• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಬ್ಬರು ಪತಿಯರನ್ನು ತೊರೆದ ಹೆಂಡತಿ ಮೂರನೆಯವನ ಜೊತೆ ಮದುವೆ: ದೂರು ಕೊಟ್ಟ ಪತಿಯರು!

|
Google Oneindia Kannada News

ನಾಗಪುರ, ಜೂನ್ 9: ಪ್ರೀತಿ ಕುರುಡು ಅನ್ನೋ ಮಾತಿದೆ, ಈ ಇಂಟರ್ನೆಟ್ ಜಮಾನದಲ್ಲಂತೂ ಯಾರಿಗೇ ಯಾರ ಮೇಲೆ ಯಾವಾಗ ಬೇಕಾದರೂ ಪ್ರೀತಿ ಉಂಟಾಗಬಹುದು. ಅದರಲ್ಲೂ ಸಾಮಾಜಿಕ ಮಾಧ್ಯಮಗಳಲ್ಲಿ ಹುಟ್ಟುವ ಪ್ರೇಮಕಥೆಗಳೇನು ಕಡಿಮೆಯಿಲ್ಲ. ಆದರೆ ಇಲ್ಲೊಂದು ಘಟನೆ ನಡೆದಿದ್ದು, ಹೊಸ ಪ್ರಿಯಕರನೊಂದಿಗೆ ಓಡಿ ಹೋದ ಮಹಿಳೆಯ ವಿರುದ್ಧ ಆಕೆಯ ಇಬ್ಬರು ಗಂಡಂದಿರೇ ದೂರು ನೀಡಿದ್ದಾರೆ.

ಮಹಾರಾಷ್ಟ್ರದ ನಾಗಪುರದಲ್ಲಿ ಈ ವಿಚಿತ್ರ 'ಪ್ರೇಮ ಕಥಾ ಪ್ರಸಂಗ' ನಡೆದಿದೆ. ಬಿಟ್ಟುಹೋಗಿರುವ ಪತ್ನಿ ವಾಪಸ್ ಬೇಕು ಎಂದಿದ್ದಾರೆ ಇಬ್ಬರು ಗಂಡಂದಿರು. ಪತ್ನಿ ವಾಪಸ್ ಕರೆತರಲು ಪೊಲೀಸರು ಮಧ್ಯಪ್ರವೇಶ ಮಾಡಬೇಕು ಎಂದು ಭರೋಸಾ ಸೆಲ್‌ನಲ್ಲಿರುವ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಮೊದಲ ರಾತ್ರಿ ಕಥೆ: ಪ್ರಸ್ತಕ್ಕಾಗಿ ಕಾಯುತ್ತಿದ್ದ ವರ; ಚಿನ್ನಾಭರಣಗಳೊಂದಿಗೆ ಚಿನ್ನಿ ಪರಾರಿಮೊದಲ ರಾತ್ರಿ ಕಥೆ: ಪ್ರಸ್ತಕ್ಕಾಗಿ ಕಾಯುತ್ತಿದ್ದ ವರ; ಚಿನ್ನಾಭರಣಗಳೊಂದಿಗೆ ಚಿನ್ನಿ ಪರಾರಿ

ಇಬ್ಬರು ಪತಿಯರನ್ನು ತೊರೆದಿರುವ ಮಹಿಳೆ ಸದ್ಯಕ್ಕೆ ಮೂರನೇ ವ್ಯಕ್ತಿಯೊಂದಿಗೆ ಪರಾರಿಯಾಗಿದ್ದಾಳೆ. ಎರಡನೇ ಪತಿ ಪತ್ನಿಗಾಗಿ ಸಾಕಷ್ಟು ಹುಡುಕಾಡಿದ್ದಾನೆ ಆದರೆ ಪತ್ನಿ ಎಲ್ಲೂ ಸಿಗದಿದ್ದಾಗ ಹುಡುಕಿಕೊಡುವಂತೆ ಪೊಲೀಸರ ಬಳಿ ದೂರು ನೀಡಿದ್ದಾನೆ. ದೂರು ನೀಡಲು ಮಹಿಳೆಯ ಮೊದಲ ಪತಿಯನ್ನೂ ಠಾಣೆಗೆ ಕರೆದುಕೊಂಡು ಹೋಗಿದ್ದಾನೆ. ಆದರೆ ಮೂರನೇ ಪತಿ ಜೊತೆ ಹೋಗಿರುವ ಮಹಿಳೆ ಎಲ್ಲಿದ್ದಾಳೆ ಎಂದು ಇದುವರೆಗೂ ಪತ್ತೆಯಾಗಿಲ್ಲ ಎನ್ನಲಾಗಿದೆ.

 ಇಬ್ಬರು ಗಂಡಂದಿರಿಗೆ ಕೈಕೊಟ್ಟ ಮಹಿಳೆ

ಇಬ್ಬರು ಗಂಡಂದಿರಿಗೆ ಕೈಕೊಟ್ಟ ಮಹಿಳೆ

ಮೊದಲ ವ್ಯಕ್ತಿಯೊಂದಿಗೆ ಮಹಿಳೆಯು ಪ್ರೇಮ ವಿವಾಹವಾಗಿದ್ದಳು. ಬಳಿಕ ಈ ದಂಪತಿಗೆ ಇಬ್ಬರು ಮಕ್ಕಳು ಜನಿಸಿದ್ದರು. ಎಲ್ಲವೂ ಸರಿ ಎಂದುಕೊಳ್ಳುವಾಗಲೇ ಮಹಿಳೆಯ ಫೋನಿಗೆ ಮಿಸ್ಡ್ ಕಾಲ್ ಬಂದಿದೆ. ಈ ಮೂಲಕ ಇನ್ನೊಬ್ಬ ಯುವಕನ ಪರಿಚಯವಾಗಿದೆ, ಪರಿಚಯ ಸ್ನೇಹಕ್ಕೆ ತಿರುಗಿದ್ದು ನಂತರ ಒಬ್ಬರೊನ್ನಬ್ಬರು ಪ್ರೀತಿಸಿದ್ದಾರೆ.

ಮೊದಲ ಪತಿ ಮತ್ತು ಅವರ ಇಬ್ಬರು ಮಕ್ಕಳನ್ನು ತೊರೆದ ಮಹಿಳೆ, ಎರಡನೇ ವ್ಯಕ್ತಿಯೊಂದಿಗೆ ಓಡಿ ಹೋಗಿದ್ದಳು. ಆನಂತರ ನಾಗಪುರದ ಹೊರಗಿನ ದೇವಸ್ಥಾನದಲ್ಲಿ ವಿವಾಹವಾಗಿದ್ದರು. ಮಹಿಳೆಯ ಮೊದಲನೇ ಪತಿ ಮೇಸ್ತ್ರಿಯಾಗಿದ್ದರೆ, ಎರಡನೇ ಪತಿ ಆಪ್ಟಿಕ್ ಫೈಬರ್ ಹಾಕುವ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೂವರು ಹೆಂಡಿರ ಮುದ್ದಿನ ಗಂಡನ ವಿರುದ್ಧದ ಕೇಸ್ ರದ್ದಿಗೆ ಹೈಕೋರ್ಟ್ ನಕಾರ..!ಮೂವರು ಹೆಂಡಿರ ಮುದ್ದಿನ ಗಂಡನ ವಿರುದ್ಧದ ಕೇಸ್ ರದ್ದಿಗೆ ಹೈಕೋರ್ಟ್ ನಕಾರ..!

 ಮೂರನೇ ವ್ಯಕ್ತಿ ಜೊತೆ ಪರಾರಿ

ಮೂರನೇ ವ್ಯಕ್ತಿ ಜೊತೆ ಪರಾರಿ

ಎರಡನೇ ವ್ಯಕ್ತಿಯನ್ನು ಮದುವೆಯಾದ ಮಹಿಳೆಗೆ ಸಾಮಾಜಿಕ ಜಾಲತಾಣದ ಮೂಲಕ ಮತ್ತೊಬ್ಬ ವ್ಯಕ್ತಿ ಪರಿಚಯವಾಗಿದ್ದಾನೆ. ಮಹಿಳೆ ಜೊತೆ ಸ್ನೇಹ ಬೆಳೆಸಿರುವ ವ್ಯಕ್ತಿ, ಆಕೆಯನ್ನು ಮದುವೆಯಾಗುವುದಾಗಿ ಪುಸಲಾಯಿಸಿದ್ದಾನೆ. ಎರಡನೇ ಗಂಡನನ್ನೂ ತೊರೆದ ಮಹಿಳೆ ಮೂರನೇ ವ್ಯಕ್ತಿ ಜೊತೆ ಮದುವೆಯಾಗಲು ಸಿದ್ಧವಾಗಿದ್ದಳು.

ಕೆಲವು ದಿನಗಳ ಹಿಂದಷ್ಟೇ ಊರಿಗೆ ಹೋಗಿ ಬರುವ ನೆಪದಲ್ಲಿ ತನ್ನ 'ಎರಡನೇ' ಗಂಡನ ಮನೆಯನ್ನು ತೊರೆದಿದ್ದಳು. ಬಳಿಕ ಪತ್ತೆಯಾಗಿರಲಿಲ್ಲ. ಆದರೆ ಈಗ ಮೂರನೇ ವ್ಯಕ್ತಿ ಜೊತೆ ಜೊತೆಗೆ ಹೋಗಿರುವ ಮಹಿಳೆ ಎಲ್ಲಿದ್ದಾಳೆ ಎಂದು ಇನ್ನೂ ತಿಳಿದುಬಂದಿಲ್ಲ.

 ಹೆಂಡತಿ ವಿರುದ್ಧ ಸಿಟ್ಟಿಗೆದ್ದ ಎರಡನೇ ಗಂಡ

ಹೆಂಡತಿ ವಿರುದ್ಧ ಸಿಟ್ಟಿಗೆದ್ದ ಎರಡನೇ ಗಂಡ

ತನಗೆ ಕೈಕೊಟ್ಟು ಮೂರನೇ ವ್ಯಕ್ತಿ ಜೊತೆ ಓಡಿ ಹೋದ ಹೆಂಡತಿ ವಿರುದ್ಧ ಎರಡನೇ ಗಂಡ ಸಿಟ್ಟಿಗೆದ್ದಿದ್ದಾನೆ. ಇದೀಗ ತನ್ನ ಹೆಂಡತಿಯನ್ನು ಕರೆದುಕೊಂಡು ಹೋಗಿರುವ ಆಕೆಯ ಮೂರನೇ ಪತಿಗೆ ಪಾಠ ಕಲಿಸಲೆಂದು ಮೊದಲನೇ ಪತಿಯನ್ನು ಭೇಟಿ ಮಾಡಿದ್ದಾರೆ. ಮದ್ಯ ವ್ಯಸನಿಯಾಗಿದ್ದ ಮೊದಲ ಪತಿಗೆ ಈ ಬಗ್ಗೆ ಮನವರಿಕೆ ಮಾಡಿದ್ದಾರೆ. ಹೀಗಾಗಿಯೇ ಇಬ್ಬರೂ ಒಟ್ಟಾಗಿ ಭರೋಸಾ ಸೆಲ್‌ಗೆ ತೆರಳಿ ದೂರು ದಾಖಲಿಸಿದ್ದಾರೆ.

ಇದಕ್ಕೂ ಮುನ್ನ ಮಹಿಳೆಯ ಎರಡನೇ ಪತಿ ಸೋನೆಗಾಂವ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎಂದು ಭರೋಸಾ ಸೆಲ್ ಮೂಲಗಳು ತಿಳಿಸಿವೆ.

 ಹೆಂಡತಿ ಬೇಕು ಎನ್ನುತ್ತಿರುವ ಎರಡನೇ ಗಂಡ

ಹೆಂಡತಿ ಬೇಕು ಎನ್ನುತ್ತಿರುವ ಎರಡನೇ ಗಂಡ

ಮಕ್ಕಳು, ಮಹಿಳೆಯರು ಮತ್ತು ವೃದ್ಧರಿಗೆ ನೆರವು ನೀಡಲು ಮತ್ತು ಸಮಾಲೋಚನೆ ನೀಡುವ ಉದ್ದೇಶದಿಂದ ಭರೋಸಾ ಕೋಶವನ್ನು ರಚಿಸಲಾಗಿದೆ. ಈ ಭರೋಸಾ ಸೆಲ್‌ನ ಉಸ್ತುವಾರಿ ವಹಿಸಿರುವ ಹಿರಿಯ ಇನ್ಸ್‌ಪೆಕ್ಟರ್ ಸೀಮಾ ಸುರ್ವೆ ಮಾತನಾಡಿ, ಎರಡನೇ ಪತಿ ತನ್ನ ಹೆಂಡತಿ ಬೇಕೆಂದು ಹಠ ಹಿಡಿದ್ದಾನೆ, ಆದರೆ ಮೊದಲನೇ ಪತಿಗೆ ತನ್ನ ಹೆಂಡತಿ ಬಗ್ಗೆ ಯಾವ ಆಸಕ್ತಿಯೂ ಇಲ್ಲ ಎಂದು ತಿಳಿಸಿದ್ದಾರೆ.

ಈ ವಿಚಾರವಾಗಿ ಭರೋಸಾ ಸೆಲ್ ಸದ್ಯ ದೂರನ್ನು ದಾಖಲಿಸಿಕೊಂಡಿಲ್ಲ. ಆದರೆ, ಮಹಿಳೆ ಮತ್ತು ಆಕೆಯ ಮೂರನೇ ಪತಿಯ ವಿರುದ್ಧ ಸೋನೆಗಾಂವ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಇಬ್ಬರು ಗಂಡಂದಿರಿಗೆ ತಿಳಿಸಿದ್ದೇವೆ. ಯಾವುದೇ ಕೌಟುಂಬಿಕ ಹಿಂಸೆ ಇಲ್ಲದ ಕಾರಣ, ಸ್ಥಳೀಯ ಪೊಲೀಸ್ ಠಾಣೆಯು ಕಾನೂನುಬದ್ಧವಾಗಿ ಈ ಪರಿಸ್ಥಿತಿಯನ್ನು ನಿಭಾಯಿಸಬಹುದು. ಭರೋಸಾ ಕೋಶವು ಇಬ್ಬರ ಹಕ್ಕುಗಳ ಮೇಲೆ ವಸ್ತುನಿಷ್ಠ ನಿಲುವನ್ನು ಹೊಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

English summary
The woman, who is allegedly with her third paramour now, has been untraceable since she left the home of her 'second' husband a few days ago on the pretext of going to her native place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X