ಸುಶಾಂತ್ ಕೇಸ್, ಸಿಬಿಐಗೆ ಕೊಡಲ್ಲ ಎಂದ ಮಹಾ ಸರ್ಕಾರ!
ಮುಂಬೈ, ಜುಲೈ 17: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಬಲವಾದ ಒತ್ತಡ ಕೇಳಿ ಬಂದಿದೆ. ಆದರೆ, ಮಹಾರಾಷ್ಟ್ರ ಸರ್ಕಾರ ಮಾತ್ರ ಈ ಪ್ರಕರಣವನ್ನು ಮಹಾರಾಷ್ಟ್ರ ಪೊಲೀಸರೇ ತನಿಖೆ ನಡೆಸಲಿದ್ದಾರೆ ಎಂದಿದೆ.
Recommended Video
ಬಾಂದ್ರಾ ಪೊಲೀಸರು ''ಇದೊಂದು ಅಸಹಜ ಸಾವು, ಆತ್ಮಹತ್ಯೆ ಪ್ರಕರಣ'' ಎಂದು ಷರಾ ಹಾಕಿದ್ದಾರೆ. ಸೋಮವಾರದಂದು ಮರಣೋತ್ತರ ಪರೀಕ್ಷೆಯನ್ನು ನೀಡಲಾಗಿದೆ. ಆದರೆ, ಬಿಹಾರದಲ್ಲಿ ಮಾತ್ರ ಇದು ಆತ್ಮಹತ್ಯೆಯಲ್ಲ ಕೊಲೆ, ಇದರ ಹಿಂದೆ ಭಾರಿ ಷಡ್ಯಂತ್ರವಿದೆ ಎಂಬ ಕೂಗೆದ್ದಿದೆ. ಸಾಮಾಜಿಕ ಜಾಲ ತಾಣ, ಸೆಲೆಬ್ರಿಟಿಗಳು, ರಾಜಕಾರಣಿಗಳು ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ.
ಜನ ಅಧಿಕಾರ ಪಾರ್ಟಿ ಮುಖ್ಯಸ್ಥ ಪಪ್ಪು ಯಾದವ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದು ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮನವಿ ಮಾಡಿದ್ದರು. ಅಮಿತ್ ಶಾ ಅವರು ಈ ಕುರಿತಂತೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂಬ ವರದಿ ಬಂದಿದೆ. ಆದರೆ, ಈ ನಡುವೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಮಾತ್ರ ಸಿಬಿಐಗೆ ವಹಿಸಲು ಮನಸ್ಸು ಮಾಡಿಲ್ಲ.
ಅನಿಲ್ ದೇಶ್ ಮುಖ್ ಹೇಳಿಕೆ:
ಮಿಡ್ ಡೇ ಪತ್ರಿಕೆ ಜೊತೆ ಮಾತನಾಡಿದ ಅನಿಲ್ ದೇಶ್ ಮುಖ್, ಮುಂಬೈ ಪೊಲೀಸರು ಈ ಪ್ರಕರಣದ ತನಿಖೆ ಸರಿಯಾಗಿ ನಡೆಸುತ್ತಿದ್ದಾರೆ. ಹೀಗಾಗಿ, ಸಿಬಿಐ ತನಿಖೆಗಾಗಿ ಬಂದಿರುವ ಮನವಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಟ್ವೀಟ್ ಅಭಿಯಾನವನ್ನು ನೋಡಿದ್ದೇನೆ, ಎಲ್ಲಾ ಆಯಾಮದಿಂದ ತನಿಖೆ ನಡೆಸಲಾಗುತ್ತಿದೆ. ವೃತ್ತಿ ವೈಷಮ್ಯದ ಆಯಾಮದಿಂದಲೂ ಹಲವಾರು ಸಿನಿಮಾರಂಗದ ಸೆಲೆಬ್ರಿಟಿಗಳನ್ನು ಪ್ರಶ್ನಿಸಲಾಗಿದೆ. ಯಾವುದೇ ರೀತಿ ಸಂಚು, ಪ್ರಚೋದನೆ ಕಂಡು ಬಂದಿಲ್ಲ, ತನಿಖೆಯ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದಿದ್ದಾರೆ.

ಅನಿಲ್ ದೇಶ್ ಮುಖ್ ಹೇಳಿಕೆ
ಮಿಡ್ ಡೇ ಪತ್ರಿಕೆ ಜೊತೆ ಮಾತನಾಡಿದ ಅನಿಲ್ ದೇಶ್ ಮುಖ್, ಮುಂಬೈ ಪೊಲೀಸರು ಈ ಪ್ರಕರಣದ ತನಿಖೆ ಸರಿಯಾಗಿ ನಡೆಸುತ್ತಿದ್ದಾರೆ. ಹೀಗಾಗಿ, ಸಿಬಿಐ ತನಿಖೆಗಾಗಿ ಬಂದಿರುವ ಮನವಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಟ್ವೀಟ್ ಅಭಿಯಾನವನ್ನು ನೋಡಿದ್ದೇನೆ, ಎಲ್ಲಾ ಆಯಾಮದಿಂದ ತನಿಖೆ ನಡೆಸಲಾಗುತ್ತಿದೆ. ವೃತ್ತಿ ವೈಷಮ್ಯದ ಆಯಾಮದಿಂದಲೂ ಹಲವಾರು ಸಿನಿಮಾರಂಗದ ಸೆಲೆಬ್ರಿಟಿಗಳನ್ನು ಪ್ರಶ್ನಿಸಲಾಗಿದೆ. ಯಾವುದೇ ರೀತಿ ಸಂಚು, ಪ್ರಚೋದನೆ ಕಂಡು ಬಂದಿಲ್ಲ, ತನಿಖೆಯ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದಿದ್ದಾರೆ.

35ಕ್ಕೂ ಅಧಿಕ ಜನರ ಹೇಳಿಕೆ ದಾಖಲು
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್ ಸ್ನೇಹಿತರು, ಕುಟುಂಬ ಸದಸ್ಯರು, ಸಿನಿಮಾ ಕ್ಷೇತ್ರದ ಹಲವಾರು ಮಂದಿ ಹೇಳಿಕೆ ಪಡೆದುಕೊಳ್ಳಲಾಗಿದೆ. ಗುರುವಾರ(ಜುಲೈ 16)ದಂದು ಹಿಂದೂಜಾ ಆಸ್ಪತ್ರೆಯ ಹಿರಿಯ ಸೈಕಿಯಾಟ್ರಿಸ್ಟ್ ಅವರ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ. ಸುಶಾಂತ್ ಸಿಂಗ್ ಅವರು ಇದೇ ಮನೋರೋಗ ತಜ್ಞರ ಬಳಿಗೆ ಸಲಹೆ ಪಡೆದುಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.
ಇದಕ್ಕೂ ಮುನ್ನ ಸಂಜಯ್ ಲೀಲಾ ಬನ್ಸಾಲಿ, ಯಶ್ ರಾಜ್ ಫಿಲಂಸ್‌ನ ಕಾಸ್ಟಿಂಗ್ ನಿರ್ದೇಶಕರು ವಿಚಾರಣೆಗೆ ಒಳಗಾಗಿದ್ದರು. ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಹೆಸರು ಸಹ ಈ ಪ್ರಕರಣದಲ್ಲಿ ಚರ್ಚೆಯಾಗಿತ್ತು. ಆದರೆ, ಸಲ್ಮಾನ್ ಹೇಳಿಕೆ ಪಡೆದುಕೊಂಡಿಲ್ಲ.

ಬಾಂದ್ರಾ ಪೊಲೀಸರ ಹೇಳಿಕೆ
ಸುಶಾಂತ್ ಅವರು ತಮ್ಮ ರೂಮಿನಲ್ಲಿ ಭಾನುವಾರ ಬೆಳಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ನಡೆದಾಗ ಅವರ ಕೆಲವು ಸ್ನೇಹಿತರು ಮನೆಯ ಇನ್ನೊಂದು ಭಾಗದಲ್ಲಿದ್ದರು. ಕಳೆದ 6 ತಿಂಗಳಿನಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಹೀಗಾಗಿ, ಸ್ನೇಹಿತರು ಸದಾಕಾಲ ಜೊತೆಯಲ್ಲಿದ್ದು ಸಾಂತ್ವನ ಹೇಳುತ್ತಿದ್ದರು ಎಂದು ತಿಳಿದು ಬಂದಿದೆ. ಸದ್ಯಕ್ಕೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ಘಟನಾ ಸ್ಥಳದಲ್ಲಿ ಸೂಸೈಡ್ ನೋಟ್ ಇಲ್ಲ, ಸುಶಾಂತ್ ಮೊಬೈಲ್ ಫೋನ್ ಮೆಸೇಜ್ ಪರಿಶೀಲಿಸಲಾಗುತ್ತಿದೆ. ಮರಣೋತ್ತರ ಪರೀಕ್ಷೆ ಬಳಿಕವೂ ಬೇರೆಯವರ ಕೈವಾಡದ ಗುರುತು ಪತ್ತೆಯಾಗಿಲ್ಲ ಎಂದು ಬಾಂದ್ರಾ ಪೊಲೀಸರು ಹೇಳಿದ್ದಾರೆ.
''ಮರಣೋತ್ತರ ಪರೀಕ್ಷೆಯಲ್ಲೂ ನೇಣುಬಿಗಿದುಕೊಂಡು ಉಸಿರುಗಟ್ಟಿದ್ದರಿಂದ ಸಾವು ಸಂಭವಿಸಿದೆ ಎಂದು ವರದಿ ಬಂದಿದೆ. ಪ್ರಾಥಮಿಕ ತನಿಖೆಯಲ್ಲೂ ಯಾವುದೇ ಇತರೆ ಕಾರಣ, ಅನುಮಾನ ವ್ಯಕ್ತವಾಗಿಲ್ಲ, ಸೂಸೈಡ್ ನೋಟ್ ಕೂಡಾ ಸಿಕ್ಕಿಲ್ಲ'' ಎಂದು ಮುಂಬೈ ಎಸಿಪಿ ಡಾ. ಮನೋಜ್ ಶರ್ಮ ಪ್ರತಿಕ್ರಿಯಿಸಿದ್ದಾರೆ.

ನಿಗೂಢವಾಗಿ ಉಳಿದಿರುವ ಆತ್ಮಹತ್ಯೆ ಕಾರಣ
ಶ್ರದ್ಧಾಕಪೂರ್ ಜೊತೆ ಛಿಛೋರೆ ಚಿತ್ರದಲ್ಲಿ ಕೊನೆಯ ಬಾರಿಗೆ ನಟಿಸಿದ್ದ ಸುಶಾಂತ್ ಅವರು ಕಳೆದ ಒಂದು ವರ್ಷದಿಂದ ಮಾಧ್ಯಮಗಳಿಂದ ದೂರವೇ ಉಳಿದಿದ್ದರು. ಸಹನಟಿ ಅಂಕಿತಾ ಲೋಕೊಂಡೆ ಜೊತೆ ಸಹಜೀವನ ನಡೆಸಿದ್ದ ಸುಶಾಂತ್ 2016ರಲ್ಲಿ ಈ ಬಂಧನ ಕಡೆದುಕೊಂಡಿದ್ದರು. ಇತ್ತೀಚೆಗೆ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯನ್ ಮೃತಪಟ್ಟಿದ್ದರು. ಈ ಬಗ್ಗೆ ತೀವ್ರವಾಗಿ ನೊಂದುಕೊಂಡಿದ್ದರು ಆಪ್ತರು ಹೇಳಿದ್ದಾರೆ.
ಜೂನ್14ರಂದು ಮುಂಬೈನ ಬಾಂದ್ರಾದ ಮಾಂಟ್ ಬ್ಲಾಂಕ್ ಅಪಾರ್ಟ್ಮೆಂಟ್ ನಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡು ಮೃತಪಟ್ಟ ಸುಶಾಂತ್ ಗೆ ಆರ್ಥಿಕ ಸಂಕಷ್ಟ ಎದುರಾಗಿತ್ತು ಎಂಬ ಸಂಶಯ ಬಂದಿತ್ತಾದರೂ, ಯಾವುದೇ ಆರ್ಥಿಕ ಸಮಸ್ಯೆ ಇರಲಿಲ್ಲ ಎಂದು ಕುಟುಂಬಸ್ಥರು ಸ್ಪಷ್ಟಪಡಿಸಿದ್ದಾರೆ. ಮಾನಸಿಕ ಒತ್ತಡದಿಂದಲೇ ಸುಶಾಂತ್ ಮೃತರಾಗಿರಬಹುದು ಎಂದು ಸದ್ಯಕ್ಕೆ ನಿರ್ಣಯಕ್ಕೆ ಬರಲಾಗಿದೆ.












Click it and Unblock the Notifications