ನಟಿ ಪ್ರತ್ಯೂಷಾ ಸಾವಿನ ಪ್ರಕರಣಕ್ಕೆ ಹೊಸ ತಿರುವು!

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 04: ಹಿಂದಿ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಬಾಲಿಕಾ ವಧು' ಖ್ಯಾತಿಯ ಪ್ರತ್ಯೂಷಾ ಬ್ಯಾನರ್ಜಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. 24ವರ್ಷ ವಯಸ್ಸಿನ ನಟಿ ಪ್ರತ್ಯೂಷಾ ಅವರು ಗರ್ಭಿಣಿಯಾಗಿದ್ದರು ಎಂಬ ಅನುಮಾನ ಕಾಡುತ್ತಿದೆ.

ಬಾಲಿಕಾ ವಧು ಧಾರಾವಾಹಿಯ ಆನಂದಿ ಪಾತ್ರಧಾರಿ ಪ್ರತ್ಯೂಷಾಮುಂಬೈನ ಕಂಡಿವಿಲಿಯ ಬಂಗೂರ್ ನಗರ್ ನ ಫ್ಲಾಟ್ ನಲ್ಲಿ ನೇಣು ಬಿಗಿದುಕೊಂಡು ಶುಕ್ರವಾರ(ಏಪ್ರಿಲ್ 01) ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೂಷಾ ಅವರ ಗೆಳೆಯ ರಾಹುಲ್ ಸಿಂಗ್ ರನ್ನು ವಶಕ್ಕೆ ಪಡೆದು ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದರು.['ಬಾಲಿಕಾ ವಧು' ಪ್ರತ್ಯೂಷಾ ಆತ್ಮಹತ್ಯೆಗೆ ಏನು ಕಾರಣ?]

ಬಾಲಿಕಾ ವಧು ಧಾರಾವಾಹಿಯ ಆನಂದಿ ಪಾತ್ರದ ಮೂಲಕ ಮನೆ ಮಾತಾಗಿದ್ದ ಪ್ರತ್ಯೂಷಾ ಅವರು ಕೆಲಕಾಲದಿಂದ ಮಾನಸಿಕ ಖಿನ್ನತ ಅನುಭವಿಸುತ್ತಿದ್ದರು. ಇದಲ್ಲದೆ ಆಕೆಯ ತನ್ನ ಬಾಯ್ ಫ್ರೆಂಡ್ ರಾಹುಲ್ ರಾಜ್ ಸಿಂಗ್ ಜೊತೆ ಮನಸ್ತಾಪ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಜೊತೆಗೆ ಸದ್ಯಕ್ಕೆ ಲಭ್ಯವಿರುವ ವೈದ್ಯಕೀಯ ವರದಿಯ ಅನ್ವಯ ಆಕೆಯ ಗುಪ್ತಾಂಗದಲ್ಲಿ ಬಿಳಿದ್ರವ ಪತ್ತೆಯಾಗಿದ್ದು, ಆಕೆ ಸಾಯುವುದಕ್ಕೂ ಮುನ್ನ ಗರ್ಭಿಣಿಯಾಗಿದ್ದರೆ? ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ. ಬಾಲಿಕಾ ವಧು ದುರಂತ ಸಾವಿನ ಬಗ್ಗೆ ಸುದ್ದಿ ವಿಡಿಯೋಗಾಗಿ ಕ್ಲಿಕ್ ಮಾಡಿ

ಪ್ರತ್ಯೂಷಾ ಸಾವಿಗೆ ಇನ್ನೂ ಕಾರಣ ತಿಳಿದು ಬಂದಿಲ್ಲ

ಪ್ರತ್ಯೂಷಾ ಸಾವಿಗೆ ಇನ್ನೂ ಕಾರಣ ತಿಳಿದು ಬಂದಿಲ್ಲ

ಪ್ರತ್ಯೂಷಾ ಸಾವಿಗೆ ಇನ್ನೂ ಕಾರಣ ತಿಳಿದು ಬಂದಿಲ್ಲ. ಪ್ರೇಮ ವೈಫಲ್ಯವೇ ಕಾರಣ ಎಂದು ತಕ್ಷಣಕ್ಕೆ ಹೇಳಲಾಗದು, ಯಾವುದೇ ಸೂಸೈಡ್ ನೋಟ್ ಸಿಕ್ಕಿಲ್ಲ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಗುಪ್ತಾಂಗದಲ್ಲಿ ದ್ರವ ಪತ್ತೆಯಾಗಿರುವುದನ್ನು ಪೊಲೀಸ್ ಸರ್ಜನ್ ಡಾ ಎಸ್ ಎಂ ಪಾಟೀಲ್ ದೃಢಪಡಿಸಿದ್ದಾರೆ.

ಆಕೆ ಗರ್ಭಿಣಿಯಾಗಿದ್ದಳಾ? ಎಂಬುದು ಸದ್ಯದ ಪ್ರಶ್ನೆ

ಆಕೆ ಗರ್ಭಿಣಿಯಾಗಿದ್ದಳಾ? ಎಂಬುದು ಸದ್ಯದ ಪ್ರಶ್ನೆ

ಸದ್ಯಕ್ಕೆ ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲು histopathology ಪರೀಕ್ಷೆಗೆ ಕಳಿಸಲಾಗಿದೆ. ಈ ಮೂಲಕ ಆಕೆ ಗರ್ಭಿಣಿಯಾಗಿದ್ದಳಾ? ಅಥವಾ ಗುಪ್ತಾಂಗದಲ್ಲಿ ಸೋಂಕು ತಗುಲಿ ದ್ರವ ಸೋರಿಕೆಯಾಗಿದೆಯೆ? ಎಂಬುದು ಪತ್ತೆ ಹಚ್ಚಲಾಗುತ್ತದೆ ಎಂದು ಡಾ ಎಸ್ ಎಂ ಪಾಟೀಲ್ ಹೇಳಿದ್ದಾರೆ.

ಈ ಮುಂಚೆ ಕೂಡಾ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರತ್ಯೂಷಾ

ಈ ಮುಂಚೆ ಕೂಡಾ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರತ್ಯೂಷಾ

ಮಿಡ್ ಡೇ ವರದಿಯಂತೆ ಆಕೆ ಹಣೆ ಮೇಲೆ ಸಿಂಧೂರ ತಿಲಕ ಇತ್ತು. ಕುತ್ತಿಗೆಯ ಕೆಳಭಾಗದಲ್ಲಿ ರಾಹುಲ್ ಎಂದು ಹಚ್ಚೆ ಹಾಕಿಸಿಕೊಂಡಿದ್ದರು. ಎಡಗೈ ಮಣಿಕಟ್ಟಿನ ಬಳಿ ಚೂಪಾದ ಆಯುಧದಿಂದ ಗಾಯ ಮಾಡಿಕೊಂಡ ಗುರುತು ಪತ್ತೆಯಾಗಿದೆ. ಈ ಹಿಂದೆ ಕೂಡಾ ಆಕೆ ಆತ್ಮಹತ್ಯೆಗೆ ಯತ್ನಿಸಿರಬಹುದು ಎನ್ನಲಾಗಿದೆ.

ಜನಪ್ರಿಯ ನಟಿ ಪ್ರತ್ಯೂಷಾ

ಜನಪ್ರಿಯ ನಟಿ ಪ್ರತ್ಯೂಷಾ

ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸಸುರಾಲ್ ಸಿಮಾರ್ ಕಾ' ಧಾರಾವಾಹಿಯಲ್ಲಿ ನಟಿಸುತ್ತಿದ್ದ ಪ್ರತ್ಯೂಷಾ ತನ್ನ ಬಾಯ್ ಫ್ರೆಂಡ್ ರಾಹುಲ್ ಜೊತೆ ಮದುವೆಯಾಗುವುದಾಗಿ ಹೇಳಿಕೊಂಡಿದ್ದರು. ರಿಯಾಲಿಟಿ ಶೋ ಬಿಗ್ ಬಾಸ್ 7ರಲ್ಲೂ ಕೂಡಾ ಪ್ರತ್ಯೂಷಾ ಭಾಗಿಯಾಗಿದ್ದರು.

ಪೊಲೀಸ್ ವಿಚಾರಣೆ ಬಳಿಕ ಆಸ್ಪತ್ರೆಗೆ

ಪೊಲೀಸ್ ವಿಚಾರಣೆ ಬಳಿಕ ಆಸ್ಪತ್ರೆಗೆ

ರಾಹುಲ್ ಸಿಂಗ್ ಅವರು ಪೊಲೀಸ್ ವಿಚಾರಣೆ ಬಳಿಕ ಆಘಾತಕ್ಕೊಳಗಾಗಿ ಆಸ್ಪತ್ರೆ ಸೇರಿದ್ದಾರೆ. ಮುಂಬೈನ ಶ್ರೀಸಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತ್ಯೂಷಾ ಅವರ ವಾಟ್ಸಪ್, ಫೇಸ್ ಬುಕ್ ಚೆಕ್ ಮಾಡಲಾಗುತ್ತಿದೆ. ಗೆಳೆಯರು, ಕಿರುತೆರೆಯ ಗಣ್ಯರ ಹೇಳಿಕೆ ಪಡೆಯಲಾಗುತ್ತಿದೆ.

ಪ್ರತ್ಯೂಷಾ ಆತ್ಮಹತ್ಯೆ ಬಗ್ಗೆ ಸುದ್ದಿ ವಿಡಿಯೋ

ಬಾಲಿಕಾ ವಧು ಪ್ರತ್ಯೂಷಾ ಬ್ಯಾನರ್ಜಿ ದುರಂತ ಸಾವಿನ ಬಗ್ಗೆ ಸುದ್ದಿ ವಿಡಿಯೋ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A new twist has come into the death case of Pratyusha banerjee aka 'Anandi' of Balika Vadhu. A whitish thick fluid has been found in the uterus of the actress which indicates early stage of pregnancy.
Please Wait while comments are loading...