ಗೂಡ್ಸ್ ರೈಲಿಗೆ ಸಿಲುಕಿ ಒಂದೇ ಕುಟುಂಬದ ಮೂವರ ಸಾವು
ಮುಂಬೈ, ಡಿಸೆಂಬರ್ 19: ರೈಲ್ವೆ ಹಳಿ ದಾಟುವಾಗ ಗೂಡ್ಸ್ ರೈಲಿಗೆ ಸಿಲುಕಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಪಾಲ್ ಗಾರ್ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದೆ. ಶನಿವಾರ ಬೆಳಿಗ್ಗೆ ಮುಂಬೈಗೆ ತೆರಳುತ್ತಿದ್ದ ಗೂಡ್ಸ್ ರೈಲಿಗೆ ಸಿಲುಕಿ ನಲಸೋಪರ ಮೂಲದ ಮೂರು ಮಂದಿ ಸಾವನ್ನಪ್ಪಿದ್ದಾರೆ. ನಂದ ಜಂಗಮ್ (55), ಮಗಳು ಪರಿಮಳಾ (37), ಮಗ ಸೋಮನಾಥ್ ಎಂಬುವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 15 ವರ್ಷದ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ.

"ರಜೆಗೆಂದು ನನ್ನ ಕುಟುಂಬದವರು ತವರಿಗೆ ಹೋಗಲು ಬೆಳಿಗ್ಗೆಯೇ ಮನೆ ಬಿಟ್ಟಿದ್ದರು" ಎಂದು ನಂದಾ ಪತಿ ತಿಳಿಸಿದ್ದಾರೆ.
ಮಸಾಲಾ ಗ್ರೈಂಡಿಂಗ್ ಮಳಿಗೆ ಇಟ್ಟುಕೊಂಡಿರುವ ಈ ಕುಟುಂಬ ಈಚೆಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಹೀಗಾಗಿ ಆತ್ಮಹತ್ಯೆಯ ಶಂಕೆಯೂ ವ್ಯಕ್ತಗೊಂಡಿದ್ದು, ಎಲ್ಲಾ ಆಯಾಮದಿಂದ ತನಿಖೆ ಕೈಗೊಳ್ಳಲಾಗಿದೆ.
"ರೈಲಿಗೆ ಆಕಸ್ಮಿಕವಾಗಿ ಸಿಲುಕಿ ಸಾವನ್ನಪ್ಪಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಆದರೆ ಇನ್ನಷ್ಟು ತನಿಖೆ ನಂತರ ಪ್ರಕರಣದ ಬಹ್ಹೆ ಸ್ಪಷ್ಟತೆ ಸಿಗಲಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications