ಎಂಟು ಕೇಸಿನ ಒಡೆಯ ಗಾಯಕ್ ವಾಡ್ ಗೆ ವಿವಾದವೇನು ಹೊಸತಲ್ಲ!
ಏರ್ ಇಂಡಿಯಾ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ ಆರೋಪದಿಂದಾಗಿ ಕಪ್ಪುಪಟ್ಟಿಗೆ ಸೇರಿದ ಶಿವ ಸೇನಾ ಸಂಸದ ರವೀಂದ್ರ ಗಾಯಕ್ ವಾಡ್ ಮೇಲೆ ಈಗಾಗಲೇ 8 ಅಪರಾಧ ಪ್ರಕರಣಗಳಿವೆ.
ಮುಂಬೈ, ಮಾರ್ಚ್ 24: ಏರ್ ಇಂಡಿಯಾ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ ಆರೋಪದಿಂದಾಗಿ ಕಪ್ಪುಪಟ್ಟಿಗೆ ಸೇರಿದ ಶಿವ ಸೇನಾ ಸಂಸದ ರವೀಂದ್ರ ಗಾಯಕ್ ವಾಡ್ ಗೆ ವಿವಾದಗಳೇನು ಹೊಸತಲ್ಲ.
2014 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಅವರು ಸಲ್ಲಿಸಿದ ಅಫಿಡವಿಟ್ ನಲ್ಲಿ ಅವರೇ ಉಲ್ಲೇಖಿಸಿದ ಮಾಹಿತಿಯ ಪ್ರಕಾರ ಅವರ ಮೇಲೆ 8 ಅಪರಾಧ ಪ್ರಕರಣಗಳು ದಾಖಲಾಗಿವೆ![ಚಪ್ಪಲಿ ಏಟು ಕೊಟ್ಟ 'ಮಹಾ' ಸಂಸದ ಕಪ್ಪು ಪಟ್ಟಿಗೆ!]

ಕೊಲೆ, ಅಪರಾಧಕ್ಕೆ ಕುಮ್ಮಕ್ಕು, ಗಲಭೆ, ಹಿಂಸೆಗೆ ಕುಮ್ಮಕ್ಕು, ಮಾರಣಾಂತಿಕ ಆಯುಧಗಳನ್ನು ಹೊಂದಿದ ಆರೋಪ ಸೇರಿದಂತೆ ಒಟ್ಟು ಎಂಟು ಪ್ರಕರಣಗಳು ಮಹಾರಾಷ್ಟ್ರದ ಒಸ್ಮಾನಾಬಾದ್ ಕ್ಷೇತ್ರದ ಸಂಸದ ಗಾಯಕ್ ವಾಡ್ ಮೇಲಿದೆ.[ಚಪ್ಪಲಿ ಏಟು ಪ್ರಕರಣ: ಸಂಸದನಿಗೆ ಶಿವಸೇನೆ ನೋಟಿಸ್]
ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥವಾಗುವವರೆಗೂ ಗಾಯಕ್ ವಾಡ್ ವಿಮಾನಯಾನ ಮಾಡುವಂತಿಲ್ಲ ಎಂದು ಭಾರತೀಯ ವಿಮಾನಯಾನ ಫೆಡರೇಶನ್ ಈಗಾಗಲೇ ಅವರ ಮೇಲೆ ನಿಷೇಧ ಹೇರಿದೆ. ಆದರೂ ಇಂದು ಮಧ್ಯಾಹ್ನ 4:30ರ ವಿಮಾನಕ್ಕೆ ನಾನು ವಿಮಾನದಲ್ಲಿಯೇ ಪುಣೆಗೆ ಹೋಗುತ್ತೇನೆ, ಏನಾಗುತ್ತದೋ ನೋಡಿಯೇ ಬಿಡೋಣ ಎಂಬಂಥ ಉದ್ಧಟತನದ ಹೇಳಿಕೆ ನೀಡಿ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.












Click it and Unblock the Notifications