ಚಿತ್ರಗಳು : ಮುಂಬೈ ಪೇಜಾವರ ಮಠದಲ್ಲಿ ಶ್ರೀ ಕೃಷ್ಣ ಪ್ರತಿಷ್ಠಾಪನೆ

By: ಚಿತ್ರ, ವರದಿ : ರೋನ್ಸ್ ಬಂಟ್ವಾಳ್
Subscribe to Oneindia Kannada

ಮುಂಬೈ, ಜನವರಿ 04 : ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠದ ಸಾಂತಾಕ್ರೂಜ್‌ ಪೂರ್ವದ ಪ್ರಭಾತ್‌ ಕಾಲೋನಿಯ ಪೇಜಾವರ ಮಠದಲ್ಲಿ ಶ್ರೀ ಕೃಷ್ಣ ಪ್ರತಿಷ್ಠಾಪನಾ ಮಹೋತ್ಸವ ಶನಿವಾರ ಮತ್ತು ಭಾನುವಾರ ನಡೆಯಿತು. ಪೇಜಾವರ ಅಧೋಕ್ಷಜ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿಗಳ ನೇತೃತ್ವದಲ್ಲಿ ಎಲ್ಲಾ ಕಾರ್ಯಕ್ರಮಗಳು ನಡೆದವು.

ಶ್ರೀ ಕೃಷ್ಣ ಪ್ರತಿಷ್ಠಾಪನಾ ಮಹೋತ್ಸವಕ್ಕೆ ಪೂರ್ವ ತಯಾರಿಯಾಗಿ ಜನವರಿ 1ರಂದು ಶ್ರೀ ಚಂಡಿಕಾ ಯಾಗ, ಭೂ-ವರಾಹ ಶಾಂತಿ, ರಾಕ್ಷೋಘ್ನ ಹೋಮ ಮತ್ತು ಪ್ರತಿಮಾಧಿವಸ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಜನವರಿ 2ರ ಶನಿವಾರ ರಾತ್ರಿ ಪ್ರತಿಷ್ಠಾಪನಾ ಮಹೋತ್ಸವಕ್ಕೆ ವಿಶ್ವೇಶತೀರ್ಥ ಸ್ವಾಮೀಜಿಗಳು ಚಾಲನೆ ನೀಡಿದರು.

ಶ್ರೀ ಕೃಷ್ಣ ಪ್ರತಿಷ್ಠಾಪನಾ ಮಹೋತ್ಸವಕ್ಕೆ ಚಾಲನೆ ನೀಡಿದ ಮಾತನಾಡಿದ ವಿಶ್ವೇಶತೀರ್ಥ ಸ್ವಾಮೀಜಿಗಳು, 'ಕರ್ನಾಟಕ ಮಹಾರಾಷ್ಟ್ರದ ಜನತೆಯ ಅನ್ಯೋತ್ಯತೆ ಶಕ್ತಿ ವಿಶಿಷ್ಟವಾದದ್ದು. ಭವಿಷ್ಯದಲ್ಲಿಯೂ ಇಂತಹ ಸೌಹಾರ್ದತಾ ಭಾವನೆ ಬೆಳೆದು ಸಾಮರಸ್ಯದ ಬಾಳು ಬೆಳಗುವಂತಾಗಲಿ' ಎಂದು ಹಾರೈಸಿದರು.

ಜನವರಿ 3ರ ಭಾನುವಾರ ಮುಂಜಾನೆ ಪೇಜಾವರ ಕಿರಿಯ ಯತಿ ವಿಶ್ವಪ್ರಸನ್ನ ಸ್ವಾಮೀಜಿ ಅವರು ಕಲಶಾಭಿಷೇಕ ನೆರವೇರಿಸಿ, ಮಹಾಮಂಗಳಾರತಿ ಮಾಡಿ ಶ್ರೀ ಕೃಷ್ಣ ದೇವರನ್ನು ಪ್ರತಿಷ್ಠಾಪಿಸಿದರು. ನಂತರ ಮಾತನಾಡಿದ ಅವರು, 'ದ್ವಾರಕೆಯ ಶ್ರೀ ಕೃಷ್ಣನು ಉಡುಪಿಯಲ್ಲಿ ನೆಲೆ ನಿಂತು ಅಲ್ಲಿಂದ ಇದೀಗ ಮುಂಬೈನಲ್ಲಿ ಅವತರಿಸಿದ್ದು, ಇಲ್ಲಿನ ಜನರ ತಪಸ್ಸಿನ ಫಲವಾಗಿದೆ. ಮುಂಬೈನಲ್ಲಿನ ಭಕ್ತ ಜನತೆಯ ಬೇಡಿಕೆ ಈಡೇರಿದಂತಾಗಿದೆ' ಎಂದು ತಿಳಿಸಿದರು. ಚಿತ್ರಗಳಲ್ಲಿ ನೋಡಿ ಶ್ರೀ ಕೃಷ್ಣ ಪ್ರತಿಷ್ಠಾಪನಾ ಮಹೋತ್ಸವ......

ಮುಂಬೈನಲ್ಲಿ ಕೃಷ್ಣ ಪ್ರತಿಷ್ಠಾಪನಾ ಮಹೋತ್ಸವ

ಮುಂಬೈನಲ್ಲಿ ಕೃಷ್ಣ ಪ್ರತಿಷ್ಠಾಪನಾ ಮಹೋತ್ಸವ

ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠದ ಸಾಂತಾಕ್ರೂಜ್‌ ಪೂರ್ವದ ಪ್ರಭಾತ್‌ ಕಾಲೋನಿಯ ಪೇಜಾವರ ಮಠದಲ್ಲಿ ಶ್ರೀ ಕೃಷ್ಣ ಪ್ರತಿಷ್ಠಾಪನಾ ಮಹೋತ್ಸವ ಶನಿವಾರ ಮತ್ತು ಭಾನುವಾರ ನಡೆಯಿತು.

ವಿಶ್ವೇಶತೀರ್ಥ ಸ್ವಾಮೀಜಿಗಳ ನೇತೃತ್ವ

ವಿಶ್ವೇಶತೀರ್ಥ ಸ್ವಾಮೀಜಿಗಳ ನೇತೃತ್ವ

ಪೇಜಾವರ ಅಧೋಕ್ಷಜ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿಗಳ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆದವು. ಪೇಜಾವರ ಕಿರಿಯ ಯತಿ ವಿಶ್ವಪ್ರಸನ್ನ ಸ್ವಾಮೀಜಿಗಳು ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

ಜನವರಿ 1ರಿಂದ ಕಾರ್ಯಕ್ರಮಗಳು ಆರಂಭ

ಜನವರಿ 1ರಿಂದ ಕಾರ್ಯಕ್ರಮಗಳು ಆರಂಭ

ಶ್ರೀ ಕೃಷ್ಣ ಪ್ರತಿಷ್ಠಾಪನಾ ಮಹೋತ್ಸವಕ್ಕೆ ಪೂರ್ವ ತಯಾರಿಯಾಗಿ ಜನವರಿ 1ರ ಶುಕ್ರವಾರ ಶ್ರೀ ಚಂಡಿಕಾ ಯಾಗ, ಭೂ-ವರಾಹ ಶಾಂತಿ, ರಾಕ್ಷೋಘ್ನ ಹೋಮ ಮತ್ತು ಪ್ರತಿಮಾಧಿವಸ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಭಾನುವಾರ ಶ್ರೀ ಕೃಷ್ಣ ಪ್ರತಿಷ್ಠಾಪನೆ ಕಾರ್ಯಕ್ರಮ

ಭಾನುವಾರ ಶ್ರೀ ಕೃಷ್ಣ ಪ್ರತಿಷ್ಠಾಪನೆ ಕಾರ್ಯಕ್ರಮ

ಜನವರಿ 2ರ ಶನಿವಾರ ರಾತ್ರಿ ಪ್ರತಿಷ್ಠಾಪನಾ ಮಹೋತ್ಸವಕ್ಕೆ ವಿಶ್ವೇಶತೀರ್ಥ ಸ್ವಾಮೀಜಿಗಳು ಚಾಲನೆ ನೀಡಿದರು. ಜನವರಿ 3ರ ಭಾನುವಾರ ಮುಂಜಾನೆ ಪೇಜಾವರ ಕಿರಿಯ ಯತಿ ವಿಶ್ವಪ್ರಸನ್ನ ಸ್ವಾಮೀಜಿ ಅವರು ಕಲಶಾಭಿಷೇಕ ನೆರವೇರಿಸಿ, ಮಹಾಮಂಗಳಾರತಿ ಮಾಡಿ ಶ್ರೀ ಕೃಷ್ಣ ದೇವರನ್ನು ಪ್ರತಿಷ್ಠಾಪಿಸಿದರು.

'ಎರಡನೇ ಉಡುಪಿ ಮುಂಬಯಿಯಲ್ಲಿ ಆದಂತಿದೆ'

'ಎರಡನೇ ಉಡುಪಿ ಮುಂಬಯಿಯಲ್ಲಿ ಆದಂತಿದೆ'

'ಶ್ರೀಕೃಷ್ಣನನ್ನು ಇಷ್ಟಾರ್ಥವಾಗಿಸಿದಲ್ಲಿ ಮಾನವ ಬದುಕು ಹಸನಾಗುವುದು. ಶ್ರೀಕೃಷ್ಣನ ಪ್ರತಿಷ್ಠಾಪನೆಯಿಂದ ಅಖಂಡ ಸಮಾಜ ಕಲ್ಯಾಣ ಸಾಧ್ಯವಾಗಿದ್ದು ಅಂತಹ ಸೇವೆಗೆ ಇಂತಹ ಶಿಲಾಮಯ ಮಂದಿರಗಳ ಅವಶ್ಯಕತೆಯಿದೆ. ಮುಂಬೈನಲ್ಲಿ ಕೃಷ್ಣನ ಪ್ರತಿಷ್ಠಾಪನೆ ಮೂಲಕ ಮುಂಬೈ ಎರಡನೇ ಉಡುಪಿ ಆದಂತಿದೆ' ಎಂದು ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಸ್ವಾರ್ಥ ಮರೆತು ಎಲ್ಲರೂ ಸೇವೆ ಮಾಡೋಣ

ಸ್ವಾರ್ಥ ಮರೆತು ಎಲ್ಲರೂ ಸೇವೆ ಮಾಡೋಣ

'ಮೇಲಕ್ಕಿರುವುದನ್ನು ಕೆಳಕ್ಕೆ ಬೀಳಿಸುವ ಶಕ್ತಿ ಭೂಮಿಗಿದೆ. ಕೆಳಕ್ಕೆ ಹೋದವರನ್ನು ಮೇಲಕ್ಕೆತ್ತುವ ಶಕ್ತಿ ಕೃಷ್ಣನಿಗಿದೆ. ಮಾನವನ ಪ್ರಯತ್ನದೊಂದಿಗೆ ದೇವರ ಅನುಗ್ರಹವಿದ್ದರೆ ಮಾತ್ರ ಜೀವನ ಸಮೃದ್ಧಿಯಾಗುತ್ತದೆ. ಎಲ್ಲರೂ ಸ್ವಾರ್ಥ ಮರೆತು ಸೇವಾಳುಗಳಾಗಿ ಬಾಳುತ್ತಾ ಭಾವೈಕ್ಯತೆಯೊಂದಿಗೆ ಬದುಕು ರೂಪಿಸೋಣ' ಎಂದು ಶ್ರೀಗಳು ಕರೆ ನೀಡಿದರು.

'ಭವಿಷ್ಯದಲ್ಲಿಯೂ ಸಾಮರಸ್ಯವಿರಲಿ'

'ಭವಿಷ್ಯದಲ್ಲಿಯೂ ಸಾಮರಸ್ಯವಿರಲಿ'

'ಕರ್ನಾಟಕ ಮಹಾರಾಷ್ಟ್ರದ ಜನತೆಯ ಅನ್ಯೋತ್ಯತೆ ಶಕ್ತಿ ವಿಶಿಷ್ಟವಾದದ್ದು. ಭವಿಷ್ಯದಲ್ಲಿಯೂ ಇಂತಹ ಸೌಹಾರ್ದತಾ ಭಾವನೆ ಬೆಳೆದು ಸಾಮರಸ್ಯದ ಬಾಳು ಬೆಳಗುವಂತಾಗಲಿ' ಎಂದು ಪೇಜಾವರ ಶ್ರೀಗಳು ಹಾರೈಸಿದರು.

'ಭಕ್ತರ ಬೇಡಿಕೆ ಈಡೇರಿದಂತಾಗಿದೆ'

'ಭಕ್ತರ ಬೇಡಿಕೆ ಈಡೇರಿದಂತಾಗಿದೆ'

'ದ್ವಾರಕೆಯ ಶ್ರೀ ಕೃಷ್ಣನು ಉಡುಪಿಯಲ್ಲಿ ನೆಲೆ ನಿಂತು ಅಲ್ಲಿಂದ ಇದೀಗ ಮುಂಬೈನಲ್ಲಿ ಅವತರಿಸಿದ್ದು, ಇಲ್ಲಿನ ಸಮಸ್ತ ಜನರ ತಪಸ್ಸಿನ ಫಲವಾಗಿದೆ. ಕೃಷ್ಣನ ಪ್ರತಿಷ್ಠಾಪನೆಯಿಂದಾಗಿ ಮುಂಬೈನಲ್ಲಿನ ಭಕ್ತರ ಬೇಡಿಕೆ ಈಡೇರಿದಂತಾಗಿದೆ' ಎಂದು ಪೇಜಾವರ ಕಿರಿಯ ಯತಿ ವಿಶ್ವಪ್ರಸನ್ನ ಸ್ವಾಮೀಜಿ ಹೇಳಿದರು.

ಹರ್ಷವರ್ಧನ್ ಪಾಟೀಲ್ ಪಾಲ್ಗೊಂಡಿದ್ದರು

ಹರ್ಷವರ್ಧನ್ ಪಾಟೀಲ್ ಪಾಲ್ಗೊಂಡಿದ್ದರು

ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಹರ್ಷವರ್ಧನ್ ಪಾಟೀಲ್, ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ.ಎ.ಎಸ್ ರಾವ್, ಪೇಜಾವರ ಮಠ ಮುಂಬೈ ಶಾಖೆಯ ಆಡಳಿತಾಧಿಕಾರಿಗಳಾದ ರೆಂಜಾಳ ರಾಮದಾಸ ಉಪಾಧ್ಯಾಯ ಶ್ರೀಹರಿ ಭಟ್ ಮುಂತಾದವರು ಪಾಲ್ಗೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Udupi Pejawar Mutt sri Vishwesha Teertha Swamiji inaugurated Sri Krishna temple at Pejavar mutt, Santa Cruz(East) Mumbai on Sunday, January 3, 2016.
Please Wait while comments are loading...