ಮೌನ ಮುರಿದು, ಮೋದಿ ಸರ್ಕಾರವನ್ನು ಟೀಕಿಸಿದ ಸೋನಿಯಾ ಗಾಂಧಿ

ನವದೆಹಲಿ, ಮಾರ್ಚ್ 09: "ದೇಶದಲ್ಲಿ ಮತ್ತೆ ಅಸಹಿಷ್ಣುತೆ ಆರಂಭವಾಗಿದೆ. ಜನರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ಕೋಮು ಭಾವನೆಗಳನ್ನು ಕೆರಳಿಸುವ ಯತ್ನ ನಡೆಯುತ್ತಿದೆ. ಇದು ಆತಂಕಕಾರಿ" ಎಂದು ಕಾಂಗ್ರೆಸ್ ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದರು.

ಹಲವು ದಿನಗಳಿಂದ ಮೌನವಾಗಿದ್ದ ಸೋನಿಯಾ ಗಾಂಧಿ ಇಂದು(ಮಾ.09) ಮೋದಿ ಸರ್ಕಾರದ ಬಗೆಗಿನ ತಮ್ಮ ಅಸಮಾಧಾನವನ್ನು ಹೊರಹಾಕಿದರು.

ಮುಂಬೈಯಲ್ಲಿ ನಡೆದ ಇಂಡಿಯಾ ಕಾಂಕ್ಲೇವ್ 2018 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಸಂಸತ್ತಿನಲ್ಲಿ ನಮ್ಮ ಧ್ವನಿಯನ್ನು ಬೇಕೆಂದೇ ಹತ್ತಿಕ್ಕುತ್ತಿದೆ. ಸಂಸತ್ತು ಪರಸ್ಪರ ಅಭಿಪ್ರಾಯ, ಸಲಹೆಗಳನ್ನು ವಿನಿಮಯ ಮಾಡಿಕೊಳ್ಳುವ ಕೇಂದ್ರವಾಗಿದ್ದರೂ, ಅಲ್ಲಿ ವಿರೋಧಪಕ್ಷದ ಅಭಿಪ್ರಾಯಗಳಿಗೆ ಬೆಲೆ ನೀಡುತ್ತಿಲ್ಲ' ಎಂದು ಅವರು ಹೇಳಿದರು.

Sonia Gandhi corners Centre, says 'India embracing regressive vision'

ಬಿಜೆಪಿ ಕಾಂಗ್ರೆಸ್ ಅನ್ನು ಮುಸ್ಲಿಂ ಪಕ್ಷ ಎಂಬಂತೆ ನೋಡುತ್ತಿದೆ. ಆದರೆ ನಾವು ಸದಾ ದೇವಾಲಯಕ್ಕೆ ಹೋಗುತ್ತೇವೆ. ರಾಜೀವ್ ಗಾಂಧಿಯವರೊಂದಿಗೆ ನಾನು ತೆರಳುತ್ತಿದ್ದ ಜಾಗಗಳಲ್ಲೆಲ್ಲ ಪ್ರಸಿದ್ಧ ದೇವಾಲಯಗಳಿರುತ್ತಿದ್ದವು. ನಾನು ತಪ್ಪದೇ ಅಲ್ಲಿ ಗೆ ಹೋಗುತ್ತಿದ್ದೆ. ಆದರೆ ನಾವು ಅದನ್ನು ಸಾರ್ವಜನಿಕವಾಗಿ ಹೇಳಿಕೊಳ್ಳುತ್ತಿರಲಿಲ್ಲ ಅಷ್ಟೇ' ಎಂದು ಅವರು ಹೇಳಿದರು.

ನಾವು 2019 ರಲ್ಲಿ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇವೆ. ಎನ್ ಡಿಎ ಸರ್ಕಾರಕ್ಕೆ ಮತ್ತೆ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು. ಸಂವಿಧಾನದಲ್ಲಿ ತಿದ್ದುಪಡಿ ಮಾಡುವುದೇ ನಮ್ಮ ಕೆಲಸ ಎಂದಿದ್ದ ಬಿಜೆಪಿ ಸಚಿವ ಅನಂತ್ ಕುಮಾರ್ ಹೆಗಡೆ ಸೇರಿದಂತೆ, ವಿವಾದಾತ್ಮಕ, ಅಸಂಬದ್ಧ ಹೇಳಿಕೆ ನೀಡುವ ಹಲವರನ್ನು ಈ ಸಂದರ್ಭದಲ್ಲಿ ಅವರು ಟೀಕಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+