• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಂಬೈನ ಮನೆಯಲ್ಲಿ ಕಿರುತೆರೆ ನಟ ಆತ್ಮಹತ್ಯೆಗೆ ಶರಣು

|

ಮುಂಬೈ, ಡಿಸೆಂಬರ್ 27: ಹಿಂದಿ ಕಿರುತೆರೆಯ ಜನಪ್ರಿಯ ನಟ, ''ಇಷ್ಕ್ ಮೇ ಮರ್ಜಾವಾ'' ಧಾರಾವಾಹಿ ಖ್ಯಾತಿಯ ಕುಶಾಲ್ ಪಂಜಾಬಿ ತಮ್ಮ ಸ್ವಗೃಹದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

37 ವರ್ಷ ವಯಸ್ಸಿನ ಕುಶಾಲ್ ಆತ್ಮಹತ್ಯೆಯಿಂದ ಆಘಾತವಾಗಿದೆ ಎಂದು ಟಿವಿ ನಟ ಕರಣ್ವೀರ್ ಬೋಹ್ರಾ ಟ್ವಿಟ್ಟರ್ ನಲ್ಲಿ ದುಃಖ ತೋಡಿಕೊಂಡಿದ್ದಾರೆ.

"ನನಗೆ ಸ್ಫೂರ್ತಿ ನೀಡುತ್ತಿದ್ದ ನೀನು, ಜೀವನದ ಬಗ್ಗೆ ಹೆಚ್ಚು ಉತ್ಸಾಹವಿದ್ದ ನೀನು ಈ ರೀತಿ ಮಾಡಿಕೊಂಡಿದ್ದು ನಂಬಲಾಗುತ್ತಿಲ್ಲ. ಡ್ಯಾನ್ಸಿಂಗ್ ಡ್ಯಾಡಿ, ಫಿಟ್ ಎಂದು ಹ್ಯಾಶ್ ಟ್ಯಾಗ್ ಹಾಕಿ" ಕರಣ್ವೀರ್ ಟ್ವೀಟ್ ಮಾಡಿದ್ದಾರೆ.

ಹಿಂದಿ ಕಿರುತೆರೆಯ ಜನಪ್ರಿಯ ನಟ, ನಟಿಯರು ಕುಶಾಲ್ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಶ್ವೇತಾ ತಿವಾರಿ, ರವಿ ದುಬೇ, ವಿಕಾಸ್ ಕಲಾಂತ್ರಿ ಈ ಸುದ್ದಿ ನಂಬಲು ಸಾಧ್ಯವಿಲ್ಲ, ನಮಗೆಲ್ಲ ತೀವ್ರ ಆಘಾತವಾಗಿದೆ ಎಂದಿದ್ದಾರೆ. ಜೋರ್ ಕಾ ಜಟ್ಕಾ ರಿಯಾಲಿಟಿ ಶೋ ಗೆದ್ದ ಬಳಿಕ ಹಲವು ಟಿವಿ ಸರಣಿ, ಧಾರಾವಾಹಿಗಳಲ್ಲಿ ಕುಶಾಲ್ ಕಾಣಿಸಿಕೊಂಡಿದ್ದರು.

English summary
TV actor Kushal Punjabi, who was last seen in Ishq Mein Marjaawaan, has allegedly committed suicide at his Mumbai home on Friday. He was 37.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X