• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡಿಸೆಂಬರ್ 11ರವರೆಗೆ ತೃಪ್ತಿ ದೇಸಾಯಿಗೆ ಶಿರಡಿ ಪ್ರವೇಶ ನಿರ್ಬಂಧ

|
Google Oneindia Kannada News

ಶಿರಡಿ, ಡಿಸೆಂಬರ್ 09: ಡಿಸೆಂಬರ್ 11ರವರೆಗೆ ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿಗೆ ಶಿರಡಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಭಕ್ತರಿಗೆ ಸಾಂಪ್ರದಾಯಿಕ ಉಡುಪು ಧರಿಸುವಂತೆ ಕೋರಿ ದೇವಾಲಯದ ಅಧಿಕಾರಿಗಳು ಹಾಕಿದ ಬೋರ್ಡ್‌ಗಳನ್ನು ತೆಗೆದುಹಾಕುವುದಾಗಿ ಬೆದರಿಕೆ ಹಾಕಿದ್ದ ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಅವರಿಗೆ ಡಿಸೆಂಬರ್ 11 ರವರೆಗೆ ಶಿರಡಿಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ, ದೇಸಾಯಿ ಅವರಿಗೆ ಮಂಗಳವಾರ ಸಿಆರ್‌ಪಿಸಿಯ ಸೆಕ್ಷನ್ 144 ರ ಅಡಿಯಲ್ಲಿ ನೋಟಿಸ್ ನೀಡಲಾಗಿದೆ. ಡಿಸೆಂಬರ್ 11 ರವರೆಗೆ ಶಿರಡಿ ಪುರಸಭೆಯ ವ್ಯಾಪ್ತಿಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ಶಿಂಧೆ ಹೇಳಿದರು.

ಕಾನೂನು ಸುವ್ಯವಸ್ಥೆ ಸ್ಥಿತಿಯನ್ನು ಉಲ್ಲೇಖಿಸಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಗೋವಿಂದ್ ಶಿಂಧೆ ದೇಸಾಯಿ ಅವರಿಗೆ ನೋಟಿಸ್ ನೀಡಿದ್ದು, ಡಿಸೆಂಬರ್ 8 ಮಧ್ಯರಾತ್ರಿಯಿಂದ ಡಿಸೆಂಬರ್ 11 ಮಧ್ಯರಾತ್ರಿಯವರೆಗೆ.ಅಹ್ಮದ್‌ನಗರ ಜಿಲ್ಲೆಯಲ್ಲಿರುವ ಶಿರಡಿಗೆ ಪ್ರವೇಶಿಸದಂತೆ ಹೇಳಲಾಗಿದೆ.

ಆಕ್ಷೇಪಾರ್ಹ ಉಡುಪು ಧರಿಸಿಕೆಲವರು ದೇಗುಲಕ್ಕೆ ಬರುತ್ತಾರೆ ಎಂಬ ದೂರುಗಳ ಹಿನ್ನೆಲೆ ಟ್ರಸ್ಟ್ ದೇವಾಲಯದ ಆವರಣದ ಹೊರಗೆ ಬೋರ್ಡ್‌ಗಳನ್ನು ಹಾಕಿದ್ದು ಭಕ್ತರನ್ನು ಸುಸಂಸ್ಕೃತ ರೀತಿಯಲ್ಲಿ ಅಥವಾ ಭಾರತೀಯ ಸಂಸ್ಕೃತಿಯ ಪ್ರಕಾರ ಉಡುಪು ಧರಿಸಿ ಬನ್ನಿ ಎಂದು ಮನವಿ ಮಾಡಿತು. ಆದಾಗ್ಯೂ, ಟ್ರಸ್ಟ್‌ನ ಹಿರಿಯ ಅಧಿಕಾರಿಯೊಬ್ಬರು ತಾವು ಯಾವುದೇ ಡ್ರೆಸ್ ಕೋಡ್ ಅನ್ನು ಭಕ್ತರಿಗೆ ವಿಧಿಸಿಲ್ಲ ಅಲ್ಲದೆ ಹಾಕಿರುವ ಸಂದೇಶವು ಕೇವಲ ಮನವಿಯಾಗಿದೆ ಎಂದು ಸ್ಪಷ್ಟಪಡಿಸಿದರು.

ಭಕ್ತರಿಗೆ ಸಾಂಪ್ರದಾಯುಕ ರೀತಿಯಲ್ಲಿ ಉಡುಗೆ ತೊಟ್ಟು ಬರುವಂತೆ ಮನವಿ ಮಾಡಿರುವ ಬಗ್ಗೆ ಶಿರಡಿ ಸಾಯಿಬಾಬಾ ಟೆಂಪಲ್ ಟ್ರಸ್ಟ್‌ಗೆ ಎಚ್ಚರಿಕೆ ನೀಡಿರುವ ತೃಪ್ತಿ ದೇಸಾಯಿ ವಿವಾದಾತ್ಮಕ ಸಂದೇಶವನ್ನು ಹೊತ್ತ ಬೋರ್ಡ್‌ಗಳನ್ನು ತೆಗೆದುಹಾಕದಿದ್ದರೆ ಡಿಸೆಂಬರ್ 10 ರಂದು ತಾನು ಹಾಗೂ ಇತರ ಕಾರ್ಯಕರ್ತರು ಶಿರಡಿಗೆ ಬಂದು ಅದನ್ನು ತೆರವು ಮಾಡುವುದಾಗಿ ಹೇಳಿದ್ದರು.

English summary
Social activist Trupti Desai has been barred from entering Maharashtra's temple town of Shirdi till December 11 after she threatened to remove boards put up by shrine officials asking devotees to dress in a "civilised" manner, an official said on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X