ಮಹಾರಾಷ್ಟ್ರದಲ್ಲಿ ಕೊರೊನಾ:ಆರೋಗ್ಯ ಸಚಿವರು ಹೇಳಿದ್ದಿಷ್ಟು?
ಮುಂಬೈ, ಮಾರ್ಚ್ 23: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 89ಕ್ಕೇರಿದೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಂದ್ರ ಟೋಪೆ ಮಾಹಿತಿ ನೀಡಿದ್ದಾರೆ. ಅದರಲ್ಲಿ 14 ಮಂದಿ ಮುಂಬೈನವರಾಗಿದ್ದು ಓರ್ವ ಪುಣೆಯ ವ್ಯಕ್ತಿಯೂ ಸೇರಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 418ಕ್ಕೆ ಏರಿಕೆಯಾಗಿದೆ. ವೈರಸ್ ಗಾಳಿಯಲ್ಲಿ ಉಳಿದುಕೊಳ್ಳಬಹುದು ಎಂದು ವರದಿಯೊಂದು ಹೇಳಿದೆ.
ದೆಹಲಿ, ರಾಜಸ್ಥಾನ, ಹರ್ಯಾಣ, ಮಹಾರಾಷ್ಟ್ರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಉತ್ತರಾಖಂಡ ಕೆಲವು ಭಾಗಗಳನ್ನು ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದೆ.

ವಿಶ್ವಾದ್ಯಂತ ಕೊರೋನಾ ಪ್ರಕರಣಗಳ ಸಂಖ್ಯೆ 3.4 ಲಕ್ಷಕ್ಕೆ ಏರಿದೆ. ಸಾವಿನ ಸಂಖ್ಯೆ 15 ಸಾವಿರ ಸಮೀಪಕ್ಕೆ ಹೋಗಿದೆ. ಚೀನಾದಲ್ಲಿ ಕೆಲ ಕಾಲ ಸಂಪೂರ್ಣ ಸ್ಥಗಿತಗೊಂಡಿದ್ದ ಹೊಸ ಕೊರೋನಾ ಪ್ರಕರಣಗಳು ಈಗ ಮರುಕಳಿಸಲು ಆರಂಭಿಸಿವೆ. ಅಲ್ಲಿ ದಿಗ್ಬಂಧನಗಳನ್ನ ತೆಗೆದ ಬಳಿಕ ಮತ್ತೆ ಸೋಂಕು ಹರಡತೊಡಗಿದೆ. ಇವತ್ತು 39 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಇಟಲಿಯಲ್ಲಿ ಸಾವಿನ ಸಂಖ್ಯೆ 5,476ಕ್ಕೆ ಬಂದಿದೆ.
ಅಮೆರಿಕದಲ್ಲಿ ಒಂದೇ ದಿನ 33 ಮಂದಿ ಸಾವನ್ನಪ್ಪಿದ್ದಾರೆ, 1 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ. ಆ ದೇಶದಲ್ಲಿ ಈಗ ಒಟ್ಟು ಕೊರೋನಾ ಪ್ರಕರಣಗಳ ಸಂಖ್ಯೆ 34 ಸಾವಿರ ದಾಟಿದೆ. ಸಾಕಷ್ಟು ಕಡೆ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದ್ದು, ತಪಾಸಣೆ ಮಾಡಿಸದೆ ರಾಜ್ಯದ ಒಳಗೆ ಬರುವಂತಿಲ್ಲ.












Click it and Unblock the Notifications