Virat Kohli: ಮೀಟರ್ ಇದ್ರೆ ರನ್ ಔಟ್ ಮಾಡು: ಪಂಜಾಬ್ ಸ್ಟಾರ್ ಬೌಲರ್‌ಗೆ ಕೊಹ್ಲಿ ತಮಾಷೆಯ ಖಡಕ್ ರಿಯಾಕ್ಷನ್, ಭಾರಿ ವೈರಲ್
Virat Kohli: ಧರ್ಮಶಾಲಾದಲ್ಲಿ ಭಾನುವಾರ (ಮೇ 17) ನಡೆದ ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯವು ಕೇವಲ ಬ್ಯಾಟ್ ಮತ್ತು ಬಾಲ್ ನಡುವಿನ ಹೋರಾಟವಾಗಿರದೆ, ಮೈದಾನದಲ್ಲಿ ಆಟಗಾರರ ನಡುವಿನ ತಮಾಷೆಯ ವಾಕ್ಸಮರಕ್ಕೂ ಸಾಕ್ಷಿಯಾಯಿತು. ವಿರಾಟ್ ಕೊಹ್ಲಿ ಮತ್ತು ಪಂಜಾಬ್ ಸ್ಪಿನ್ನರ್ ಹರ್‌ಪ್ರೀತ್ ಬ್ರಾರ್ ನಡುವೆ ನಡೆದ ದೃಶ್ಯವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಪಂದ್ಯದ 9ನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ ರನ್ ಓಡಲು ಮುಂದಾದಾಗ ಬ್ರಾರ್ ಚೆಂಡನ್ನು ತಡೆದು ರನ್ ಔಟ್ ಮಾಡಲು ಯತ್ನಿಸಿದರು. ಈ ವೇಳೆ ಕೊಹ್ಲಿ ಗಾಬರಿಯಾಗದೆ ಬ್ರಾರ್ ಅವರ ಕಡೆ ತಿರುಗಿ ದಿಟ್ಟಿಸಿ ನೋಡುತ್ತಾ ಔಟ್ ಮಾಡು ನೋಡೋಣ ಎಂದು ಹೇಳಿದಂತಿತ್ತು. ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಬ್ರಾರ್‌ಗೆ ವಿರಾಟ್ ಕೊಹ್ಲಿ ವಾರ್ನ್
ನಂತರದ ಓವರ್‌ಗಳಲ್ಲಿ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಹರ್‌ಪ್ರೀತ್ ಬ್ರಾರ್ ಅವರ ಬೌಲಿಂಗ್‌ನಲ್ಲಿ ರನ್ ಗಳಿಸಲು ಸ್ವಲ್ಪ ಪರದಾಡಿದರು. ಬ್ರಾರ್ ಜೇಕಬ್ ಬೆಥೆಲ್ ಅವರ ವಿಕೆಟ್ ಪಡೆದಾಗ ಏನೋ ಸಾಧಿಸಿದ ರೀತಿಯಲ್ಲಿ ಸಂಭ್ರಮಿಸುತ್ತಿದ್ದರು. ಇದನ್ನ ಗಮನಿಸಿದ ಕೊಹ್ಲಿ ರನ್ ಚೇಸ್ ಮಾಡುವ ವೇಳೆ ಅವರಿಗೆ ಟಾಂಗ್ ನೀಡಿದರು. ನಾನು ಈ ಫೀಲ್ಡ್‌ಗೆ ಹೊಸಬನಲ್ಲ ಎಂದು ಹೇಳಿದಂತಿತ್ತು. ಬಳಿಕ ಹರ್‌ಪ್ರೀತ್ ಬ್ರಾರ್ ಮೌನವಾಗಿ ನಗುತ್ತಾ ಮುಂದೆ ಸಾಗಿದರು. ಇದು ಕೊಹ್ಲಿ ಅವರ ಅನುಭವ ಮತ್ತು ಆತ್ಮವಿಶ್ವಾಸವನ್ನು ಎತ್ತಿ ತೋರಿಸುವಂತಿತ್ತು.
ಭರ್ಜರಿ ಅರ್ಧಶತಕ ಸಿಡಿಸಿದ ಕೊಹ್ಲಿ
ಈ ತಮಾಷೆಯ ಕಿತ್ತಾಟದ ನಡುವೆಯೂ ವಿರಾಟ್ ಕೊಹ್ಲಿ ತಮ್ಮ ಅದ್ಭುತ ಫಾರ್ಮ್ ಮುಂದುವರಿಸಿದರು. ಕೇವಲ 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಒಟ್ಟಾರೆ 37 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್‌ಗಳ ಸಹಿತ 58 ರನ್ ಗಳಿಸಿದರು. ಅಂತಿಮವಾಗಿ ಯಜ್ವೇಂದ್ರ ಚಹಾಲ್ ಬೌಲಿಂಗ್‌ನಲ್ಲಿ ಅವರು ಔಟಾದರು. ಈ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಸಾಧಿಸುವುದರೊಂದಿಗೆ ಅಧಿಕೃತವಾಗಿ ಪ್ಲೇ-ಆಫ್‌ಗೆ ಲಗ್ಗೆ ಇಟ್ಟಿತು. ಒಟ್ಟಿನಲ್ಲಿ ಕೊಹ್ಲಿ ಮತ್ತು ಬ್ರಾರ್ ನಡುವಿನ ಈ ತಮಾಷೆಯ ಸವಾಲು ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ನೀಡಿದಂತೂ ನಿಜ.
ವಿರಾಟ್ ಕೊಹ್ಲಿ ಅವರು ಈ ಇನ್ನಿಂಗ್ಸ್ ಮೂಲಕ ಅವರು 2026ರ ಸೀಸನ್‌ನಲ್ಲಿ 500ಕ್ಕೂ ಅಧಿಕ ರನ್‌ಗಳ ಗಡಿ ದಾಟಿದರು. ಕೊಹ್ಲಿಯ ಈ ಪ್ರದರ್ಶನದಿಂದ ಆರ್‌ಸಿಬಿ ಅಂಕಪಟ್ಟಿಯಲ್ಲಿ ತನ್ನ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಪ್ಲೇ-ಆಫ್ ಸಮೀಪಿಸುತ್ತಿರುವಾಗ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಗಾಯಗೊಂಡಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಆದರೆ ಟಾಸ್ ವೇಳೆ ಮಾತನಾಡಿದ ಹಂಗಾಮಿ ನಾಯಕ ಜಿತೇಶ್ ಶರ್ಮಾ, "ಪಾಟಿದಾರ್ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಮೇ 22ರಂದು ಹೈದರಾಬಾದ್ ವಿರುದ್ಧ ನಡೆಯಲಿರುವ ಅಂತಿಮ ಲೀಗ್ ಪಂದ್ಯಕ್ಕೆ ಅವರು ಲಭ್ಯವಿರುತ್ತಾರೆ," ಎಂದು ಹೇಳಿದರು.












Click it and Unblock the Notifications