• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅರ್ನಬ್ ಗೋಸ್ವಾಮಿ 70 ಕಿ.ಮೀ ದೂರದ ಜೈಲಿಗೆ ಶಿಫ್ಟ್: ಕಾರಣ ಏನು?

|

ಮುಂಬಯಿ, ನ 8: ರಿಪಬ್ಲಿಕ್ ಟಿವಿಯ ಎಡಿಟರ್-ಇನ್-ಚೀಫ್ ಅರ್ನಬ್ ಗೋಸ್ವಾಮಿಯನ್ನು ಆಲಿಬಾಗ್ ನಲ್ಲಿರುವ ಸರಕಾರಿ ಶಾಲೆಯಿಂದ, ಅಲ್ಲಿಂದ ಎಪ್ಪತ್ತು ಕಿಲೋಮೀಟರ್ ದೂರದ ತಲೋಜ ಜೈಲಿಗೆ ಸ್ಥಳಾಂತರಿಸಲಾಗಿದೆ.

ಭಾನುವಾರ ಬೆಳಗ್ಗೆ ಅರ್ನಬ್ ಅನ್ನು ನವಿ ಮುಂಬೈನಲ್ಲಿರುವ ಜೈಲಿಗೆ ಶಿಫ್ಟ್ ಮಾಡಲಾಗಿದ್ದು, ನ್ಯಾಯಾಂಗ ಬಂಧನದ ವೇಳೆ ಮೊಬೈಲ್ ಫೋನ್ ಬಳಸಿದ್ದಕ್ಕಾಗಿ ಪೊಲೀಸರು ಈ ಕ್ರಮ ತೆಗೆದುಕೊಂಡಿದ್ದಾರೆ.

ಬಂಧನದ ವೇಳೆ ಪೊಲೀಸರಿಂದ ಹಿಂಸೆ: ಅರ್ನಬ್ ಗೋಸ್ವಾಮಿ ಆರೋಪ

ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನದ ನಂತರ, ಆಲಿಬಾಗ್ ನ ಸರಕಾರಿ ಸರ್ಕಾರಿ ಶಾಲೆಯೊಂದರಲ್ಲಿ ಅರ್ನಬ್ ಗೋಸ್ವಾಮಿಯನ್ನು ಕ್ವಾರಂಟೀನ್ ಮಾಡಲಾಗಿತ್ತು. ಕೋವಿಡ್ ಕಾರಣಕ್ಕಾಗಿ ಅವರನ್ನು ಜೈಲಿಗೆ ಕಳುಹಿಸರಲಿಲ್ಲ.

ಅರ್ನಬ್ ಅವರ ಎಲ್ಲಾ ಫೋನ್ ಹಾಗೂ ವೈಯಕ್ತಿಕ ವಸ್ತುಗಳನ್ನು ಬಂಧನದ ವೇಳೆಯೇ ಜಫ್ತಿ ಮಾಡಿದ್ದರೂ, ಇನ್ನೊಬ್ಬರ ಫೋನ್ ಅನ್ನು ಬಳಸಿಕೊಂಡಿದ್ದರು. ಅಷ್ಟೇ ಅಲ್ಲದೇ, ಸೋಷಿಯಲ್ ಮಿಡಿಯಾದಲ್ಲೂ ಆಕ್ಟೀವ್ ಆಗಿದ್ದರು.

2018ರ ಆತ್ಮಹತ್ಯೆಗೆ ಕುಮ್ಮಕ್ಕು ಆರೋಪ ಪ್ರಕರಣವೊಂದನ್ನು ಪುನಃ ತೆರೆದಿರುವ ಪೊಲೀಸರು, ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ನಬ್ ಅವರನ್ನು ನವೆಂಬರ್ ನಾಲ್ಕರಂದು, ಅವರ ವರ್ಲಿ ನಿವಾಸದಿಂದ, ಮುಂಬೈ ಪೊಲೀಸರು ಬಂಧಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಅಧಿಕಾರಿಯಾಗಿರುವ ಜಮೀಲ್ ಶೇಖ್ ಮಾತನಾಡುತ್ತಾ, "ಕಳೆದ ಶುಕ್ರವಾರ ತಡರಾತ್ರಿ ಅರ್ನಬ್ ಗೋಸ್ವಾಮಿಯವರು ಸಾಮಾಜಿಕ ತಾಣದಲ್ಲಿ ಸಕ್ರಿಯವಾಗಿದ್ದಾರೆ ಎನ್ನುವ ಮಾಹಿತಿ ಸಿಕ್ಕಿತು.

ಅರ್ನಬ್‌ಗೆ ಬೆದರಿಕೆ: ಮಹಾರಾಷ್ಟ್ರ ವಿಧಾನಸಭೆ ಕಾರ್ಯದರ್ಶಿಗೆ ಸುಪ್ರೀಂಕೋರ್ಟ್ ಸಮನ್ಸ್

"ಅವರ ಎಲ್ಲಾ ವೈಯಕ್ತಿಕ ವಸ್ತುಗಳನ್ನು ಜಪ್ತಿ ಮಾಡಿದ್ದರೂ, ಇನ್ನೊಬ್ಬರ ಫೋನ್ ಬಳಸುತ್ತಿದ್ದರು. ರಾಯಘಡ ಪೊಲೀಸರಿಗೆ ಅರ್ನಬ್ ಗೆ ಫೋನ್ ಕೊಟ್ಟಿದ್ದು ಯಾರು ಎನ್ನುವುದರ ತನಿಖೆ ನಡೆಸುವಂತೆ ಸೂಚಿಸಲಾಗಿದೆ"ಎಂದು ಜಮೀಲ್ ಹೇಳಿದ್ದಾರೆ.

English summary
Why Republic TV Editor-In-Chief Arnab Goswami Shifted To Taloja Jail From Alibaug.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X