ಮಹಾಕಾಳಿ ಸೀರಿಯಲ್ ನಟರ ದುರ್ಮರಣಕ್ಕೆ ಕಂಬನಿ

Posted By:
Subscribe to Oneindia Kannada

ಮುಂಬೈ, ಆಗಸ್ಟ್ 20: ಕಲರ್ಸ್ ವಾಹಿನಿಯ ಪೌರಾಣಿಕ ಧಾರಾವಾಹಿ 'ಮಹಾಕಾಳಿ -ಅಂತ್ ಹೈ ಆರಂಭ್ ಹೈ' ಯಲ್ಲಿ ನಟಿಸುತ್ತಿದ್ದ ಗಗನ್ ಕಾಂಗ್ ಮತ್ತು ಅರ್ಜಿತ್ ಲವಾನಿಯಾ ಹಾಗೂ ಸ್ಪಾಟ್ ಬಾಯ್ ಯೊಬ್ಬ ದುರಂತ ಸಾವನ್ನಪ್ಪಿರುವುದಕ್ಕೆ ಟ್ವಿಟ್ಟರಲ್ಲಿ ಸಂತಾಪ ಸಂದೇಶಗಳು ಹರಿದು ಬಂದಿವೆ.

ಉಂಬರ್ ಗಾಂವ್ ಸ್ಟುಡಿಯೋದಲ್ಲಿ ಚಿತ್ರೀಕರಣ ಮುಗಿಸಿಕೊಂಡು, ಮುಂಬೈ - ಅಹಮದಾಬಾದ್ ಹೈವೇಯಲ್ಲಿ ಗೋರೆಗಾಂವ್ ನಲ್ಲಿರುವ ಮನೆಗೆ ತೆರಳುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದ ಕಾರ್, ನಿಂತಿದ್ದ ಸ್ಟೇಷನರಿ ಟ್ರೈಲರ್ ಗೆ ಡಿಕ್ಕಿ ಹೊಡೆದಿತ್ತು. ಕಾರು ಅಪಘಾತದಲ್ಲಿ ಈ ಮೂವರು ಶನಿವಾರದಂದು ಸಾವನ್ನಪ್ಪಿದ್ದರು.

Twitter reaction Mahakali actors Gagan Kang and Arjit Lavania death

ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜು ಗುಜ್ಜಾಗಿದೆ. ಕಾರಿನಲ್ಲಿದ್ದ ಗಗನ್ ಕಾಂಗ್, ಅರ್ಜಿತ್ ಲವಾನಿಯಾ ಹಾಗೂ ಸ್ಪಾಟ್ ಬಾಯ್ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆಯಿತು.

'ಮಹಾಕಾಳಿ' ಧಾರಾವಾಹಿಯಲ್ಲಿ ಗಗನ್ ಇಂದ್ರನ ಪಾತ್ರದಲ್ಲಿ, ಅರ್ಜಿತ್ ನಂದಿ ಪಾತ್ರದಲ್ಲಿ ನಟಿಸುತ್ತಿದ್ದರು.

ಗಗನ್ ಕಾಂಗ್ ಅವರು ಕಾರು ಚಾಲನೆ ಮಾಡುತ್ತಿದ್ದರು, ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣ, ಕಾರಿನಲ್ಲಿ ಮದ್ಯದ ಬಾಟಲಿಗಳು ಕಂಡು ಬಂದಿದ್ದು, ಮದ್ಯದ ನಶೆಯಲ್ಲಿ ವಾಹನ ಚಲಾಯಿಸಿರುವ ಶಂಕೆಯೂ ವ್ಯಕ್ತವಾಗಿದೆ.


ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Two television actors - Gagan Kang and Arjit Lavania - along with a spotboy, were killed in a road accident on Saturday. Here are the twitter reaction.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ