ಒಂದು ಪ್ರಶ್ನೆಯನ್ನು ಮೋದಿ ಸ್ವೀಕರಿಸಲಿಲ್ಲವೇಕೆ? ಶಿವಸೇನಾ ಪ್ರತಿಕ್ರಿಯೆ

ಮುಂಬೈ, ಮೇ 19: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದರ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ಹೋಗದೆ ಎಲ್ಲವನ್ನೂ ಅಮಿತ್ ಶಾ ಅವರಿಗೆ ಬಿಟ್ಟುಕೊಟ್ಟು ಮೌನ ವಹಿಸಿದ್ದು, ಅವರ ವಿರೋಧಿಗಳ ಬಾಯಿಗೆ ಆಹಾರವಾಗಿದೆ. ಆದರೆ, ಮೋದಿ ನಡೆದುಕೊಂಡ ರೀತಿ ಸರಿಯಾಗಿತ್ತು ಎಂದು ಶಿವಸೇನಾ ಬೆಂಬಲಕ್ಕೆ ನಿಂತಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಮೊದಲ ಬಾರಿಗೆ ಜಂಟಿಯಾಗಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ್ದರು. ತಮ್ಮ ಸರ್ಕಾರದ ಬಗ್ಗೆ ಸ್ವಲ್ಪ ಹೊತ್ತು ಮೋದಿ ಮಾತನಾಡಿದ್ದರು. ಆದರೆ, ಬಳಿಕ ಪತ್ರಕರ್ತರು ಕೇಳಿದ ಯಾವ ಪ್ರಶ್ನೆಗೂ ಅವರು ಉತ್ತರ ನೀಡಿರಲಿಲ್ಲ. ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡುವ ಜವಾಬ್ದಾರಿಯನ್ನು ಸಂಪೂರ್ಣವಾಗಿ ಅಮಿತ್ ಶಾ ಅವರಿಗೇ ಬಿಟ್ಟಿದ್ದರು

Why didn’t Modi take questions at the presser: Shiv Sena has this answer

ಶಿವಸೇನಾ ಸಮರ್ಥನೆ: ರಾಜ್ಯಸಭಾ ಸದಸ್ಯ ಸಂಜಯ್ ರೌತ್ ಅವರು ಮಾತನಾಡಿ, 'ಅದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಸುದ್ದಿಗೋಷ್ಠಿಯಾಗಿತ್ತು. ಮೋದಿ ಅವರು ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ ಮಾತ್ರ ಉಪಸ್ಥಿತರಿದ್ದರು. ಮೋದಿ ಅವರು ಈ ಮುಂಚೆ ಅನೇಕ ಟಿವಿ ಹಾಗೂ ಮುದ್ರಣ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಾರೆ. ಮೋದಿ ಅವರು ಸುದ್ದಿಗೋಷ್ಠಿ ಕರೆದು, ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ ಅಥವಾ ಈ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆ ಸ್ವೀಕರಿಸಲಿಲ್ಲ ಎಂಬುದು ಸರಿಯಲ್ಲ' ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು ಎಂದಿಗೂ ಜನ ಸಂಪರ್ಕ, ಸಂವಹನ ಮಾಧ್ಯಮ ಬಳಕೆಯಲ್ಲಿ ಎಲ್ಲರಿಗಿಂತ ಮುಂದಿರುತ್ತಾರೆ. ಭಾಷಣ, ಮನ್ ಕಿ ಬಾತ್ ಮೂಲಕ ದೇಶದ ಮೂಲೆ ಮೂಲೆ ಜನರನ್ನು ತಲುಪಿದ್ದಾರೆ. ಸುದ್ದಿಗೋಷ್ಠಿ ಕರೆದಿಲ್ಲ, ಚರ್ಚೆಗೆ ಸಿದ್ಧರಿಲ್ಲ ಎಂದು ವೃಥಾರೋಪ ಮಾಡುವುದು ಸರಿಯಲ್ಲ ಎಂದಿದ್ದಾರೆ.

ಕೇದಾರನಾಥ್, ಬದರಿನಾಥ್ ಯಾತ್ರೆ ಮಾಡುವುದರಲ್ಲಿ ತಪ್ಪೇನಿದೆ. ಹಿಂದುಗಳು ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡುವುದು ಸಂಸ್ಕೃತಿಯ ಲಕ್ಷಣ ಇದರಲ್ಲಿ ರಾಜಕೀಯ ಹುಡುಕಬೇಡಿ ಎಂದರು. ಮಹಾತ್ಮಾ ಗಾಂಧಿ ಅವರನ್ನು ಕೊಂದ ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+