• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರೈಲು ಒಂದೂವರೆ ಗಂಟೆ ತಡವಾಗಿದ್ದಕ್ಕೆ 63,000 ರೂ ಪರಿಹಾರ ಪಾವತಿಸಲಿದೆ ಐಆರ್‌ಸಿಟಿಸಿ

|

ಮುಂಬೈ, ಜನವರಿ 23: ಅಹಮದಾಬಾದ್- ಮುಂಬೈ ತೇಜಸ್ ಎಕ್ಸ್‌ಪ್ರೆಸ್ ರೈಲು ನಿಗದಿತ ಸಮಯಕ್ಕೂ ಒಂದು ಗಂಟೆಗೂ ಹೆಚ್ಚು ತಡವಾಗಿ ಬಂದಿದ್ದ ಕಾರಣಕ್ಕಾಗಿ ಭಾರತೀಯ ರೈಲ್ವೆ ಕೆಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಸುಮಾರು 63,000 ರೂಪಾಯಿಗೂ ಹೆಚ್ಚು ದಂಡ ತೆರಬೇಕಾಗಿದೆ.

ಸುಮಾರು 630 ಪ್ರಯಾಣಿಕರಿಗೆ ತಲಾ 100 ರೂ. ಪರಿಹಾರ ನೀಡುವುದಾಗಿ ಐಆರ್‌ಸಿಟಿಸಿ ಬುಧವಾರ ತಿಳಿಸಿದೆ.

ಫೆ.19ಕ್ಕೆ ಶಿವರಾತ್ರಿ ನವ ಜೋತಿರ್ಲಿಂಗ ವಿಶೇಷ ಎಕ್ಸ್ ಪ್ರೆಸ್

ಐಆರ್‌ಸಿಟಿಸಿಯ ಎರಡನೆಯ ಖಾಸಗಿ ರೈಲು ಜ.19ರಂದು ತನ್ನ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಆದರೆ ಬುಧವಾರ ಮಧ್ಯಾಹ್ನ ಅಹಮದಾಬಾದ್‌ನಿಂದ ಮುಂಬೈಗೆ ಒಂದು ಗಂಟೆಗೂ ಹೆಚ್ಚು ತಡವಾಗಿ ತಲುಪಿತ್ತು. ಮುಂಬೈ ಕೇಂದ್ರ ನಿಲ್ದಾಣಕ್ಕೆ ಅದು ಸುಮಾರು 1.30 ಗಂಟೆಯಷ್ಟು ವಿಳಂಬವಾಗಿ ಮುಟ್ಟಿತ್ತು.

'ನಮ್ಮ ರೀಫಂಡ್ ನೀತಿಯಂತೆ ಪ್ರಯಾಣಿಕರು ಅದಕ್ಕಾಗಿ ಮನವಿ ಸಲ್ಲಿಸಬೇಕು. ಪರಿಶೀಲನೆಯ ಬಳಿಕ ಅವರಿಗೆ ಹಣವನ್ನು ಮರಳಿಸಲಾಗುವುದು' ಎಂದು ಐಆರ್‌ಸಿಟಿಸಿ ವಕ್ತಾರರು ತಿಳಿಸಿದ್ದಾರೆ.

ದುಬಾರಿ ವೆಚ್ಚದ ತೇಜಸ್ ಎಕ್ಸ್‌ಪ್ರೆಸ್ ಅಹಮದಾಬಾದ್‌ನಿಂದ ಬೆಳಿಗ್ಗೆ 6.42ಕ್ಕೆ ಹೊರಟಿತ್ತು. ನಿರ್ಗಮನದ ವೇಳೆ ಎರಡು ನಿಮಿಷ ಮಾತ್ರ ತಡವಾಗಿತ್ತು. ಆದರೆ ಮಧ್ಯಾಹ್ನ 1.10ರ ಬದಲಾಗಿ, 2.36 ಗಂಟೆಗೆ ಮುಂಬೈ ಕೇಂದ್ರ ನಿಲ್ದಾಣವನ್ನು ತಲುಪಿತ್ತು.

ಫೆಬ್ರವರಿಯಲ್ಲಿ ಬೆಳಗಾವಿ-ಪುಣೆ ರೈಲು ಸಂಚಾರ ಆರಂಭ

ಮುಂಬೈನ ಹೊರಭಾಗದಲ್ಲಿರುವ ಭಯಾಂದರ್ ಮತ್ತು ದಹಿಸಾರ್ ನಿಲ್ದಾಣಗಳ ನಡುವೆ ತಾಂತ್ರಿಕ ಸಮಸ್ಯೆಗಳಿಂದಾಗಿ ತೇಜಸ್ ಎಕ್ಸ್‌ಪ್ರೆಸ್ ಮತ್ತು ಇತರೆ ಕೆಲವು ಉಪನಗರ ರೈಲುಗಳು ಸ್ಥಗಿತಗೊಂಡಿದ್ದವು. ಹೀಗಾಗಿ ನಿಗದಿತ ವೇಳೆಗೆ ನಿಲ್ದಾಣ ತಲುಪುವುದು ಸಾಧ್ಯವಾಗಿರಲಿಲ್ಲ.

ಐಆರ್‌ಸಿಟಿಸಿ ನಿಯಮದ ಪ್ರಕಾರ ಒಂದು ಗಂಟೆಗೂ ಹೆಚ್ಚು ತಡವಾದರೆ ಪ್ರಯಾಣಿಕರಿಗೆ ತಲಾ 100 ರೂ, ಎರಡು ಗಂಟೆಗೂ ಹೆಚ್ಚು ತಡವಾದರೆ ತಲಾ 250 ರೂ ಪರಿಹಾರವಾಗಿ ನೀಡಬೇಕಾಗುತ್ತದೆ. ಹೀಗಾಗಿ ಪರಿಹಾರ ನೀಡುವಂತೆ ಮನವಿ ಸಲ್ಲಿಸುವ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಪರಿಹಾರ ನೀಡಬೇಕಿದ್ದು, ಸುಮಾರು 63,000 ರೂ. ಪಾವತಿ ಮಾಡಬೇಕಾಗಲಿದೆ.

ದೇಶದ ಮೊದಲ ಖಾಸಗಿ ರೈಲು ತೇಜಸ್‌ಗೆ ಮೊದಲ ತಿಂಗಳೇ ಲಾಭ

ಪ್ರಯಾಣಿಕರು 18002665844 ಸಂಖ್ಯೆಗೆ ಕರೆ ಮಾಡುವ ಮೂಲಕ ಅಥವಾ irctcclaims@libertyinsurance.in. ವಿಳಾಸಕ್ಕೆ ಇ-ಮೇಲ್ ಮಾಡುವ ಮೂಲಕ ಪರಿಹಾರವನ್ನು ಪಡೆದುಕೊಳ್ಳಬಹುದು.

English summary
IRCTC said it will pay Rs 100 as compensation to each around 630 passengers of the Ahmedabad-Mumbai Tejas Express dues to delay for over an hour
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X