ನರೇಂದ್ರ ಮೋದಿ ಜೀವನಾಧಾರಿತ ಸಿನಿಮಾ ಏಪ್ರಿಲ್ 12ಕ್ಕೆ ತೆರೆಗೆ

ಮುಂಬೈ, ಮಾರ್ಚ್ 15: ವಿವೇಕ್ ಒಬೇರಾಯ್ ಅಭಿನಯದ ಪ್ರಧಾನಿ ನರೇಂದ್ರ್ ಮೋದಿ ಜೀವನಾಧಾರಿತ ಚಲನಚಿತ್ರ ಏಪ್ರಿಲ್ ಹನ್ನೆರಡನೇ ತಾರೀಕು ದೇಶದಾದ್ಯಂತ ಬಿಡುಗಡೆ ಆಗಲಿದೆ. ಈ ಸಿನಿಮಾಗೆ ಪಿಎಂ ನರೇಂದ್ರ ಮೋದಿ ಎಂದು ಹೆಸರಿಡಲಾಗಿದೆ. ಮೇರಿ ಕೋಮ್ ಹಾಗೂ ಸರಬ್ಜಿತ್ ಸಿನಿಮಾಗಳನ್ನು ಮಾಡಿದ್ದ ಒಮಂಗ್ ಕುಮಾರ್ ಮೋದಿ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಕಳೆದ ಜನವರಿಯಲ್ಲಿ ಗುಜರಾತ್ ನಲ್ಲಿ ಈ ಸಿನಿಮಾ ಆರಂಭವಾಗಿತ್ತು. ಇದೀಗ ಮುಂಬೈನಲ್ಲಿ ಕೊನೆ ಹಂತದ ಚಿತ್ರೀಕರಣ ಮುಗಿಯುತ್ತಿದೆ. ಉತ್ತರಾಖಂಡ್ ನಲ್ಲಿ ಕೂಡ ಸಿನಿಮಾದ ಚಿತ್ರೀಕರಣ ನಡೆದಿದೆ. ಮೋದಿ ಅವರ ಆರಂಭದ ದಿನಗಳು, ರಾಜಕೀಯ ಪಯಣವನ್ನು ಉತ್ತರ ಕಾಶಿ ಜಿಲ್ಲೆಯ ಗಂಗಾ ಘಾಟ್, ಕಲ್ಪ್ ಕೇದಾರ್ ಮಂದಿರ್ ಮತ್ತಿತರ ಕಡೆಗಳಲ್ಲಿ ಚಿತ್ರೀಕರಿಸಲಾಗಿದೆ.

ಗುಜರಾತ್ ಮುಖ್ಯಮಂತ್ರಿ ಆಗಿದ್ದ ದಿನಗಳಿಂದ ಕಳೆದ ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ದಾಖಲಿಸಿ, ಪ್ರಧಾನಿ ಹುದ್ದೆಗೆ ಏರುವ ತನಕದ ಪಯಣವನ್ನು ಸಿನಿಮಾದಲ್ಲಿ ಹೇಳಲಾಗಿದೆ ಎಂದು ಚಿತ್ರ ನಿರ್ದೇಶಕ ತಿಳಿಸಿದ್ದಾರೆ.

Vivek Oberoi starrer ‘PM Narendra Modi’ biopic to hit theatres on April 12

ಇದು ತುಂಬ ವಿಶೇಷವಾದ ಸಿನಿಮಾ. ನೋಡುಗರನ್ನು ಈ ನಂಬಿಕೆಯ ಕಥೆ ಉತ್ತೇಜಿಸುತ್ತದೆ. ನೂರಾ ಮೂವತ್ತು ಕೋಟಿ ಜನರ ಕಥೆಯನ್ನು ಬಿಡುಗಡೆ ಮಾಡಲು ಸಂತೋಷ ಆಗುತ್ತದೆ ಎಂದು ನಿರ್ಮಾಪಕ ಸಂದೀಪ್ ಸಿಂಗ್ ಹೇಳಿದ್ದಾರೆ.

ವಿವೇಕ್ ಒಬೇರಾಯ್ ಹೊರತು ಪಡಿಸಿ ದರ್ಶನ್ ಕುಮಾರ್, ಬೊಮನ್ ಇರಾನಿ, ಮನೋಜ್ ಜೋಶಿ, ಪ್ರಶಾಂತ್ ನಾರಾಯಣನ್, ಝರೀನಾ ವಹಾಬ್ ಮತ್ತು ಬರ್ಖಾ ಬಿಷ್ತ್ ಸೇನ್ ಗುಪ್ತಾ ಮತ್ತಿತರರು ಅಭಿನಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+