ಬಾಲಿವುಡ್‌ಗೆ ಮತ್ತೊಂದು ಶಾಕ್: ಪ್ರಸಿದ್ಧ ಕೊರಿಯೋಗ್ರಾಫರ್ ಸರೋಜ್ ಖಾನ್ ನಿಧನ

ಮುಂಬೈ, ಜುಲೈ 3: ಬಾಲಿವುಡ್‌ನ ಹೆಸರಾಂತ ಕೊರಿಯೋಗ್ರಾಫರ್ ಸರೋಜ್ ಖಾನ್ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಗುರುವಾರ ರಾತ್ರಿ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಸರೋಜ್ ಖಾನ್ ಅವರು ಜೂನ್ 17 ರಂದು ಮುಂಬೈನ ಬಾಂದ್ರಾದ ಗುರು ನಾನಕ್ ಆಸ್ಪತ್ರೆಗೆ ದಾಖಲಾಗಿದ್ದರು.

Veteran Choreographer Saroj Khan Dies Of Cardiac Arrest In Mumbai

ಅವರಿಗೆ ಉಸಿರಾಟದ ಸಮಸ್ಯೆ ಎದುರಾಗಿತ್ತು. ಗುರುವಾರ ಮಧ್ಯರಾತ್ರಿ 1.52ರ ಹೊತ್ತಿಗೆ ಕೊನೆಯುಸಿರೆಳೆದಿದ್ದಾರೆ. ಮುಂಬೈನ ಚಾರ್‌ಕೋಪ್ ನಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ. ನಟ ಸುಶಾಂತ್ ಸಾವಿನ ಸುದ್ದಿ ಮಾಸುವ ಮುನ್ನವೇ ಬಾಲಿವುಡ್‌ಗೆ ಮತ್ತೊಂದು ಶಾಕ್ ಇದಾಗಿದೆ.

ಜೂನ್ 24 ರಂದು ಸರೋಜ್ ಖಾನ್ ಆರೋಗ್ಯ ಸುಧಾರಿಸಿದೆ ಶೀಘ್ರ ಆಸ್ಪತ್ರೆಯಿಂದ ಬಿಡುಗಡೆ ಮಾಡುವುದಾಗಿ ಕುಟುಂಬಸ್ಥರು ತಿಳಿಸಿದ್ದರು. ಆಸ್ಪತ್ರೆಯಲ್ಲಿ ಸರೋಜ್ ಅವರಿಗೆ ಕೊವಿಡ್ 19 ಪರೀಕ್ಷೆಯನ್ನೂ ಮಾಡಲಾಗಿತ್ತು. ವರದಿ ನೆಗೆಟಿವ್ ಬಂದಿತ್ತು.

2 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ಅವರಿಗೆ ಮೂರು ರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ. ಸಂಜಯ್ ಲೀಲಾ ಬನ್ಸಾಲಿ ಅವರ ದೇವ್‌ದಾಸ್ ಚಿತ್ರದ ಡೋಲಾರೆ ಡೋಲಾ , ಮಾಧುರಿ ದೀಕ್ಷಿತ್ ಅವರ ತೇಜಾಬ್ ಚಿತ್ರದ ಏಕ್ ದೋ ತೀನ್ , 2007ರಲ್ಲಿ ಜಬ್‌ ವಿ ಮೆಎಟ್ ಚಿತ್ರದ ಯೆ ಇಷ್ಕ್ ಹಾಯೆ ಹಾಡಿಗೆ ರಾಷ್ಟ್ರೀಯ ಪ್ರಶಸ್ತಿ ಬಂದಿತ್ತು.

ಕರಣ್ ಜೋಹರ್ ಅವರ ಕಳಂಕ್ ಚಿತ್ರದ ತಬಾ ಹೋಗಯೆ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+