ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಕಟ್ಟಡದಿಂದ ಜಿಗಿದು ಗಂಭೀರ ಗಾಯ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮುಂಬೈ, ಮಾರ್ಚ್ 17: ಇಪ್ಪತ್ತೇಳು ವರ್ಷದ ಮಹಿಳೆ ಮೇಲೆ ಇಬ್ಬರು ಅತ್ಯಾಚಾರ ಎಸಗಿದ್ದು, ಅವರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಕಟ್ಟಡದಿಂದ ಜಿಗಿದು, ಆಕೆ ಗಂಭೀರವಾಗಿ ಗಾಯಗೊಂಡ ಘಟನೆ ದಕ್ಷಿಣ ಮುಂಬೈನಲ್ಲಿ ನಡೆದಿದೆ. ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಇಂಥದ್ದೇ ಘಟನೆ ಈಚೆಗೆ ದೆಹಲಿಯಲ್ಲಿ ಕೂಡ ನಡೆದಿತ್ತು.

ಉತ್ತರಪ್ರದೇಶ ಮೂಲದ ಮಹಿಳೆಯು ಪೈಧೋನಿ ಪ್ರದೇಶದ ಕಟ್ಟಡದಲ್ಲಿ ಕಂಡುಬಂದಿದ್ದಾರೆ. ಘಟನೆ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಪೈಧೋನಿ ಪೊಲೀಸರು ಸ್ಥಳಕ್ಕೆ ತೆರಳಿ, ಹತ್ತಿರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿ, ಇಬ್ಬರನ್ನು ಬಂಧಿಸಿದ್ದಾರೆ. ವಿಚಾರಣೆ ಮುಂದುವರಿದಿದೆ ಎಂದು ಡಿಸಿಪಿ ಚವಾಣ್ ತಿಳಿಸಿದ್ದಾರೆ.[ದೆಹಲಿಯಲ್ಲಿ ಮಹಿಳೆ ಮೇಲೆ ಬಿಪಿಓ ಉದ್ಯೋಗಿಗಳಿಂದ ಅತ್ಯಾಚಾರ]

Woman Allegedly Gangraped In Mumbai, Falls From The 5th Floor Of A Building

ಮಹಿಳೆ ಮೇಲೆ ಗುರುವಾರ ರಾತ್ರಿ ಐದನೇ ಅಂತಸ್ತಿನ ಮನೆಯಲ್ಲಿ ಆರೋಪಿಗಳು ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ತನ್ನ ಪರಿಚಿತ ವ್ಯಕ್ತಿಯೊಂದಿಗೆ ಆ ಮಹಿಳೆ ಅಲ್ಲಿಗೆ ಬಂದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯು ಹತ್ತು ದಿನದ ಹಿಂದೆ ಉದ್ಯೋಗ ಕೊಡಿಸುವುದಾಗಿ ಆಕೆಯನ್ನು ಕರೆತಂದಿದ್ದ.[ಬೆಂಗಳೂರು: ರೇಪ್ ಕೇಸಿನಲ್ಲಿ ಜಾಮೀನು ಕೊಟ್ರು, ಆತ ಮತ್ತೆ ರೇಪ್ ಮಾಡಿದ]

ಇಬ್ಬರೂ ಆರೋಪಿಗಳು ಭಿವಂಡಿ ಟೌನ್ ಷಿಪ್ ಯೋಜನೆಯ ನೆರೆಯ ಥಾಣೆ ಜಿಲ್ಲೆಯಲ್ಲಿ ಎಂಟು ದಿನವಿದ್ದರು. ಅಲ್ಲೂ ಸಹ ಆಕೆ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 27-year-old woman was allegedly raped by two men and sustained serious injuries when she fell from a building in south Mumbai while trying to escape.
Please Wait while comments are loading...