ವಿಡಿಯೋಗಳಲ್ಲಿ ನೋಡಿ ಮಹಾರಾಷ್ಟ್ರ ಬಂದ್ ಅಬ್ಬರ!

Posted By:
Subscribe to Oneindia Kannada
ಮಹಾರಾಷ್ಟ್ರ ಬಂದ್ : ವೈರಲ್ ಆಗ್ತಿವೆ ಟ್ವಿಟ್ಟರ್ ವಿಡಿಯೋಗಳು

ಮುಂಬೈ, ಜನವರಿ 03: ದಲಿತ ಮತ್ತು ಮರಾಠರ ನಡುವಿನ ಕದನಕ್ಕೆ ಮಹಾರಾಷ್ಟ್ರ ನಲುಗಿದೆ. ಪ್ರತಿಭಟನೆ ಹಿಂಸಾಚಾರವಾಗಿ ತಿರುಗಿ, ಇಂದು(ಜ.03) ಮಹಾರಾಷ್ಟ್ರ ರಾಜ್ಯಾದ್ಯಂತ ಬಂದ್ ಆಚರಿಸಲಾಗುತ್ತಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಬಂದ್ ಗೆ ಕರೆ ನೀಡಿದ್ದರು.

ಭೀಮ ಕೊರೆಗಾಂವ್ ಎಂಬಲ್ಲಿ ಜನವರಿ 1, 1818 ರಂದು ನಡೆದ ಕದನದಲ್ಲಿ ಪೇಶ್ವೆಗಳ ವಿರುದ್ಧ ಹೋರಾಡುವುದಕ್ಕೆ ಬ್ರಿಟೀಶ್ ಈಸ್ಟ್ ಇಂಡಿಯಾ ಕಂಪೆನಿಯೊಂದಿಗೆ ಕೈಜೋಡಿಸಿದ್ದ ಮೆಹರ್ ಸಮುದಾಯ ಈ ಹೋರಾಟದಲ್ಲಿ ಗೆಲುವು ಸಾಧಿಸಿತ್ತು. ಪೇಶ್ವೆಗಳ ವಿರುದ್ಧ, ದಲಿತ ಸಮುದಾಯ ಜಯಗಳಿಸಿದ ಈ ದಿನವನ್ನು ಭೀಮ ಕೊರೆಗಾಂವ್ ವಿಜಯ ದಿವಸ ಎಂದು ಆಚರಿಸಲಾಗುತ್ತದೆ.

LIVE: ಕರ್ನಾಟಕಕ್ಕೂ ತಟ್ಟಿದ ಮುಂಬೈ ಬಂದ್ ಬಿಸಿ: ಬಸ್ ಸೇವೆ ಸ್ಥಗಿತ

ಈ ದಿನದ 200 ನೇ ವರ್ಷಾಚರಣೆ ಜನವರಿ 1, 2018 ರಂದು ಪುಣೆಯಲ್ಲಿ ನಡೆಯುತ್ತಿತ್ತು. ಈಸ್ಟ್ ಇಂಡಿಯಾ ಕಂಪೆನಿಯ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ ಎಂದು ಆರೋಪಿಸಿ, ದಲಿತ ಸಮುದಾಯದ ವಿರುದ್ಧ ಕೆಲ ಬಲಪಂಥೀಯ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯೇ ಹಿಂಸಾಚಾರವಾಗಿ ಬದಲಾದ ಪರಿಣಾಮ ಮಹಾರಾಷ್ಟ್ರದಲ್ಲಿ ಉದ್ವಿಗ್ನ ವಾತಾವರಣ ತಲೆದೋರಿತ್ತು.

ಭೀಮಾ ಕೊರೆಗಾಂವ್ ದಲಿತರ ಪ್ರತಿರೋಧದ ಸಂಕೇತ: ರಾಹುಲ್ ಗಾಂಧಿ

ಈ ಹಿಂಸಾಚಾರದ ಕೆಲವು ವಿಡಿಯೋಗಳು ಟ್ವಿಟ್ಟರ್ ನಲ್ಲಿ ಹರಿದಾಡುತ್ತಿವೆ.

ರೈಲ್ ರುಖೋ

ಪ್ರತಿಭಟನಾಕಾರರು ರೈಲ್ ರುಖೋ ಚಳವಳಿ ನಡೆಸಿ, ಥಾಣೆ ರೈಲು ನಿಲ್ದಾಣದ ರೈಲುಗಳನ್ನು ತಡೆದಿದ್ದರು. ಸ್ಥಳೀಯ ರೈಲು ಸಂಚಾರ ಸದ್ಯಕ್ಕೆ ಪುನರಾರಂಭವಾಗಿದೆ ಎಂದು ರಶ್ಮಿ ರಜಪೂತ್ ಎಂಬುವವರು ವಿಡಿಯೋ ಸಮೇತ ಟ್ವೀಟ್ ಮಾಡಿದ್ದಾರೆ.

ಪೊಲೀಸ್ ಬಿಗಿಬಂದೋಬಸ್ತ್

ಜ.2 ರಂದು ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ಮುಂಬೈ, ಅದರಲ್ಲೂ ಮಧ್ಯ ಮುಂಬೈ ಭಾಗದಲ್ಲಿ ಎಲ್ಲೆಲ್ಲೂ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಬಿಗಿ ಬಂದೋಬಸ್ತ್ ನ ಮುಂಬೈ ವಿಡಿಯೋವೂ ಟ್ವಿಟ್ಟರ್ ನಲ್ಲಿದೆ.

ರೈಲಿನ ಮುಂಬದಿಗೆ ಜೋತುಬಿದ್ದ ಪ್ರತಿಭಟನಕಾರರು

ಗೊರೆಗಾಂವ್ ಬಳಿ ತೆರಳುತ್ತಿದ್ದ ರೈಲನ್ನು ತಡೆದು ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದರು. ರೈಲಿನ ಎದುರಲ್ಲಿ ಜೋತುಬಿದ್ದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಸಂಚಾರಕ್ಕಾಗಿ ರೈಲಿನ ಮೇಲೆ ಅವಲಂಬಿತವಾಗಿದ್ದವರು ಪರಿತಪಿಸುವಂತಾಯಿತು.

ಶಾಂತ ರೀತಿಯಲ್ಲಿ ಯಾತ್ರೆ

ಚೆಂಬೂರಿನಲ್ಲಿ ಯಾತ್ರೆ ಶಾಂತ ರೀತಿಯಲ್ಲಿ ಸಾಗುತ್ತಿದ್ದು, ಯಾತ್ರೆ ಪೊಲೀಸರ ಕಣ್ಗಾವಲಿನಲ್ಲಿ ನಡೆಯುತ್ತಿರುವ ವಿಡಿಯೋವನ್ನು ಜಿತೇಂದ್ರ ಜೈನ್ ಎಂಬುವವರು ಹಂಚಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bhima Koregaon violence: Dalit actvists called Maharashtra bandh on Jan 3rd. Strict security implemented all over Maharashtra. Here are couple of videos and photos on twitter related to Maharasthra bandh.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ