ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿವಿ9 ಸುದ್ದಿವಾಹಿನಿ ಸಿಬ್ಬಂದಿ ಸಾವು, ಕೊವಿಡ್ 19 ಶಂಕೆ

|
Google Oneindia Kannada News

ಮುಂಬೈ, ಮೇ 22: ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಸೋಂಕು ಎಗ್ಗಿಲ್ಲದಂತೆ ಹರಡುತ್ತಿದ್ದು, ಮಾಧ್ಯಮ ಲೋಕಕ್ಕೂ ಇದರ ಬಿಸಿ ತಟ್ಟಿದೆ. ಟಿವಿ9 ಮರಾಠಿ ಸುದ್ದಿ ವಾಹಿನಿಯ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದು, ಕೊವಿಡ್ 19 ಇರುವ ಶಂಕೆ ವ್ಯಕ್ತವಾಗಿದೆ. ಆದರೆ, ಮೃತ ಸಿಬ್ಬಂದಿಗೆ ಸೋಂಕು ತಗುಲಿರಲಿಲ್ಲ ಎಂದು ಸಂಸ್ಥೆ ಹೇಳಿದೆ.

Recommended Video

ತರಕಾರಿಯಿಂದಲು ಹಬ್ಬುತ್ತಿದೆ ಕೊರೋನಾ ಮಹಾಮಾರಿ!! ಎಚ್ಚರ!! | Oneindia Kannada

ನೋಯ್ಡಾ ಝೀ ಸುದ್ದಿ ವಾಹಿನಿಯ 29 ಮಂದಿ ಸಿಬ್ಬಂದಿಗೆ ಕೊವಿಡ್ 19 ಪಾಸಿಟಿವ್ ಇರುವ ಸುದ್ದಿ ಬಂದಿರುವ ಬೆನ್ನಲ್ಲೇ ಮುಂಬೈನಿಂದ ಈ ಸಾವಿನ ಸುದ್ದಿ ಬಂದಿದೆ. ಪ್ರಾದೇಶಿಕ ಸುದ್ದಿ ವಾಹಿನಿ ಟಿವಿ9ಯ ಐಟಿ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 44 ವರ್ಷ ವಯಸ್ಸಿನ ರೋಷನ್ ಡಯಾಸ್ ಎಂಬುವರು ಬುಧವಾರದಂದು ಮೃತರಾಗಿದ್ದಾರೆ. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಟಿವಿ9 ಕಚೇರಿಯ 11 ಮಂದಿ ಸಿಬ್ಬಂದಿಗೆ ಮೇ 2 ಹಾಗೂ 4 ರ ನಡುವೆ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿತ್ತು. ಮೊದಲಿಗೆ ಇಬ್ಬರು ಸಿಬ್ಬಂದಿಗೆ ಕಾಯಿಲೆಯ ಲಕ್ಷಣಗಳು ಕಾಣಿಸಿದ್ದರಿಂದ ಮಿಕ್ಕ 20ಕ್ಕೂ ಅಧಿಕ ಸಿಬ್ಬಂದಿಯನ್ನು ಲೋವರ್ ಪಾರೆಲ್ ನಲ್ಲಿರುವ ಕಚೇರಿಗೆ ಶಿಫ್ಟ್ ಮಾಡಲಾಯಿತು.

TV9 Marathi Staffer Dies, Coronavirus Suspected

ಆದರೆ, ಡೆಸ್ಕ್ ವರ್ಕ್ ನಲ್ಲಿದ್ದ ರೋಷನ್ ಸೇರಿದಂತೆ ಹಲವಾರು ಮಂದಿ ಕಚೇರಿಯಲ್ಲೇ ಅನಿವಾರ್ಯವಾಗಿ ಉಳಿದುಕೊಂಡು ಕ್ವಾರಂಟೈನ್ ನಲ್ಲಿದ್ದರು. ರೋಗ ಲಕ್ಷಣ ಕಾಣಿಸಿಕೊಂಡ ಇಬ್ಬರು ಸೇರಿದಂತೆ ಒಟ್ಟು 11 ಸಿಬ್ಬಂದಿಗೆ ಕೊವಿಡ್ 19 ಪಾಸಿಟಿವ್ ಎಂದು ದೃಢಪಟ್ಟಿತ್ತು.

ಮೇ 7ರಂದು ಬೃಹನ್ ಮುಂಬೈ ಮುನ್ಸಿಪಾಲ್ ಪಾಲಿಕೆ ವತಿಯಿಂದ ಮಾಧ್ಯಮ ಪ್ರತಿನಿಧಿಗಳಿಗೆ ಕೊವಿಡ್ 19 ಪರೀಕ್ಷೆ ನಡೆಸಲಾಯಿತು. ಆದರೆ, ಟಿವಿ9 ಮರಾಠಿಯ 9 asymptomatic ರೋಗ ಲಕ್ಷಣವಿಲ್ಲದ ಸಿಬ್ಬಂದಿಗಳಿಗೆ ಪರೀಕ್ಷೆಯಲ್ಲಿ ನೆಗಟಿವ್ ಬಂದಿತ್ತು. ರೋಷನ್ ಡಯಸ್ ಗೆ ಕೂಡಾ ಯಾವುದೇ ರೋಗ ಲಕ್ಷಣಗಳು ಕಂಡು ಬಂದಿರಲಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿದ ಟಿವಿ ಜರ್ನಲಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ವಿನೋದ್ ಜಗದಾಳೆ, ಟಿವಿ9 ಸಿಬ್ಬಂದಿ ಮೃತಪಟ್ಟಿರುವ ಸುದ್ದಿ ದುರಾದೃಷ್ಟಕರ, ಏಪ್ರಿಲ್ 3ನೇ ವಾರದಲ್ಲಿ ಮುಂಬೈನ 53 ಸಿಬ್ಬಂದಿಗೆ ಕೊರೊನಾವೈರಸ್ ಸೋಂಕು ಇರುವುದು ಪತ್ತೆಯಾದ ಬಳಿಕ ಎಲ್ಲರೊಂದಿಗೆ ಮಾತನಾಡಿದ್ದೆ. ನಂತರ ಎಲ್ಲಾ ಮಾಧ್ಯಮಗಳಲ್ಲೂ ಕಠಿಣ ಮಾರ್ಗಸೂಚಿ ಪಾಲಿಸಲು ಸೂಚಿಸಲಾಗಿತ್ತು.

ಆದರೆ, ರೋಷನ್ ವಿಷಯದಲ್ಲಿ ಯಾವ ರೀತಿ ಲೋಪ ಉಂಟಾಗಿದೆಯೋ ಸ್ಪಷ್ಟವಾಗಿಲ್ಲ. ಟಿವಿ9ನ ಸಿಬ್ಬಂದಿಗೆ ಸೋಂಕು ತಗುಲಿದ್ದರೂ ರೋಷನ್ ಗೆ ಸೋಂಕು ತಗುಲಿರಲಿಲ್ಲ ಎಂಬ ಮಾಹಿತಿಯಿದೆ. ಮಂಗಳವಾರದಂದು ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಅಸ್ವಸ್ಥಗೊಂಡ ರೋಷನ್ ಅಸ್ಪತ್ರೆ ಸೇರಿದ ಮರುದಿನವೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ ಎಂದಿದ್ದಾರೆ.

English summary
Roshan Dias(44) was an IT officer at the Mumbai offices of TV9 Marathi passed away on Wednesday.11 staff members of the same channel had tested positive for coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X