ಟು ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ.












Click it and Unblock the Notifications