• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಿರ್ಭಯಾ ರೀತಿ ಅತ್ಯಾಚಾರ: ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವು

|
Google Oneindia Kannada News

ಮುಂಬೈ, ಸೆಪ್ಟೆಂಬರ್ 11: ನಿರ್ಭಯಾ ರೀತಿಯಲ್ಲಿ ಅತ್ಯಾಚರಕ್ಕೊಳಗಾಗಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮುಂಬೈನ ಸಾಕಿನಾಕಾ ಪ್ರದೇಶದಲ್ಲಿ 30 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕ ಆಕೆಯ ಗುಪ್ತಾಂಗಕ್ಕೆ ರಾಡ್​ ಹಾಕಿ, ತಲೆಗೆ ರಾಡ್​ನಿಂದ ಹೊಡೆದು ವಿಕೃತಿ ಮೆರೆದಿದ್ದನು.

ಘಟನೆ ಬಳಿಕ ಪರಾರಿಯಾಗಿದ್ದ ಆರೋಪಿ ಮೋಹನ್ ಚವ್ಹಾಣ್ (45)ನನ್ನು ಸಾಕಿನಾಕಾ ಪೊಲೀಸರು ಬಂಧಿಸಿದ್ದು, ವಿಚಾರಣೆ ಮುಂದುವರೆಸಿದ್ದಾರೆ. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಸಂತ್ರಸ್ತ ಮಹಿಳೆ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

ಆತನ ವಿರುದ್ಧ ಐಪಿಸಿಯ 307ನೇ ಸೆಕ್ಷನ್ ಹಾಗೂ 376ರ ಅಡಿ ಪ್ರಕರಣ ದಾಖಲಿಸಲಾಗಿದೆ. ಶುಕ್ರವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಪೊಲೀಸರು ತೀವ್ರ ರಕ್ತಸ್ರಾವಕ್ಕೊಳಗಾಗಿದ್ದ ಮಹಿಳೆಯನ್ನು ರಾಜವಾಡಿ ಆಸ್ಪತ್ರೆಗೆ ದಾಖಲಿಸಿದ್ದರು.

ನಿರ್ಭಯಾ ಮಾದರಿಯ ಪ್ರಕರಣವೊಂದು ಮತ್ತೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದು ಹೋಗಿದೆ. ಮುಂಬೈನ ಸಾಕಿನಾಕಾ ಪ್ರದೇಶದ ಕೈರಾನಿ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಮಹಿಳೆಗೆ ಚಿತ್ರ ಹಿಂಸೆ ನೀಡಿ, ಬಳಿಕ ಆಕೆಯನ್ನು ಅತ್ಯಾಚಾರ ಎಸಗಿದ್ದಾನೆ. ಕೈರಾನಿ ರಸ್ತೆಯಲ್ಲಿ ಮಹಿಳೆಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸುತ್ತಿದ್ದಾನೆ ಎಂದು ಸ್ಥಳೀಯರು ಪೊಲೀಸರಿಗೆ ಫೋನ್ ಮಾಡಿದ್ದಾರೆ.

ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸುವಷ್ಟರಲ್ಲಿ ಕೃತ್ಯ ನಡೆದಿದೆ. ಆರೋಪಿಯು ಮಹಿಳೆಗೆ ಥಳಿಸಿ, ಹಲ್ಲೆ ಮಾಡಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯನ್ನು ಪೊಲೀಸರು ರಾಜವಾಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಇದೀಗ 33 ಗಂಟೆಗಳ ನರಳಾಟದ ಬಳಿಕ ಸಂತ್ರಸ್ತೆ ಕೊನೆಯುಸಿರೆಳೆದಿದ್ದಾರೆ.

ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಮುಂಬೈ ಪೊಲೀಸರು ಮೋಹನ್ ಚೌಹಾಟ್ ಎಂಬ ಆರೋಪಿಯನ್ನು ಬಂಧಿಸಿದ್ದು, ಆತನನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಪ್ರಾಥಮಿಕ ಆರೋಗ್ಯ ವರದಿ ಪ್ರಕಾರ ಅವರ ಮೇಲೆ ಅತ್ಯಾಚಾರ ನಡೆದಿದ್ದು, ಖಾಸಗಿ ಅಂಗಗಳ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆಯೂ ನಡೆದಿದೆ. ವಾಹನದ ಒಳಗೆ ರಕ್ತದ ಕಲೆಗಳು ಕಂಡುಬಂದಿದೆ.

ಡಿಸೆಂಬರ್ 2012ರಲ್ಲಿ ನಿರ್ಭಯಾ ಎಂದು ದೇಶದಲ್ಲೆಡೆ ಗೊತ್ತಿರುವ ಯುವತಿ ಮೇಲೆ ಚಲಿಸುತ್ತಿರುವ ಬಸ್‌ನಲ್ಲಿ ಕ್ರೂರಿಗಳ ಗುಂಪೊಂದು ಮಾರಣಾಂತಿಕ ಅತ್ಯಾಚಾರವೆಸಗಿ ಕಬ್ಬಿಣದ ರಾಡ್‌ನಿಂದ ಆಕೆ ಮೇಲೆ ಹಲ್ಲೆ ಮಾಡಿ ಕೊಂದಿರುವ ಘಟನೆ ಇಡೀ ದೇಶವನ್ನೇ ಆಕ್ರೋಶಕ್ಕೆ ಗುರಿಯಾಗುವಂತೆ ಮಾಡಿತ್ತು.

English summary
A 30-year-old woman, who was found lying unconscious at Khairani Road in the Saki Naka area on September 9 after allegedly being raped, has died during the treatment at a city hospital, said Mumbai Police on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X