ಮುಂಬೈ; ಇಂದಿನಿಂದ ಅನ್‌ಲಾಕ್, ಬಸ್ ಸೇವೆ ಆರಂಭ

ಮುಂಬೈ, ಜೂನ್ 07; ಮಹಾರಾಷ್ಟ್ರ ಸರ್ಕಾರ 5 ಹಂತಗಳಲ್ಲಿ ಅನ್‌ಲಾಕ್ ಪ್ರಕ್ರಿಯೆ ಜಾರಿಗೊಳಿಸುವುದಾಗಿ ಘೋಷಣೆ ಮಾಡಿದೆ. ಬಿಇಎಸ್‌ಟಿ ಸೋಮವಾರದಿಂದ ಬಸ್ ಸೇವೆ ಆರಂಭಿಸುವುದಾಗಿ ಘೋಷಣೆ ಮಾಡಿದೆ.

ಬೃಹನ್‌ಮುಂಬೈ ಎಲೆಕ್ಟ್ರಿಕ್ ಸಪ್ಲೈ ಮತ್ತು ಟ್ರಾನ್ಸ್‌ಪೋರ್ಟ್‌ ಸೋಮವಾರದಿಂದ ಬಸ್ ಸೇವೆ ಆರಂಭಿಸುವುದಾಗಿ ಹೇಳಿದೆ. ಬಸ್‌ನಲ್ಲಿ ಸಂಚಾರ ನಡೆಸುವ ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಬಸ್‌ಗಳ ಸೀಟುಗಳಷ್ಟು ಮಾತ್ರ ಜನರು ಸಂಚಾರ ನಡೆಸಬಹುದು ಎಂದು ಹೇಳಿದೆ.

ಮಹಾರಾಷ್ಟ್ರ ಸರ್ಕಾರ ಅನ್‌ಲಾಕ್ ಘೋಷಣೆ ಮಾಡಿದೆ. ಸೋಮವಾರದಿಂದ ರೆಸ್ಟೋರೆಂಟ್, ಅಂಗಡಿಗಳು ತೆರೆಯಲು ಅನುಮತಿ ನೀಡಲಾಗಿದೆ. ಮಾಲ್, ಮಲ್ಟಿಫೆಕ್ಸ್, ಥಿಯೇಟರ್‌ಗಳನ್ನು ತೆರೆಯಲು ಒಪ್ಪಿಗೆ ಸಿಕ್ಕಿಲ್ಲ.

 Unlock Bus Service In Mumbai To Resume From Monday

ರೆಸ್ಟೋರೆಂಟ್‌ಗಳು ಸಂಜೆ 4 ಗಂಟೆಯ ತನಕ ತೆರೆದಿರಬಹುದು. ಶೇ 50ರಷ್ಟು ಜನರು ಇರಬೇಕು ಎಂದು ಬಿಎಂಸಿ ಸೂಚನೆ ನೀಡಿದೆ. ಜೂನ್ 15ರ ತನಕ ರಾಜ್ಯದಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದರೂ ಕೆಲವು ವಿನಾಯಿತಿ ನೀಡಲಾಗಿದೆ.

ದೇಶದಲ್ಲೇ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗಿರುವ ರಾಜ್ಯ ಮಹಾರಾಷ್ಟ್ರ. ಲಾಕ್‌ಡೌನ್, ಮೈಕ್ರೋ ಕಟೈನ್ಮೆಂಟ್ ಝೋನ್‌ಗಳ ರಚನೆಯಿಂದ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಭಾನುವಾರ 12,557 ಹೊಸ ಕೋವಿಡ್ ಪ್ರಕರಣ ರಾಜ್ಯದಲ್ಲಿ ದಾಖಲಾಗಿದೆ.

ರಾಜ್ಯದಲ್ಲಿ ಕೋವಿಡ್‌ನಿಂದ ಗುಣಮುಖರಾಗುವವರ ಪ್ರಮಾಣ ಶೇ 95.05ರಷ್ಟಿದೆ. ರಾಜ್ಯದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 1,85,527. ರಾಜ್ಯದಲ್ಲಿನ ಮರಣ ಪ್ರಮಾಣ 1.72ರಷ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+