ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುದುರೆಯಲ್ಲಿ ಸ್ವಿಗ್ಗಿಮ್ಯಾನ್ : ಯಾರಿವನ್ಯಾರಿವನ್ಯಾರಿವನೆಂದ ನೆಟ್ಟಿಗರಿಗೆ ಸಿಕ್ತು ಉತ್ತರ

|
Google Oneindia Kannada News

ಮುಂಬೈನಲ್ಲಿ ಮಳೆಗಾಲದಲ್ಲಿ ಸ್ವಿಗ್ಗಿ ಬ್ಯಾಗ್‌ನೊಂದಿಗೆ ಕುದುರೆ ಸವಾರಿ ಮಾಡುತ್ತಿದ್ದ ವ್ಯಕ್ತಿಯನ್ನು ಸ್ವಿಗ್ಗಿ ಕೊನೆಗೂ ಪತ್ತೆ ಮಾಡಿದೆ. ಭಾರೀ ಮಳೆಯ ಸಮಯದಲ್ಲಿ ಆಹಾರ ಪದಾರ್ಥಗಳನ್ನು ತಲುಪಿಸಲು ವಿಶಿಷ್ಟವಾದ ಮಾರ್ಗವನ್ನು ಕಂಡುಹಿಡಿದ ವ್ಯಕ್ತಿಯನ್ನು ಹುಡುಕಲು Swiggy ಸಾಮಾಜಿಕ ಮಾಧ್ಯಮದಲ್ಲಿ ಹುಡುಕಾಟವನ್ನು ಪ್ರಾರಂಭಿಸಿತ್ತು. ಸದ್ಯ ಆ ವ್ಯಕ್ತಿ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆ ವ್ಯಕ್ತಿ ಸ್ವಿಗ್ಗಿ ಬಾಯ್ ಅಲ್ಲ. ಆದರೆ 17 ವರ್ಷ ವಯಸ್ಸಿನ ಕುದುರೆ ಕೌಟೂರಿಯರ್ ಎಂದು ತಿಳಿದುಬಂದಿದೆ. ಈ ವ್ಯಕ್ತಿ ಕುದುರೆ ಸವಾರಿ ಮಾಡುವ ವೈರಲ್ ವಿಡಿಯೊವನ್ನು ಅವಿ ಎಂಬ ವ್ಯಕ್ತಿ ಚಿತ್ರೀಕರಿಸಿದ್ದಾರೆ.

ಸ್ವಿಗ್ಗಿ ಈ ಹಿಂದೆ "ಕುದುರೆ ಮೇಲೆ ಸ್ವಿಗ್ಗಿಮ್ಯಾನ್" ಅನ್ನು ಹುಡುಕಲು ಸಹಾಯ ಮಾಡುವವರಿಗೆ 5000 ರೂಪಾಯಿ ಬಹುಮಾನವನ್ನು ಘೋಷಣೆ ಮಾಡಿತ್ತು. ಇದೀಗ ಮನುಷ್ಯ ಮತ್ತು ಪ್ರಾಣಿ ಪತ್ತೆಯಾಗಿದ್ದು, ವಿಡಿಯೋ ಚಿತ್ರೀಕರಿಸಿದ ಜನರು ಈ ನಿಗೂಢ ಮನುಷ್ಯನ ಬಗ್ಗೆ ಸ್ವಿಗ್ಗಿಗೆ ಮಾಹಿತಿ ನೀಡಿದ್ದಾರೆ. ಸ್ವಿಗ್ಗಿ ವ್ಯಕ್ತಿಯನ್ನು "17 ವರ್ಷ" ಎಂದು ಗುರುತಿಸಲಾಗಿದೆ. ಆದರೆ ಸ್ವಗ್ಗಿ ಫುಡ್ ಡೆಲಿವರಿ ಬಾಯ್ ಅಲ್ಲ. ಬದಲಿಗೆ ಈತ ಬ್ಯಾಗ್ ಅನ್ನು ಎರವಲು ಪಡೆದಿದ್ದಾನೆಂದು ತಿಳಿದು ಬಂದಿದೆ ಎಂದು ಸ್ವಿಗ್ಗಿ ಹೇಳುತ್ತದೆ.

ಯಾರಿವನ್ಯಾರಿವನ್ಯಾರಿವನೆಂದ ಸ್ವಿಗ್ಗಿ

ಯಾರಿವನ್ಯಾರಿವನ್ಯಾರಿವನೆಂದ ಸ್ವಿಗ್ಗಿ

ಸಾಮಾಜಿಕ ಮಾಧ್ಯಮದಲ್ಲಿ ಅತ್ಯಂತ ಜನಪ್ರಿಯತೆಯನ್ನು ಗಳಿಸಿದ 17 ವರ್ಷದ ಸುಶಾಂತ್ ಮುಂಬೈನಲ್ಲಿ ಸ್ಟೇಬಲ್‌ಗೆ ಸಹಾಯ ಮಾಡುತ್ತಾನೆ. ಅಲ್ಲಿ ಅವನು ಕೌಟೂರಿಯರ್. ಮದುವೆಯ ಮೆರವಣಿಗೆಗಳಿಗೆ ಕುದುರೆಗಳನ್ನು ಧರಿಸುವ ಆರೈಕೆಯನ್ನು ಮಾಡುವ ವ್ಯಕ್ತಿ. ವಿಡಿಯೋದಲ್ಲಿ ಅವರೊಂದಿಗೆ ಸ್ವಿಗ್ಗಿ ಬ್ಯಾಗ್‌ನೊಂದಿಗೆ ಕಸೂತಿ ಮಾಡಿದ ಡ್ರೆಪ್, ಮದುವೆಯ ಮೆರವಣಿಗೆಗಳಿಗೆ ಕುದುರೆಗಳ ಮೇಲೆ ಹಾಕುವ ಪರಿಕರಗಳು ಇರುವುದು ಕಂಡುಬಂದಿದೆ. ಸ್ವಿಗ್ಗಿ ಅವರು ಟ್ವಿಟ್ಟರ್ ಪೋಸ್ಟ್‌ನಲ್ಲಿ ಆ ವ್ಯಕ್ತಿ ಕೆಲಸ ಮಾಡುವ ಸ್ಥಳ ಹತ್ತಿರದಲ್ಲಿದೆ ಎಂದು ಗಮನಿಸಿದ್ದಾರೆ. ವಿಡಿಯೋ ಚಿತ್ರೀಕರಣದ ವೇಳೆ ಆತ ಮದುವೆಯಿಂದ ಹಿಂತಿರುಗುತ್ತಿದ್ದನು ಎಂದು ತಿಳಿದು ಬಂದಿದೆ. "ಸ್ವಿಗ್ಗಿಮ್ಯಾನ್ ಆನ್ ಹಾರ್ಸ್" ನ ವಿಡಿಯೊವನ್ನು ಅವಿ ಎಂಬ ಯುವಕ ಚಿತ್ರೀಕರಿಸಿದ್ದಾನೆ.

ಸದ್ಯ ಸ್ವಿಗ್ಗಿ ಬಹುಮಾನ ಘೋಷಣೆ ಮಾಡಿದ್ದಂತೆ ಅವಿ ಅವರಿಗೆ 5000 ರೂಪಾಯಿ ಬಹುಮಾನ ನೀಡಿದೆ. ಅಷ್ಟಕ್ಕೂ ಸ್ವಿಗ್ಗಿ ಬಹುಮಾನ ಘೋಷಣೆ ಮಾಡಿದಾಗ ಅವಿ ಅವರ ಫೋನ್ ಹಾಳಾಗಿತ್ತು. ಹೀಗಾಗಿ ಸ್ವಿಗ್ಗಿ ಬಾಯ್ ಅನ್ನು ಪತ್ತೆ ಹಚ್ಚಲು ತಡವಾಗಿದೆ. ಅವಿ ಸೆಲ್ ಪೋಸ ಸರಿ ಹೋದ ಬಳಿಕ ಈ ವ್ಯಕ್ತಿ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಸ್ವಿಗ್ಗಿ 5000 ರೂಪಾಯಿ ಬಹುಮಾನ

ಸ್ವಿಗ್ಗಿ 5000 ರೂಪಾಯಿ ಬಹುಮಾನ

ವಿಡಿಯೋ ವೈರಲ್ ಆದ ಬಳಿಕ ಕುದುರೆಯೊಂದಿಗೆ ಡೆಲಿವರಿ ಬಾಯ್‌ಗಾಗಿ ಸ್ವಿಗ್ಗಿ 'ಹಾರ್ಸ್ ಹಂಟ್' ಅನ್ನು ಪ್ರಾರಂಭಿಸಿತ್ತು. 'ಆಕಸ್ಮಿಕ ಬ್ರಾಂಡ್ ಅಂಬಾಸಿಡರ್' ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನವನ್ನು ಘೋಷಿಸಲಾಗಿತ್ತು. ಈ ಕುದುರೆಯ ಬಗ್ಗೆ ಯಾರು ಮಾಹಿತಿ ನೀಡುತ್ತಾರೋ ಅವರಿಗೆ 5000 ರೂಪಾಯಿ ಸ್ವಿಗ್ಗಿ ಹಣ ನೀಡಲಾಗುವುದು ಎಂದು ಸ್ವಿಗ್ಗಿ ತಿಳಿಸಿದೆ.

ಭಾರಿ ಮಳೆಯಲ್ಲಿ ಕುದುರೆ ಸವಾರಿ

ಭಾರಿ ಮಳೆಯಲ್ಲಿ ಕುದುರೆ ಸವಾರಿ

ಕಳೆದ ವಾರ, ಭಾರಿ ಮಳೆಯ ನಡುವೆ ಕುದುರೆಯ ಮೇಲೆ ವ್ಯಕ್ತಿಯೊಬ್ಬರು ಆಹಾರ ವಿತರಣಾ ಕಂಪನಿ ಸ್ವಿಗ್ಗಿ ಬ್ಯಾಗ್‌ ಅನ್ನು ಹೊತ್ತುಕೊಂಡು ಹೋಗುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಇದ್ದಕ್ಕಿದ್ದಂತೆ ವೈರಲ್ ಆಗಿತ್ತು. ವೀಡಿಯೊದಲ್ಲಿ, ಸ್ವಿಗ್ಗಿಯ ಡೆಲಿವರಿ ಬ್ಯಾಗ್ ಅನ್ನು ಹೊತ್ತುಕೊಂಡು ಕುದುರೆಯ ಮೇಲೆ ಭಾರಿ ಮಳೆಯಲ್ಲಿ ಜನನಿಬಿಡ ರಸ್ತೆಯನ್ನು ದಾಟುತ್ತಿರುವುದು ಕಂಡುಬಂದಿತ್ತು. ವಿಡಿಯೋ ಮುಂಬೈನದ್ದು ಎಂದು ಹೇಳಲಾಗಿತ್ತಾದರೂ ಈ ವ್ಯಕ್ತಿ ಯಾರು ಎಂಬುದು ತಿಳಿದುಬಂದಿರಲಿಲ್ಲ.

50 ಕಿಮೀಗೆ 3000 ರೂ. ಶುಲ್ಕ

50 ಕಿಮೀಗೆ 3000 ರೂ. ಶುಲ್ಕ

ಇಂತಹ ವಿಚಿತ್ರ ಸಂಗತಿಗಳಿಗೆ ಮುಂಬೈ ಸಾಕ್ಷಿಯಾಗುತ್ತಿರುವುದು ಇದೇ ಮೊದಲೇನಲ್ಲ. ಇತ್ತೀಚೆಗೆ, ವ್ಯಕ್ತಿಯೊಬ್ಬರು 50 ಕಿಮೀ ರೈಡ್‌ಗೆ 3000 ರೂಪಾಯಿ ಶುಲ್ಕ ವಿಧಿಸುವ ಉಬರ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದರು. ಶ್ರವಣ್ ಕುಮಾರ್ ಎಂಬ ಬಳಕೆದಾರರು 50 ಕಿಲೋಮೀಟರ್‌ಗೆ ಉಬರ್ ವಿಧಿಸುತ್ತಿರುವ ಮೊತ್ತವು ಮುಂಬೈನಿಂದ ಗೋವಾ ವಿಮಾನದ ದರಕ್ಕಿಂತ ಹೆಚ್ಚು ಎಂದು ಬರೆದಿದ್ದಾರೆ. "ನನ್ನ ಮನೆಯ ಪ್ರಯಾಣಕ್ಕಿಂತ ಗೋವಾಕ್ಕೆ ವಿಮಾನವು ಅಗ್ಗವಾಗಿದೆ" ಎಂದು ಅವರು ಬರೆದಿದ್ದರು.

Recommended Video

ದೇವೇಗೌಡರ ಮನೆಯ ತುಳಸಿ ಕಟ್ಟೆಗೆ ನಮಸ್ಕರಿಸಿದ ದ್ರೌಪದಿ ಮುರ್ಮು | *Politics | OneIndia Kannda

English summary
A few days ago a video of Swiggy's delivery boy riding a horse went viral and the boy was found.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X