• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಗ ಬದುಕಿದ್ದಾನೆಂದು ಗಾಯಕ್ಕೆ ಶುಶ್ರೂಷೆ ಮಾಡುತ್ತಾ ರಾತ್ರಿ ಕಳೆದ ತಾಯಿ, ಆದರೆ..

|

ಮುಂಬೈ,ಫೆಬ್ರವರಿ 24: ಬಾತ್‌ರೂಮಿನಲ್ಲಿ ಆಯತಪ್ಪಿ ಬಿದ್ದಿದ್ದ ಮಗನನ್ನು ಹೇಗೋ ಕರೆತಂದು ಇಡೀ ರಾತ್ರಿ ಗಾಯಕ್ಕೆ ಅರಿಶಿನ ಪಟ್ಟಿ ಹಾಕುತ್ತಾ ನಿದ್ದೆಬಿಟ್ಟು ತಾಯಿ ಕಾದಿದ್ದಾಳೆ,ಆದರೆ ತಾನು ಶುಶ್ರೂಶೆ ಮಾಡಿದ್ದು ಮಗನ ಶವಕ್ಕೆ ಎಂದು ತಿಳಿದಿರಲೇ ಇಲ್ಲ.

ಹೌದು ಆಕೆಯ ಮಗ ಬಾತ್‌ರೂಂನಿನಲ್ಲಿ ಬಿದ್ದು ಗಾಯಗೊಂಡಿದ್ದ, ಅಲ್ಲಿಂದ ಹಾಲ್‌ಗೆ ಕರೆತಂದು ಗಾಯಕ್ಕೆ ಅರಿಶಿನಪಟ್ಟಿ ಕಟ್ಟಿ, ರಾತ್ರಿ ಇಡೀ ಎಚ್ಚರವಾಗಿದ್ದುಕೊಂಡು ಶುಶ್ರೂಶೆ ಮಾಡಿದ್ದಾರೆ, ಆದರೆ ಬೆಳಗ್ಗೆಯೂ ಮಗ ಏಳದಿರುವ ಕಾರಣ ಅಕ್ಕಪಕ್ಕದ ಮನೆಯವರನ್ನು ಕರೆದಿದ್ದಾರೆ. ಬಳಿಕ ಆತ ಅಲ್ಲಿ ಕಾಲುಜಾರಿ ಬಿದ್ದಿರುವ ಸಮಯದಲ್ಲೇ ಮೃತಪಟ್ಟಿದ್ದ ಎಂಬುದು ತಿಳಿದುಬಂದಿದೆ.

ಉತ್ತರ ಪ್ರದೇಶ: ತೈಲ ಟ್ಯಾಂಕರ್ ಕಾರು ಅಪಘಾತದಲ್ಲಿ 7 ಜನ ಸಾವು

ಈ ಕುರಿತು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ, ಕುಟುಂಬ ಮೂಲತಃ ಮೇಘಾಲಯದವರು, ಆತ ಬಾತ್‌ರೂಮಿನಲ್ಲಿ ಬಿದ್ದಾಗ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು, ಸ್ಥಳದಲ್ಲೇ ಮೃತಪಟ್ಟಿದ್ದ, ಕೆಲ ಸಮಯದ ನಂತರ ಮಗನನ್ನು ನೋಡಿದ ತಾಯಿ ಆತನನ್ನು ಹೊರಕ್ಕೆ ತಂದು ಗಾಯಕ್ಕೆ ಬ್ಯಾಂಡೇಜ್ ಹಾಕಿದ್ದಾರೆ.

ಆತ ಬದುಕಿದ್ದಾನೆ ಎಂದು ತಿಳಿದು ಅರಿಶಿನ ಪುಡಿಯಲ್ಲಿ ಗಾಯಕ್ಕೆ ಹಚ್ಚಿದ್ದಾರೆ. ಬೆಳಗ್ಗೆಯಾದರೂ ಆತ ಮಾತನಾಡಲಿಲ್ಲ, ಎದ್ದು ಕೂರಲಿಲ್ಲ, ಹೀಗಾಗಿ ಸಂಬಂಧಿಕರನ್ನು ಕರೆಸಿ, ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ, ಆತ ಈಗಾಗಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.

ಆತ ಲಾಕ್‌ಡೌನ್ ಸಂದರ್ಭದಲ್ಲಿ ಕೆಲಸವನ್ನು ಕಳೆದುಕೊಂಡಿದ್ದ, ಆರ್ಥಿಕ ಸಂಕಷ್ಟದಲ್ಲಿದ್ದ ಎಂಬುದು ತಿಳಿದುಬಂದಿದೆ. ಆಕೆಯ ಮತ್ತೊಂದು ಮಗನಿಗೂ ಕೈಕಾಲಿನಲ್ಲಿ ಸ್ವಾಧೀನವಿಲ್ಲ, ಮತ್ತೊಂದು ಮಗನಿಂದಾಗಿ ಮೂರು ಹೊತ್ತು ಊಟ ನೋಡುತ್ತಿದ್ದರು.

English summary
A 70-year-old woman spent an entire night besides her son's body and attended to his wounds, believing he is alive after he got injured fatally during a fall at home in Mumbai, police said on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X